Wednesday, 21st March 2018

Recent News

11 months ago

ಮದುವೆ ಮುಗಿಸಿ ಬರ್ತಿದ್ದ ವೇಳೆ ಪಲ್ಟಿ ಹೊಡೆದ ಬಸ್-60 ಜನ್ರಿಗೆ ಗಾಯ

ರಾಮನಗರ: ಮದುವೆ ಮುಗಿಸಿ ಹಿಂದಿರುಗುವ ವೇಳೆ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ 60 ಜನರು ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಬೆಜ್ಜರಹಳ್ಳಿ ಕಟ್ಟೆ ಗ್ರಾಮದ ಸಮೀಪ ನಡೆದಿದೆ. ಬುಧವಾರ ಕರೇನಹಳ್ಳಿ ಗ್ರಾಮದ ಗ್ರಾಮಸ್ಥರು ಮಾಗಡಿ ತಾಲೂಕಿನ ಕರ್ಲಳ್ಳಿ ಎತ್ತೋಕಲ್ಲು ಬಸವಣ್ಣನ ದೇವಾಲಯ ಬಳಿ ನಡೆಯುತ್ತಿದ್ದ ಮದುವೆಗೆ ಹೋಗಿದ್ದರು. ಮದುವೆ ಮುಗಿಸಿಕೊಂಡು ವಾಪಾಸ್ಸಾಗುವ ವೇಳೆ ಬಸ್ ಪಲ್ಟಿ ಹೊಡೆದಿದೆ. ಬಸ್ ನಲ್ಲಿ ಸುಮಾರು 60 ಜನರಿದ್ದು ಬಹುತೇಕವಾಗಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ […]

11 months ago

ದೇವರ ಹರಕೆ ಸೇವೆ ತೀರಿಸಲು ಹೋದವರಿಗೆ ಕಚ್ಚಿತು ಹೆಜ್ಜೇನು: 20 ಮಂದಿಗೆ ಗಾಯ

ರಾಮನಗರ: ದೇವರ ಹರಕೆಯ ಸೇವೆ ತೀರಿಸುವ ವೇಳೆ ಅಡುಗೆ ಮಾಡಲು ಹಾಕಿದ್ದ ಬೆಂಕಿಯ ಹೊಗೆಯಿಂದ ಹೆಜ್ಜೇನು ಹಿಂಡು ದಾಳಿ ನಡೆಸಿ 20 ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ರಾಮನಗರ ತಾಲೂಕಿನ ಅವ್ವೇರಹಳ್ಳಿಯಲ್ಲಿ ನಡೆದಿದೆ. ಅವ್ವೇರಹಳ್ಳಿ ಗ್ರಾಮದ ಹೊನ್ನಾದೇವಿ ದೇವತೆಯ ಸೇವೆಯನ್ನು ನಡೆಸಲಾಗುತ್ತಿತ್ತು. ಅಡುಗೆ ಮಾಡಲು ಬೆಂಕಿ ಹಾಕಿದ್ರಿಂದ ಹೊಗೆಯಿಂದ ಹೆಜ್ಜೇನುಗಳು ದಾಳಿ ನಡೆಸಿವೆ. ಘಟನೆಯಲ್ಲಿ...

ವ್ಯಕ್ತಿಯ ಪಾರ್ಶ್ವವಾಯು ನಿವಾರಣೆಗಾಗಿ 10 ವರ್ಷದ ಬಾಲಕಿಯನ್ನು ಬಲಿ ಕೊಟ್ರು!

1 year ago

ರಾಮನಗರ: ಪಾರ್ಶ್ವವಾಯು ರೋಗ ನಿವಾರಣೆಗಾಗಿ ಮುದ್ದಾದ ಬಾಲಕಿಯನ್ನು ಕೊಲೆ ಮಾಡಿರುವ ಆರೊಪಿಗಳನ್ನು ಬಂಧಿಸುವಲ್ಲಿ ಮಾಗಡಿ ಪೊಲೀಸರು ಯಶ್ವಸಿಯಾಗಿದ್ದಾರೆ. 10 ವರ್ಷ ವಯಸ್ಸಿನ ಆಯೇಶಾ ವಾಮಾಚಾರಕ್ಕೆ ಬಲಿಯಾದ ಮಗು. ಮಾಗಡಿ ಪಟ್ಟಣದ ಹೊಸ ಮಸೀದಿ ಮೊಹಲ್ಲಾದ ನಿವಾಸಿಯಾದ ಮಹಮದ್ ನೂರುಲ್ಲಾ ಹಾಗು ಜಮೀಲಾ...

ಕುಮಾರಸ್ವಾಮಿ ದುರ್ಯೋಧನ ಇದ್ದಂತೆ, ರಣರಂಗದಲ್ಲೇ ತೊಡೆ ತಟ್ಟುತ್ತೇವೆ: ತೇಜಸ್ವಿನಿ ರಮೇಶ್

1 year ago

ರಾಮನಗರ: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿಯವರನ್ನ ದುರ್ಯೋಧನ ಎಂದು ಸಂಭೋಧಿಸಿದ್ದಲ್ಲದೇ, ಅವರಿಗೆ ಮಾತಿನಲ್ಲಿ ಉತ್ತರವನ್ನ ನೀಡುವುದಿಲ್ಲ ರಣರಂಗದಲ್ಲೇ ದುರ್ಯೋಧನನಿಗೆ ತೊಡೆ ತಟ್ಟುತ್ತೇವೆ ಎಂದು ಮಾಜಿ ಸಂಸದೆ ತೇಜಸ್ವಿನಿ ರಮೇಶ್ ತಿರುಗೇಟು ನೀಡಿದ್ದಾರೆ. ಇಂದು ರಾಮನಗರದ ಪರಿವೀಕ್ಷಣ ಮಂದಿರದಲ್ಲಿ...

ಗಂಡನ ಅನಾರೋಗ್ಯದಿಂದ ಬೇಸತ್ತು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆ

1 year ago

ರಾಮನಗರ: ಗಂಡನ ಅನಾರೋಗ್ಯದಿಂದ ಬೇಸತ್ತ ಪತ್ನಿ ತನ್ನ ಮಕ್ಕಳ ಜೊತೆ ಮನೆಯ ಎದುರಿನ ನೀರಿನ ಸಂಪ್ ನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ. ರೇಖಾ (28), ಮಕ್ಕಳಾದ ನೂತನ್ (7) ಮತ್ತು ಮಾನ್ಯ...