Tuesday, 24th April 2018

Recent News

9 months ago

ಶಿವಮೊಗ್ಗದ ಮೊರಾರ್ಜಿ ಶಾಲೆಯಲ್ಲಿ ಫುಡ್ ಪಾಯ್ಸನ್ – 25 ಮಕ್ಕಳು ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಗಾಜನೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ 25 ಮಕ್ಕಳು ರಾತ್ರಿ ಊಟದ ನಂತರ ತೀವ್ರ ಅಸ್ವಸ್ಥಗೊಂಡಿದ್ದಾರೆ. ಊಟದ ನಂತರ ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದು, ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಒಟ್ಟು 25 ಮಕ್ಕಳು ಅಸ್ವಸ್ಥಗೊಂಡಿದ್ದು, ಮೆಗ್ಗಾನ್ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಮೆಗ್ಗಾನ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಮತ್ತು ಡಿಹೆಚ್‍ಓ ಡಾ.ಹನುಮಂತಪ್ಪ ಆಸ್ಪತ್ರೆಗೆ […]

10 months ago

ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಎಸ್‍ವೈ ಮನೆಗೆ ಮುತ್ತಿಗೆ

ಶಿವಮೊಗ್ಗ: ಭಾನುವಾರದಂದು ಬಳ್ಳಾರಿಯಲ್ಲಿ ಶ್ರೀರಾಮುಲು ನಿವಾಸಕ್ಕೆ ಮುತ್ತಿಗೆ ಹಾಕಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಇವತ್ತು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಮಾಡಿಸಲು ಆಗ್ರಹಿಸಿದ ಕಾರ್ಯಕರ್ತರು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲು ಸಂಸದರು ವಿಫಲರಾಗಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ...

ರಸ್ತೆ ನಡುವೆಯೇ ಹೆಂಡ್ತಿಯನ್ನ ಕೊಚ್ಚಿ ಕೊಂದು ಸ್ಥಳದಲ್ಲೇ ಕೂತಿದ್ದ!

10 months ago

ಶಿವಮೊಗ್ಗ: ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ರಸ್ತೆ ಮಧ್ಯೆಯೇ ಕೊಚ್ಚಿ ಕೊಂದ ಘಟನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಇಂದು ಬೆಳಗ್ಗೆ ನಡೆದಿದೆ. ಕುಂಸಿಯ ಮಂಜುಳಾ ಕೊಲೆಯದ ದುರ್ದೈವಿ. ಈಕೆಯನ್ನು ಕೊಲೆ ಮಾಡಿದ ಗಂಡ ರಮೇಶನನ್ನು ಪೆÇಲೀಸರು ಬಂಧಿಸಿದ್ದಾರೆ. ಕುಂಸಿಯಲ್ಲಿ ಗಾರೆ...

ಮಲೆನಾಡಲ್ಲಿ ಮಳೆರಾಯನ ಅಬ್ಬರ – ಗಾಜನೂರಲ್ಲಿರುವ ತುಂಗಾ ಡ್ಯಾಂ ಭರ್ತಿ

10 months ago

ಶಿವಮೊಗ್ಗ: ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಮುಖ್ಯವಾಗಿ ಕೊಪ್ಪ, ಶೃಂಗೇರಿ ಹಾಗೂ ನದಿ ಸಾಗಿ ಬರುವ ತೀರ್ಥಹಳ್ಳಿ ತಾಲೂಕುಗಳಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ಗಾಜನೂರು ತುಂಗಾ ಡ್ಯಾಂ ಭರ್ತಿಯಾಗಿದೆ. ಡ್ಯಾಂನ 20 ಗೇಟುಗಳನ್ನೂ ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ....

ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

10 months ago

ಶಿವಮೊಗ್ಗ: ಪುರಾಣ ಪ್ರಸಿದ್ಧ ಯಾತ್ರ ಸ್ಥಳ ಕೊಡಚಾದ್ರಿಗೆ ಹೋಗುವಾಗ ಜೀಪ್ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತ ಮಹಿಳೆಯನ್ನು ಕೇರಳ ತ್ರಿಶ್ಯೂರ್ ಮೂಲದ 38 ವರ್ಷದ ಸರಿತಾ ಎಂದು ಗುರುತಿಸಲಾಗಿದೆ. ಜೀಪಿನಲ್ಲಿ ಇದ್ದ ಇನ್ನಿತರರಿಗೆ ಗಾಯಗಳಾಗಿದ್ದು, ಅವರನ್ನು...

ಫೇಸ್ಬುಕ್ ನಲ್ಲಿ ಕಾಗೋಡು ತಿಮ್ಮಪ್ಪರಿಗೆ ಅವಹೇಳನ- ಸಾಹಿತಿ ವಿರುದ್ಧ ದೂರು

10 months ago

ಶಿವಮೊಗ್ಗ: ಸಾಹಿತಿಯೊಬ್ಬರು ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅವಹೇಳನ ಮಾಡಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಾಹಿತಿ ಟಿ ಕೆ ದಯಾನಂದ ವಿರುದ್ಧ ಸಾಗರ ತಾಲೂಕು ಆರ್ಯ ಈಡಿಗ ಯುವ ವೇದಿಕೆ ದೂರು ನೀಡಿದೆ. ಏನಿದು ಪ್ರಕರಣ?:...

ಭಾರೀ ಮಳೆಗೆ ಕೊಚ್ಚಿ ಹೋಯ್ತು ರಸ್ತೆ: ಶಿವಮೊಗ್ಗ-ಹೊಸನಗರ-ಕೊಲ್ಲೂರು ಮಾರ್ಗ ಬಂದ್

11 months ago

ಶಿವಮೊಗ್ಗ/ರಾಯಚೂರು: ಶಿವಮೊಗ್ಗ ಜಿಲ್ಲೆಯಲ್ಲೀ ಭಾರೀ ಮಳೆಯಾಗುತ್ತಿದ್ದು ಹೊಸನಗರ ತಾಲೂಕಿನಲ್ಲಿ ಕಳೆದ 24 ತಾಸಿನಲ್ಲಿ 146 ಮಿಲಿ ಮೀಟರ್ ಮಳೆಯಾಗ್ತಿದೆ. ಶಿವಮೊಗ್ಗ-ಹೊಸನಗರ-ಕೊಲ್ಲೂರು ಮಾರ್ಗ ಬಂದ್ ಆಗಿದೆ.   ಹೊಸನಗರ ತಾಲೂಕು ಕೋಡುರು ಬಳಿ ಮಳೆ ನೀರಿನ ರಭಸಕ್ಕೆ ಸೇತುವ ಕಾಮಗಾರಿಗಾಗಿ ಮಾಡಿದ್ದ ತಾತ್ಕಾಲಿಕ...

ಕನ್ನಡಿಗನಿಂದಾಗಿ ಮಿಚಿಗನ್ ವಿವಿಯಲ್ಲಿ ವರ್ಗಿಸ್ ಕುರಿಯನ್ ಕಂಚಿನ ಪ್ರತಿಮೆ ಸ್ಥಾಪನೆ

11 months ago

ಬೆಂಗಳೂರು: ಭಾರತದ ಕ್ಷೀರಕ್ರಾಂತಿಯ ಪ್ರಮುಖ ಪಾತ್ರಧಾರಿ ವರ್ಗಿಸ್ ಕುರಿಯನ್ ಅವರ ಕಂಚಿನ ಪ್ರತಿಮೆ ಕನ್ನಡಿಗನಿಂದಾಗಿ  ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. ಮಿಚಿಗನ್ ವಿವಿಯ ಹಳೆ ವಿದ್ಯಾರ್ಥಿ ವರ್ಗಿಸ್ ಕುರಿಯನ್ ಅವರ ಕಂಚಿನ ಪ್ರತಿಮೆಯನ್ನು ವಿವಿಯ ಕಾಲೇಜು ಆಫ್ ಎಂಜಿನಿಯರಿಂಗ್ ಆಂಡ್ ಆಗ್ರಿಕಲ್ಚರ್...