Wednesday, 23rd May 2018

Recent News

5 months ago

ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ

ತುಮಕೂರು: ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಪರಸ್ಪರ ಏಕ ವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಆದ್ರೆ ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಬಿ.ಸುರೇಶ್ ಗೌಡರು ಮಾತ್ರ ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಶಕರು ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಾಗಿ ಶೇರ್ ಮಾಡುತ್ತಿದ್ದು, ಮತ್ತು ಬಿಜೆಪಿಯ ಕಾಲೆಳೆಯಲು ಈ ವಿಡಿಯೋವನ್ನು ಬಳಸಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಏನಿದೆ?: […]

5 months ago

ಜಗಳವಾಡಿ ಮನೆ ಬಿಟ್ಟು ಹೋಗ್ತಿದ್ದ ಹೆಂಡ್ತಿಗೆ ಚಿನ್ನದ ಒಡವೆ ಕೊಡು ಎಂದ ಪತಿ- ನಡುಬೀದಿಯಲ್ಲಿ ರಂಪಾಟ

ತುಮಕೂರು: ಒಡವೆ ವಿಚಾರವಾಗಿ ನಡು ಬೀಡಿಯಲ್ಲಿ ಗಂಡ-ಹೆಂಡತಿ ಜಗಳವಾಡಿರುವ ಘಟನೆ ಜಿಲ್ಲೆಯ ಸರಸ್ವತಿಪುರಂನಲ್ಲಿ ನಡೆದಿದೆ. ತುಮಕೂರು ನಗರದ ಸರಸ್ವತಿಪುರಂ ನಿವಾಸಿಗಳಾದ ವಿನೋದಾ, ರಾಜು ಬೀದಿಯಲ್ಲಿ ಜಗಳ ಮಾಡಿಕೊಂಡ ದಂಪತಿ. ವಿನೋದಾ ಪತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದು, ಈ ಸಂದರ್ಭದಲ್ಲಿ ವಿನೋದಾ ಆಟೋ ಹತ್ತಿ ಕುಳಿತ್ತಿದ್ದಾರೆ. ಆದರೆ ಪತ್ನಿಯನ್ನ ತಡೆಯಲು ರಾಜು ಮುಂದಾಗಿದ್ದು, ತಾನು ಆಟೋ...

ನಾಡಗೀತೆ ವೇಳೆ ಚೂಯಿಂಗ್ ಗಮ್ ಜಗಿದ ಮಹಿಳಾ ಐಎಎಸ್ ಅಧಿಕಾರಿ

5 months ago

ತುಮಕೂರು: ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಐಎಎಸ್ ಪ್ರೊಬೇಷನರಿ ಅಧಿಕಾರಿಯೊಬ್ಬರು ನಾಡಗೀತೆಗೆ ಅಗೌರವ ತೋರಿರುವ ಘಟನೆ ಜಿಲ್ಲೆಯ ಶಿರಾ ಪಟ್ಟಣದಲ್ಲಿ ನಡೆದಿದೆ. ಶಿರಾ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸುವ ಕಾರ್ಯಕ್ರಮ...

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಟೀ ವ್ಯಾಪಾರಿಯ ಬಲಗಾಲು ಕಟ್

5 months ago

ತುಮಕೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ರೈಲಿನಲ್ಲಿ ಚಹಾ ವ್ಯಾಪಾರ ಮಾಡ್ತಿದ್ದ ಯುವಕನ ಕಾಲು ತುಂಡಾದ ಘಟನೆ ತುಮಕೂರಿನ ತಿಪಟೂರು ತಾಲೂಕಿನ ಹೊನ್ನವಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಕಾಲು ಕಳೆದುಕೊಂಡ ಯುವಕ 20 ವರ್ಷದ ನರಸಿಂಹ ಎಂದು ತಿಳಿದುಬಂದಿದೆ. ಹುಬ್ಬಳಿಯಿಂದ ಬೆಂಗಳೂರಿಗೆ ಹೋಗ್ತಿದ್ದ...

ರಸ್ತೆಗೆ ಟೊಮೆಟೊ ಚೆಲ್ಲಿ ರೈತರ ಪ್ರತಿಭಟನೆ

5 months ago

ತುಮಕೂರು: ರಾಜ್ಯದಲ್ಲಿ ಮಹದಾಯಿ ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಟೊಮೆಟೊ ಬೆಲೆ ಪಾತಾಳಕ್ಕಿಳಿದಿದ್ದರಿಂದ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಪಾವಗಡದ ರೈತರು ರಸ್ತೆ ಮೇಲೆ ಟೊಮೆಟೊ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಟೊಮೆಟೊ ಬೆಲೆ ಕೆಜಿಗೆ 5-6 ರೂ....

ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿದ ತಾಯಿ -ಮಕ್ಕಳ ಸಾವು

5 months ago

ತುಮಕೂರು: ಮದ್ಯವ್ಯಸನಿ ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿದ ಘಟನೆ ತುಮಕೂರು ಜಿಲ್ಲೆ ಶಿರಾದ ತಾವರೆಕೆರೆಯಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ ವಿದ್ಯಾ, 5 ವರ್ಷದ ಭವ್ಯಾ ಮೃತಪಟ್ಟಿದ್ದಾರೆ. ತಾಯಿ ಸುಹಾಸಿನಿ ಸಾವು...

ಮನೆ ನಿರ್ಮಾಣಕ್ಕೆ ಅನುಮತಿ ಕೊಟ್ಟು ಈಗ ನಿರ್ಮಾಣ ಅನಧಿಕೃತ ಎಂದ ಪಾಲಿಕೆ

5 months ago

ತುಮಕೂರು: ಗುಡಿಸಲಲ್ಲಿದ್ದ ಆ ಕುಟುಂಬ ಹಾಗೋ ಹೀಗೋ ಪುಟ್ಟ ಸೂರೊಂದನ್ನು ಕಟ್ಟಿಕೊಳ್ಳುತ್ತಿತ್ತು. ಆದರೆ ಈಗ ಮನೆ ನಿರ್ಮಾಣಕ್ಕೆ ಅನುಮತಿ ಕೊಟ್ಟ ಪಾಲಿಕೆಯೇ ಮನೆ ನಿರ್ಮಾಣ ಅನಧಿಕೃತ ಎಂದು ಹೇಳುತ್ತಿದೆ. ತುಮಕೂರಿನ ಮಾರುತಿ ನಗರದಲ್ಲಿ ಮೋಸಸ್ ಅರೋನ್ ಎಂಬವರು 30*40 ಸೈಟ್ ನಲ್ಲಿ...

ಸೇತುವೆಗೆ ಡಿಕ್ಕಿ ಹೊಡೆದ ಕ್ರೂಸರ್ – ಸ್ಥಳದಲ್ಲೇ ಇಬ್ಬರ ಸಾವು

5 months ago

ತುಮಕೂರು: ಕ್ರೂಸರ್ ವಾಹನ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ. ಮಂಜುನಾಥ್(35), ಮೊಹಮ್ಮದ್ ನೇಮತ್ ಉಲ್ಲಾ (42) ಮೃತ ದುರ್ದೈವಿಗಳಾಗಿದ್ದು, ಮೂಲತಃ ಶಿವಮೊಗ್ಗ ಮೂಲದವರು ಎಂದು ತಿಳಿದು...