Wednesday, 23rd May 2018

Recent News

4 months ago

ದುಷ್ಕರ್ಮಿಗಳಿಂದ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

ಶಿವಮೊಗ್ಗ: ಸೋಮವಾರ ರಾತ್ರಿ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. 32 ವರ್ಷದ ಆಸೀಫ್ ಹಲ್ಲೆಗೊಳಗಾದ ಗ್ರಾ.ಪಂ. ಸದಸ್ಯ. ಸೋಮವಾರ ರಾತ್ರಿ ಗವಟೂರಿನಲ್ಲಿರುವ ತಮ್ಮ ಮನೆಗೆ ಹೋಗುವಾಗ ಎರಡು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತೀವ್ರವಾಗಿ ಥಳಿಸಿ ಪರಾರಿ ಆಗಿದ್ದಾರೆ. ಗಾಯಗೊಂಡಿದ್ದ ಆಸೀಫ್ ನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆಸೀಫ್ ಒಂದು ತಿಂಗಳ ಹಿಂದೆ ದಲಿತ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋಗಿದ್ದನು. ಇತ್ತೀಚೆಗೆ ಜಾಮೀನಿನ […]

4 months ago

ಕರವೇ ಜಿಲ್ಲಾಧ್ಯಕ್ಷನ ಕಿರುಕುಳ ಆರೋಪ- ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ

ಶಿವಮೊಗ್ಗ: ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ್ ಕೊಟ್ಯಾನ್ ಕಿರುಕುಳಕ್ಕೆ ಬೇಸತ್ತು ಆಟೋ ಚಾಲಕರೊಬ್ಬರು ಸೆಲ್ಫಿ ವಿಡಿಯೋ ಮಾಡಿ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಟಿಪ್ಪುನಗರದ ಆಟೋ ಚಾಲಕ ನೂರುಲ್ಲಾ ಆತ್ಮಹತ್ಯೆಗೆ ಯತ್ನಿಸಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಕೊಟ್ಯಾನ್ ಹಾಗೂ ಶಬ್ಬೀರ್ ಎಂಬವರು...

ಬಶೀರ್ ಹತ್ಯೆ ಖಂಡಿಸಿ ಬಿಜೆಪಿಯವರೇಕೆ ಬೀದಿಗಿಳಿದಿಲ್ಲ- ಸಿಎಂ ಪ್ರಶ್ನೆ

5 months ago

ಶಿವಮೊಗ್ಗ: ಶವದ ಮೇಲೆ ರಾಜಕೀಯ ಮಾಡುವುದನ್ನು ಆರ್ ಎಸ್‍ಎಸ್ ಮತ್ತು ಭಜರಂಗ ದಳ ಬಿಡಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಶೀರ್ ಹತ್ಯೆ ಸಂಬಂಧ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಂಗಳೂರಿನಲ್ಲಿ ಮುಸ್ಲಿಂ ಯುವಕ ಮೃತಪಟ್ಟಿದ್ದು ಇದಕ್ಕೆ ಯಾಕೆ ಬಿಜೆಪಿಯವರು ಪ್ರತಿಭಟನೆ...

ಸಿಎಂ ಮೆಚ್ಚಿಸಲು ಪೊಲೀಸರ ಕ್ರೌರ್ಯ – ಕ್ಯಾಮರಾ ಕಿತ್ಕೊಂಡು ಮಾಧ್ಯಮಗಳ ಮೇಲೆ ದರ್ಪ

5 months ago

ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ನಾನಾ ಕಡೆ ನಡೆಸುತ್ತಿರುವ ಸಾಧನಾ ಸಮಾವೇಶದ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ಹೋಗಿದೆ. ಪ್ರತಿಭಟನೆ ನಡೆದರೂ ಯಾವುದೇ ಮಾಧ್ಯಮಗಳಲ್ಲಿ ಅದು ಬರದಂತೆ ನೋಡಿಕೊಳ್ಳುವ ಹೊಣೆಯನ್ನೂ ಪೊಲೀಸ್...

ಮಾರಿಹಬ್ಬಕ್ಕೆ ತಂದಿದ್ದ ಕೋಣಗಳಿಗೆ ರಾತ್ರಿಯಿಡೀ ಪೊಲೀಸ್ ಕಾವಲು

5 months ago

ಶಿವಮೊಗ್ಗ: ಮಾರಿಹಬ್ಬಕ್ಕೆ ಬಲಿ ಕೊಡುತ್ತಾರೆ ಎಂಬ ಕಾರಣದಿಂದ ಎರಡು ಕೋಣಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಕೋಮಾರನಹಳ್ಳಿಯಲ್ಲಿ ನಡೆದಿದೆ. ಪೊಲೀಸರು ಕೋಣಗಳನ್ನು ವಶಕ್ಕೆ ಪಡೆದುಕೊಂಡ ಬಳಿಕ ಗ್ರಾಮಸ್ಥರು ಠಾಣೆಯ ಮುಂದೆ ಪ್ರತಿಭಟನೆ ಮಾಡಿದ ಘಟನೆಯೂ ನಡೆದಿದೆ....

ಹಾವು ಹಿಡಿಯೋ ದಿನನಿತ್ಯದ ವೃತ್ತಿ ಜೊತೆಗೆ ಅನಾಥ ಜೀವಗಳನ್ನು ಪೋಷಿಸ್ತಿದ್ದಾರೆ ಶಿವಮೊಗ್ಗದ ಜೇನಿ ಪ್ರಭಾಕರ್

5 months ago

ಶಿವಮೊಗ್ಗ: ಸರ್ಕಾರಿ ಅನುದಾನ ಪಡೆದು, ಅವರಿವರಿಂದ ಕೊಡುಗೆ ಪಡೆದು ಆಶ್ರಮ ನಡೆಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ಸರ್ಪಗಳ ಸಹವಾಸ ಮಾಡಿ ಅನಾಥರನ್ನು ಸಾಕುತ್ತಿದ್ದಾರೆ. ಶಿವಮೊಗ್ಗದ ಜೇನಿ ಪ್ರಭಾಕರ್ ಅವರೇ ನಮ್ಮ ಪಬ್ಲಿಕ್ ಹೀರೋ. ನೂರಾರು ಮಂದಿಗೆ ಆಸರೆ ನೀಡಿದ್ದ ಈ ಶಿವಮೊಗ್ಗದ...

ಹಫ್ತಾ ವಸೂಲಿ ಮಾಡಿ ಸಿಕ್ಕಿಬಿದ್ದ ಪತ್ರಿಕೆ ಸಂಪಾದಕ!

5 months ago

ಶಿವಮೊಗ್ಗ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒಡೆತನದ ಪತ್ರಿಕೆಯೊಂದರ ಸಂಪಾದಕ ಡಿ.ಸೋಮಸುಂದರಂ ಪೊಲೀಸ್ ಇಲಾಖೆ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡಿ ಸಿಕ್ಕಿಬಿದ್ದಿದ್ದಾರೆ. ಶಿವಮೊಗ್ಗ ಜಿಲ್ಲಾ ಕ್ವಾರಿ ಹಾಗೂ ಕ್ರಷರ್ ಮಾಲೀಕರ ಸಂಘದ ಖಚಾಂಜಿಯೂ ಆಗಿರುವ ಸೋಮ ಸುಂದರಂ ಮತ್ತು ಸಂಘದ...

ಮಗಳು ಲವ್ ಜಿಹಾದ್ ಗೆ ಸಿಲುಕಿದ್ದಾಳೆಂದು ಪೋಷಕರ ದೂರು

5 months ago

ಶಿವಮೊಗ್ಗ: ಮೈಸೂರಿನಲ್ಲಿ ಪ್ರೀತಿಸಿ ಮದುವೆಯಾದ ಯುವತಿ ಲವ್ ಜಿಹಾದ್ ಗೆ ಸಿಲುಕಿದ್ದಾಳೆ ಎಂದು ಆಕೆಯ ಪೋಷಕರು ದೂರಿದ್ದಾರೆ. ಶಿವಮೊಗ್ಗದ ಸಂಗೀತ ವಿದ್ವಾನ್ ಅರವಿಂದ್ ಹೆಗಡೆ- ಆಶಾ ದಂಪತಿಯ ಪುತ್ರಿ ಅನುಷಾ ಹೆಗಡೆ ಲವ್ ಜಿಹಾದ್ ಗೆ ಸಿಲುಕಿರುವ ಯುವತಿ. ಮೂಲತಃ ಶಿವಮೊಗ್ಗದವರಾದ...