Tuesday, 17th October 2017

Recent News

2 weeks ago

ಭಾರೀ ಮಳೆಯಿಂದಾಗಿ ಮನೆಯ ನೆಲದಿಂದ ಉಕ್ಕಿ ಬರುತ್ತಿದೆ ನೀರು!

ರಾಯಚೂರು: ಸತತವಾಗಿ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿದ್ದು, ಮನೆಯ ನೆಲದಿಂದ ನೀರು ಉಕ್ಕಿ ಬರುತ್ತಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಜಾಗೀರ್ ಗ್ರಾಮದ ಹಲವು ಮನೆಗಳಲ್ಲಿ ನೀರು ಉಕ್ಕಿ ಬರುತ್ತಿದ್ದು, ನೀರು ಎತ್ತಿ ಹಾಕಲಾಗದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಅಲ್ಲದೇ ಮನೆಯಲ್ಲಿ ಸಂಗ್ರಹಿಸಿದ್ದ ಧವಸ ಧಾನ್ಯಗಳು ಸಹ ನೀರು ಪಾಲಾಗಿದ್ದು, ನೀರಿನ ಪ್ರಮಾಣ ಹೆಚ್ಚಳವಾಗಿ ಭೂಕುಸಿತವಾಗಬಹುದು ಎನ್ನುವ ಭೀತಿಯಲ್ಲಿದ್ದಾರೆ. ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ರಾಂಪುರ ಏತ ನೀರಾವರಿ ಯೋಜನೆಯಿಂದ ಈ ಭಾಗದಲ್ಲಿ […]

2 weeks ago

ಮನೆಗೆ ನುಗ್ಗಿದ ದರೋಡೆಕೋರರು ಮನೆ ಯಜಮಾನನನ್ನ ಕೊಲೆ ಮಾಡಿ ಪರಾರಿ

ರಾಯಚೂರು: ಮನೆಗೆ ನುಗ್ಗಿದ ದರೋಡೆಕೋರರು ಮನೆ ಯಜಮಾನನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಸೀಕಲ್ ತಾಂಡದಲ್ಲಿ ನಡೆದಿದೆ. 55 ವರ್ಷದ ಠಾಕಪ್ಪ ಕೊಲೆಯಾದ ವ್ಯಕ್ತಿ. ಮಧ್ಯ ರಾತ್ರಿ ವೇಳೆ ಮನೆ ಬಾಗಿಲು ಬಡಿದು ಅತಿಥಿಗಳಂತೆ ಒಳ ಬಂದ ಮೂರು ಜನ ದರೋಡೆಕೋರರು ಮಾರಕಾಸ್ತ್ರಗಳಿಂದ ಹೆದರಿಸಿ ಹಣ, ಚಿನ್ನಾಭರಣ ಕಿತ್ತುಕೊಂಡಿದ್ದಾರೆ. ಟ್ರಂಕ್ ನಲ್ಲಿದ್ದ...

ರಾಯಚೂರಲ್ಲಿ ರಾವಣ ದಹನಕ್ಕೆ ತಯಾರಿ-ದಲಿತ, ಪ್ರಗತಿಪರ ಸಂಘಟನೆಗಳ ವಿರೋಧ

2 weeks ago

ರಾಯಚೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಶಾಸಕ ಎನ್.ಎಸ್.ಬೋಸರಾಜು ಫೌಂಡೇಶನ್ ಮತ್ತೆ ವಿವಾದಕ್ಕೆ ಒಳಗಾಗಿದೆ. ರಾಯಚೂರಿನ ವಾಲ್‍ಕಾಟ್ ಮೈದಾನದಲ್ಲಿ ವಿಜಯ ದಶಮಿ ದಿನ ರಾವಣಾಸುರ ದಹನಕ್ಕೆ ಮುಂದಾಗಿರುವ ಎನ್.ಎಸ್.ಬೋಸರಾಜು ಫೌಂಡೇಶನ್ ಕಾರ್ಯಕ್ಕೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ದಲಿತರ, ಹಿಂದುಳಿದವರ...

ರಾಯಚೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ- ಸಿಡಿಲಿಗೆ ಓರ್ವ ಮಹಿಳೆ ಸಾವು

3 weeks ago

ರಾಯಚೂರು: ಜಿಲ್ಲೆಯಾದ್ಯಂತ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು, ಕೃಷಿ ಕೆಲಸಕ್ಕೆ ಹೋಗಿದ್ದ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಪುಚ್ಚಲದಿನ್ನಿಯಲ್ಲಿ ನಡೆದಿದೆ. 30 ವರ್ಷದ ಚಂದ್ರಮ್ಮ ಸಿಡಿಲ ಹೊಡೆತಕ್ಕೆ ಮೃತಪಟ್ಟ ದುರ್ದೈವಿ. ಕೃಷಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದ...

ಪ್ರೇಮ ವೈಫಲ್ಯ- ಆತ್ಮಹತ್ಯೆಗೆ ಶರಣಾದ ಯುವಕ

3 weeks ago

ರಾಯಚೂರು: ಮಾನ್ವಿ ಪಟ್ಟಣದಲ್ಲಿ ಯುವಕನೋರ್ವ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪಟ್ಟಣದ ಬಾಬಾನಾಯಕ್ ಕಾಲೋನಿ ನಿವಾಸಿ 25 ವರ್ಷದ ಕೃಷ್ಣ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿದ ಹುಡುಗಿ ತನಗೆ ಸಿಗುವುದಿಲ್ಲ ಅಂತ ಖಿನ್ನತೆ ಒಳಗಾಗಿದ್ದ ಕೃಷ್ಣ...

ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾದ್ರೆ ರಾಷ್ಟ್ರೀಯ ಪಕ್ಷಗಳ ಬಣ್ಣ ಬಯಲಾಗುತ್ತೆ: ವೈಎಸ್‍ವಿ ದತ್ತಾ

3 weeks ago

ರಾಯಚೂರು: ಇದೇ ನವೆಂಬರ್ ತಿಂಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾಗಲಿದ್ದು, ಸಾಕಷ್ಟು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರಲಿವೆ ಎಂದು ಜೆಡಿಎಸ್ ವಕ್ತಾರ ವೈಎಸ್‍ವಿ ದತ್ತಾ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ದತ್ತಾ, ಗೌಡರ ಆತ್ಮಚರಿತ್ರೆ ತಾವೇ ಬರೆಯುತ್ತಿದ್ದು ಅನೇಕ ರಾಜಕಾರಣಿಗಳ ವಾಸ್ತವ...

ರಾಯಚೂರಿನಲ್ಲಿ ಮಧ್ಯಾಹ್ನ ಆದ್ರೆ ಸಾಕು ಮನೆಗಳ್ಳತನ ಗ್ಯಾರಂಟಿ

3 weeks ago

ರಾಯಚೂರು: ಸಾಮಾನ್ಯವಾಗಿ ಕಳ್ಳತನಗಳು ರಾತ್ರಿ ವೇಳೆ ನಡೆಯುತ್ತವೆ. ಆದ್ರೆ ರಾಯಚೂರಿನಲ್ಲೊಂದು ಡಿಫರೆಂಟ್ ಗ್ಯಾಂಗ್ ಓಡಾಡುತ್ತಿದೆ. ಕಳೆದ 15 ದಿನಗಳಿಂದ ಮಧ್ಯಾಹ್ನ ಆದ್ರೆ ಸಾಕು ಒಂದು ಕಳ್ಳತನ ನಡೆದಿರುತ್ತೆ. ರಾಯಚೂರು ತಾಲೂಕಿನ ಆಂಧ್ರಪ್ರದೇಶದ ಗಡಿ ಭಾಗದ ಗ್ರಾಮಗಳಲ್ಲಿ ಮಧ್ಯಾಹ್ನ ಆದ್ರೆ ಸಾಕು ಜನ...

ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ವರ್ತೂರ್ ಪ್ರಕಾಶ್

3 weeks ago

ರಾಯಚೂರು: ಉತ್ತರ ಕರ್ನಾಟಕದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಎಲ್ಲೇ ಸ್ಪರ್ಧಿಸಿದರೂ ಅವರ ವಿರುದ್ಧ ಎದುರಾಳಿಯಾಗಿ ಸ್ಪರ್ಧಿಸುತ್ತೇನೆ ಎಂದು ಕೋಲಾರದ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಹೇಳಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತನಗೆ ಟಿಕೆಟ್ ಕೊಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು...