Monday, 25th June 2018

Recent News

8 months ago

ಕಾಡಿನಿಂದ ನಾಡಿಗೆ ಬಂದು ಮೇಕೆ, ಕುರಿಗಳನ್ನು ಕೊಂದು ತಿನ್ನುತ್ತಿದ್ದ ಚಿರತೆ ಸೆರೆ

ರಾಮನಗರ: ಕಾಡಿನಿಂದ ನಾಡಿಗೆ ಬಂದು ಮೇಕೆ ಹಾಗು ಕುರಿಗಳನ್ನು ಕೊಂದು ತಿನ್ನುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ರಾಮನಗರ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಚಿರತೆಯ ಉಪಟಳ ಜಾಸ್ತಿಯಾಗಿತ್ತು. ಒಂದು ವಾರದಲ್ಲಿ ನಾಲ್ಕು ಮೇಕೆ ಹಾಗೂ 2 ಕುರಿಗಳನ್ನು ಗ್ರಾಮಕ್ಕೆ ನುಗ್ಗಿ ತಿಂದು ಹಾಕಿತ್ತು. ಇದರಿಂದ ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಗ್ರಾಮದ ಹೊರವಲಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ಬೋನುಗಳನ್ನು ಇಟ್ಟಿದರು. ಗ್ರಾಮದ […]

8 months ago

ಹೆಜ್ಜೇನು ದಾಳಿ, ಹೆದರಿ ಶವ ಬಿಟ್ಟು ಓಡಿ ಹೋದ ಜನ

ರಾಮನಗರ: ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವೇಳೆ ಹೆಜ್ಜೇನು ದಾಳಿ ನಡೆಸಿ 30 ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಭಾನುವಾರ ನಡೆದಿದೆ. ಮಾಗಡಿ ಪಟ್ಟಣದ ಹೊಸಹಳ್ಳಿ ಗ್ರಾಮದ ಸಿದ್ದಲಿಂಗಪ್ಪ ಎಂಬವರು ಅನಾರೋಗ್ಯದಿಂದ ಶನಿವಾರ ಸಾವನ್ನಪ್ಪಿದ್ರು. ಭಾನುವಾರ ಮಧ್ಯಾಹ್ನದ ಬಳಿಕ ಅವರ ಅಂತ್ಯಕ್ರಿಯೆಯನ್ನು ಹೊಸಹಳ್ಳಿ ಗ್ರಾಮದ ಹೊರಭಾಗದಲ್ಲಿ ನಡೆಸಲಾಗುತ್ತಿತ್ತು. ಅಂತ್ಯಕ್ರಿಯೆ ವೇಳೆ ಗಂಧದಕಡ್ಡಿ ಹಾಗೂ...

ಚಿರತೆ ದಾಳಿಗೆ ಕುಟುಂಬ ನಿರ್ವಹಣೆಗಿದ್ದ ಕುರಿ, ಮೇಕೆ ಬಲಿ- ಗ್ರಾಮಸ್ಥ ಕಂಗಾಲು

8 months ago

ರಾಮನಗರ: ಚಿರತೆ ದಾಳಿಗೆ ಮೂರು ಕುರಿ ಮತ್ತು ಎರಡು ಮೇಕೆ ಬಲಿಯಾದ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಟಮಾರನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮಧು ಎಂಬವರಿಗೆ ಸೇರಿದ ಮೂರು ಕುರಿ ಹಾಗೂ ಎರಡು ಮೇಕೆಗಳನ್ನು ಭಾನುವಾರ ತಡರಾತ್ರಿ ಚಿರತೆ ದಾಳಿ ಮಾಡಿ...

ಸ್ವಾಭಿಮಾನಿ ಪ್ರಗತಿಪರ ಚಿಂತನಾ ಸಭೆಯಲ್ಲಿ ಯೋಗೇಶ್ವರ್ ಬಿಜೆಪಿಯನ್ನು ಹೊಗಳಿದ್ದು ಹೀಗೆ

8 months ago

ರಾಮನಗರ: ಬಿಜೆಪಿಯಿಂದಾಗಿ ಚನ್ನಪಟ್ಟಣ ತಾಲ್ಲೂಕು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಬಿಜೆಪಿಯ ಋಣ ಈ ತಾಲೂಕಿನ ಮೇಲಿದೆ ಎಂದು ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಚನ್ನಪಟ್ಟಣದಲ್ಲಿ ಆಯೋಜನೆಗೊಂಡಿದ್ದ ನಡೆದ ಸ್ವಾಭಿಮಾನಿ ಪ್ರಗತಿಪರ ಚಿಂತನಾ ಸಭೆಯಲ್ಲಿ ಮಾತನಾಡಿದ...

ಪ್ರಾಣ ಬಲಿಗಾಗಿ ಕಾದುಕುಳಿತಿವೆ ಚನ್ನಪಟ್ಟಣದ ತುಂಬಿದ ಕೆರೆಗಳು!

8 months ago

ರಾಮನಗರ: ಬೊಂಬೆನಗರಿ ಅಂತಲೇ ಖ್ಯಾತಿ ಗಳಿಸಿರೋ ಚನ್ನಪಟ್ಟಣದ ಕೆರೆಗಳೆಲ್ಲಾ ತುಂಬಿ ಥಳಥಳಿಸ್ತಾ ಇವೆ. ಒಂದೆಡೆ ಕೆರೆಗಳೆಲ್ಲಾ ತುಂಬಿ ಅಂತರ್ಜಲ ಮತ್ತೆ ಮೇಲಕ್ಕೇರಿದ ಸಂತಸ ಜನರಲ್ಲಿದೆ. ಆದ್ರೆ ಇನ್ನೊಂದೆಡೆ ಅದೇ ಕೆರೆಗಳ ಬಳಿ ಜೀವವನ್ನ ಅಂಗೈಲಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ. ಕಳೆದ ಒಂದು...

ಕಿತ್ತು ಹೋದ ಮೇಲ್ಛಾವಣಿ- ಶಾಲೆಯ ಹೊರಗಡೆ ಕುಳಿತು ಪಾಠ ಕೇಳ್ತಿದ್ದಾರೆ ವಿದ್ಯಾರ್ಥಿಗಳು

8 months ago

ರಾಮನಗರ: ಸರ್ಕಾರಿ ಶಾಲೆಯೊಂದರ ಕಟ್ಟಡ ಹಾಳಾಗಿದ್ದು, ಮಕ್ಕಳ ಜೀವಕ್ಕೆ ಕುತ್ತು ತರುವ ಸ್ಥಿತಿ ತಲುಪಿದೆ. ಇದಕ್ಕೆ ಸಾಕ್ಷಿಯಾಗಿರೋದು ಇಂಧನ ಸಚಿವರ ತವರು ಜಿಲ್ಲೆಯ ಸರ್ಕಾರಿ ಶಾಲೆ. ಹಾಳಾಗಿರೋ ಶಾಲಾ ಕಟ್ಟಡ. ಅಲ್ಲಲ್ಲಿ ಕಿತ್ತು ಹೋಗಿರೋ ಮೇಲ್ಛಾವಣಿ. ಹೊರಭಾಗದಲ್ಲಿಯೇ ಕುಳಿತು ಪಾಠ ಕೇಳುತ್ತಿರೋ...

ಚನ್ನಪಟ್ಟಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಡಿಕೆಶಿ, ಯೋಗೇಶ್ವರ್

8 months ago

ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗೇಶ್ವರ್ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಚನ್ನಪಟ್ಟಣ ಹೊರವಲಯದ ಖಾಸಗಿ ಹೋಟೆಲ್‍ನಲ್ಲಿ ಯೋಗೇಶ್ವರ್ ಮಾತನಾಡಿ ಡಿಕೆ ಸಹೋದರರ ವಿರುದ್ಧ  ಏಕವಚನದಲ್ಲಿ ಹರಿಹಾಯ್ದಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್‍ರವರದ್ದು ಇದು ರಾಜಕೀಯದ...

ಮಳೆನೀರಿನ ವಿಡಿಯೋ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ವ್ಯಕ್ತಿ ದುರ್ಮರಣ

8 months ago

ರಾಮನಗರ: ಹಳ್ಳದಲ್ಲಿ ನೀರು ಹರಿಯುವುದನ್ನು ವಿಡಿಯೋ ತೆಗೆಯಲು ಹೋಗಿ ನಿಂತಿದ್ದ ಜಾಗದಲ್ಲಿ ಮಣ್ಣು ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಅರಳಿಮರದದೊಡ್ಡಿ ಗ್ರಾಮದಲ್ಲಿ ನಡೆದಿದೆ. ಅರಳಿಮರದದೊಡ್ಡಿ ಗ್ರಾಮದ ನಿವಾಸಿ ನಂದೀಶ್ ಮೃತ ದುರ್ದೈವಿ. ಇಂದು ಬೆಳಿಗ್ಗೆ ವಾಯುವಿಹಾರಕ್ಕೆಂದು ಹೋಗಿದ್ದ ವೇಳೆಯಲ್ಲಿ ನಂದೀಶ್ ಅಕ್ರಮ...