Friday, 25th May 2018

Recent News

3 weeks ago

ಜೆಡಿಎಸ್ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡೋದು ಯಾಕೆ: ಕಾರಣ ತಿಳಿಸಿದ ಮಧು ಬಂಗಾರಪ್ಪ

ಶಿವಮೊಗ್ಗ: ಅಲ್ಪ ಸಂಖ್ಯಾತ, ಹಿಂದುಳಿದ ವರ್ಗಗಳ ಮತ ಜೆಡಿಎಸ್‍ಗೆ ಹೋಗುತ್ತದೆ ಎನ್ನುವ ಭಯದಿಂದ ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಜೆಡಿಎಸ್‍ಗೆ ಯಾವುದೇ ಪಕ್ಷದೊಂದಿಗೆ ಕೈ ಜೋಡಿಸುವ ಅಗತ್ಯವಿಲ್ಲ. ರಾಜ್ಯದಲ್ಲಿ ಜೆಡಿಎಸ್ ಪರ ಉತ್ತಮ ವಾತಾವರಣವಿದ್ದು ಅಧಿಕಾರಕ್ಕೆ ಬರುವುದು ಶತಸಿದ್ಧ. ಪ್ರಾದೇಶಿಕ ಪಕ್ಷಕ್ಕೆ ಈ ಬಾರಿ ಖಂಡಿತ ಅವಕಾಶ ಇದೆ ಎಂದು ಹೇಳಿದರು. ಬಿಜೆಪಿಯೊಂದಿಗೆ ಮೈತ್ರಿ ಕುರಿತಂತೆ, ಕಾಂಗ್ರೆಸ್ ನವರ ಆರೋಪಕ್ಕೆ ದೇವೆಗೌಡರೇ ಸ್ಪಷ್ಟಪಡಿಸಿದ್ದಾರೆ. ಮೈತ್ರಿಗೆ ಮುಂದಾದರೆ ಕುಮಾರಸ್ವಾಮಿ ಅವರನ್ನು ಕುಟುಂಬದಿಂದಲೇ […]

4 weeks ago

ವೋಟ್ ಹಾಕದಿದ್ರೆ ಭದ್ರಾವತಿ ಸ್ಟೈಲ್ ತೋರಿಸ್ಬೇಕಾಗುತ್ತೆ: ಶಾಸಕ ಅಪ್ಪಾಜಿ ಗೌಡ ಧಮ್ಕಿ

ಶಿವಮೊಗ್ಗ: ಭದ್ರಾವತಿ ಶಾಸಕ ಅಪ್ಪಾಜಿಗೌಡ ಫೋನಿನಲ್ಲಿ ಧಮ್ಕಿ ಹಾಕಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಂಘಟನೆಯೊಂದರ ಮುಖಂಡನಿಗೆ ಕರೆ ಮಾಡಿ ಮಾತನಾಡಿರೋ ಅಪ್ಪಾಜಿಗೌಡ, ನನಗೆ ಓಟ್ ಹಾಕದೇ ಹೋದ್ರೆ ಎಲ್ಲಿ ನೋಡ್ಕೋಬೇಕೋ ಅಲ್ಲಿ ನೋಡ್ಕೋತಿನಿ. ಎಲ್ಲರನ್ನು ಇರಲಿ ಅಂತ ಫ್ರೀ ಬಿಟ್ಟಿದ್ದೀನಿ. ಎಲೆಕ್ಷನ್ ಆಗಲಿ ಗೊತ್ತಲ ಭದ್ರವಾತಿ ಸ್ಟೈಲ್ ತೋರಿಸದಿದ್ರೆ ಅಂತ ಹಳೇ ಸ್ಟೈಲ್‍ನಲ್ಲಿ ಧಮ್ಕಿ ಹಾಕಿರೋ...

ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ

4 weeks ago

ಶಿವಮೊಗ್ಗ: ವರುಣಾ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಟಿಕೆಟ್ ತಪ್ಪಿಕ್ಕೆ ವಿಶೇಷ ಕಾರಣವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿಜಯೇಂದ್ರ ಕೂಡ ಸಂತೋಷದಿಂದ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ವಿಶೇಷ ಕಾರಣದಿಂದ...

ರಾಜಕೀಯ ಯುದ್ಧ ಕಾಲದಲ್ಲಿ ಮಾಜಿ ಸಿಎಂ ಸೈಲೆಂಟ್-ಪ್ರಚಾರಕ್ಕೂ ಹೋಗದೇ ಮನೆಯಲ್ಲಿ ಕುಳಿತ ಬಿಎಸ್‍ವೈ

4 weeks ago

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಚಾರಕ್ಕೂ ತೆರಳದೇ ಶಿಕಾರಿಪುರದ ಮನೆಯಲ್ಲಿ ಕುಳಿತಕೊಂಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪುತ್ರ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡ ಯಡಿಯೂರಪ್ಪ ಮನೆಯಲ್ಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಪುತ್ರ ವಿಜಯೇಂದ್ರ ಟಿಕೆಟ್...

ಬಿಜೆಪಿ ಹೈಕಮಾಂಡ್ ವಿರುದ್ಧ ಈಶ್ವರಪ್ಪ ಗರಂ!

1 month ago

ಶಿವಮೊಗ್ಗ: ವರುಣಾ ಕ್ಷೇತ್ರದ ಕುರಿತು ವರಿಷ್ಟರು ಮುಂಚೆಯೇ ತಿಳಿಸಿದ್ದರೆ, ವಿಜಯೇಂದ್ರ ವರುಣಾಕ್ಕೆ ತೆರಳುತ್ತಿರಲಿಲ್ಲ. ಈಗ ವರುಣಾದಲ್ಲಿ ಏರ್ಪಟ್ಟಿದ್ದ ಗೊಂದಲ ಬಗೆ ಹರಿದಿದೆ ಅಂತ ಅಮಿತ್ ಶಾ ಸಂದಾನ ಬಳಿಕ ಮೊದಲ ಬಾರಿ ಬಿಎಸ್‍ವೈ ಮನೆಗೆ ಭೇಟಿ ಕೊಟ್ಟ ಈಶ್ವರಪ್ಪ ಹೇಳಿದರು. ಬಾದಾಮಿ...

ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಯಶವಂತಪುರದಿಂದ ಜಗ್ಗೇಶ್ ಕಣಕ್ಕೆ

1 month ago

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ 4ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಬದಾಮಿ, ವರುಣಾ ಕ್ಷೇತ್ರದಿಂದ ಇನ್ನೂ ಟಿಕೆಟ್ ಫೈನಲ್ ಆಗಿಲ್ಲ. ಯಶವಂತಪುರದಿಂದ ಜಗ್ಗೇಶ್, ಬೇಲೂರಿನಿಂದ ಎಚ್.ಕೆ.ಸುರೇಶ್, ಹಾಸನದಿಂದ ಪ್ರೀತಂ ಗೌಡ, ರಾಮನಗರ...

4 ದಿನದ ಗಂಡು ಮಗುವನ್ನು ಚರಂಡಿ ಪಕ್ಕ ಇಟ್ಟುಹೋದ ಮಹಿಳೆ-ವಿಡಿಯೋ

1 month ago

ಶಿವಮೊಗ್ಗ: ಮಹಿಳೆಯೊಬ್ಬಳು ನಾಲ್ಕು ದಿನದ ಗಂಡು ಮಗುವನ್ನು ರಸ್ತೆ ಬದಿ ಇಟ್ಟು ಹೋದ ಘಟನೆ ಶಿವಮೊಗ್ಗದ ಪೆನ್ಷನ್ ಮಹಲ್ಲಾ ಎರಡನೇ ತಿರುವಿನಲ್ಲಿ ನಡೆದಿದೆ. ಇಂದು ಮುಂಜಾನೆ 5.45ರ ವೇಳೆಯಲ್ಲಿ ಮಹಿಳೆ ಹಾಗೂ ಒಬ್ಬ ಪುರುಷ ಮಗುವನ್ನು ಚರಂಡಿ ಪಕ್ಕ ಇಟ್ಟು ಹೋಗಿದ್ದಾರೆ....

ಸೋರಿಕೆಯಾದ ಸಿಲಿಂಡರ್ ಹೊರಗೆ ತರುವಾಗ ಸ್ಫೋಟ – ರಸ್ತೆ ಬದಿ ನೋಡುತ್ತಾ ನಿಂತಿದ್ದ ಮಹಿಳೆ ದುರ್ಮರಣ

1 month ago

ಶಿವಮೊಗ್ಗ: ಸಿಲಿಂಡರ್ ಸ್ಫೋಟಗೊಂಡು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಭದ್ರಾವತಿಯ ಕೂಲಿ ಬ್ಲಾಕ್ ಶೆಡ್ ನಲ್ಲಿ ನಡೆದಿದೆ. ಸರಸ್ವತಿ ಮೃತಪಟ್ಟ ದುರ್ದೈವಿ. ಈ ಅವಘಡದಿಂದ ಗಾಯಗೊಂಡಿರುವ ಮೂವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರದ ನಿವಾಸಿ ಕಲಾ...