Thursday, 23rd November 2017

Recent News

9 months ago

ಗದಗ್: ಎತ್ತಿನ ಬಂಡಿ ಏರಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು!

ಗದಗ: ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಟ್ರೆಡಿಷನಲ್ ಡೇ ಆಚರಿಸಿದರು. ಬಿಕಾಂ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನಾಚರಣೆ ಅಂಗವಾಗಿ ಸಾಂಪ್ರದಾಯಿಕ ಡ್ರೆಸ್ ನಲ್ಲಿ ಕಾಲೇಜಿಗೆ ಬರೋ ಮೂಲಕ ಎಲ್ಲರ ಗಮನ ಸೆಳೆದರು. ಎರಡೆತ್ತಿನ ಬಂಡಿ ಏರಿ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮೂಲಕ ವಿದ್ಯಾರ್ಥಿಗಳು ಕಣ್ಮನ ಸೆಳೆದರು. ಇಳಕಲ್ ಸೀರೆ, ಮೊಳಕಾಲ್ಮೂರ್, ರೇಷ್ಮೆ, ಟೋಪ್ ಸೆರಗಿನ ಸೀರೆ ಹೀಗೆ ಬಗೆಬಗೆಯ ಸೀರೆ ತೊಟ್ಟ ವಿದ್ಯಾರ್ಥಿನಿಯರ ಬಿಂಕು ಬಿನ್ನಾಣ ಒಂದೆಡೆಯಾದ್ರೆ, ಬಿಳಿ ಪಂಚೆ, ಲುಂಗಿ, ಗಾಂಧಿ […]

9 months ago

ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲಾ ನವೀಕರಣ ಕಟ್ಟಡ ಉದ್ಘಾಟನೆ

ಮಂಗಳೂರು: ಕಾವೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ನವೀಕರಣಗೊಂಡ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಿತು. ನವೀಕೃತ ಕಟ್ಟಡವನ್ನು ಕ್ಯಾನ್ ಫಿನ್ ಹೋಮ್ ಲಿಮಿಟೆಡ್‍ನ ಪ್ರಬಂಧಕ ಉಮೇಶ್ ಪೈ ಉದ್ಘಾಟಿಸಿದರು. ಕಟ್ಟಡ ಉದ್ಘಾಟಿಸಿ ಮಾತನಾಡಿದ ಉಮೇಶ್ ಪೈ ಅವರು, ವಿದ್ಯಾರ್ಥಿಗಳು ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಸತ್ಪ್ರಜೆಗಳಾಗಿ ದೇಶದ ಏಳಿಗೆಗಾಗಿ ಜೀವನ ನಡೆಸಿರಿ ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾದ...

ಈಶ್ವರ ದೇವಾಲಯ ನಿರ್ಮಿಸಲು ಸಹಕರಿಸಿದ್ರು ಮುಸ್ಲಿಮರು: ರಾಯಚೂರಿನಲ್ಲೊಂದು ಭಾವೈಕ್ಯತಾ ಕೇಂದ್ರ

9 months ago

ರಾಯಚೂರು: ನಗರದ ಎಚ್.ಆರ್.ಬಿ ಬಡಾವಣೆಯಲ್ಲಿರುವ ಬೃಂದಾವನ ಹೌಸಿಂಗ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಅನಂತೇಶ್ವರ ದೇವಾಲಯ ನಿಜಕ್ಕೂ ಹಿಂದೂ-ಮುಸ್ಲಿಂ ಸಂಗಮದ ಕೇಂದ್ರವಾಗಿದೆ. ಬಡಾವಣೆಯ ಜನತೆ ಉದ್ಯಾನವನದಲ್ಲಿದ್ದ ಹಳೆಯ ಪುಟ್ಟ ದೇವಾಲಯವನ್ನು ಜೀರ್ಣೊದ್ಧಾರ ಮಾಡಿ ನೂತನ ದೇವಸ್ಥಾನ ನಿರ್ಮಿಸಿದ್ದಾರೆ. ಈ ಕಾಲೋನಿಯಲ್ಲಿ ಸುಮಾರು...

ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ- ದಲಿತರಿಗೆ ಮನೆ ಬಾಡಿಗೆಗೆ ಕೊಡದೆ ಹೊರಹಾಕಿದ್ರು

9 months ago

ಕೊಪ್ಪಳ: ದೇಶದ 70 ನೇ ಸ್ವ್ಯಾತಂತ್ರ್ಯೋತ್ಸವದ ಹೊಸ್ತಿಲಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮಾತ್ರ ಜೀವಂತವಾಗಿದೆ. ದಲಿತ ಕುಟುಂಬವೊಂದನ್ನು ಬಾಡಿಗೆ ಮನೆಯಿಂದ ಹೊರ ಹಾಕುವ ಮೂಲಕ, ಅಸ್ಪೃಶ್ಯತೆ ಮಾಡಿದ್ದಲ್ಲದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದಲ್ಲಿ...

ವೀಡಿಯೋ: ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕೆಎಸ್‍ಆರ್‍ಟಿಸಿ ಬಸ್- ಮಹಿಳೆ ಸಜೀವ ದಹನ!

9 months ago

ಬೆಂಗಳೂರು: ಚಲಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡು ನಡುರಾತ್ರಿ ಧಗಧಗಿಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ಬಳಿ ನಡೆದಿದೆ. ಬಸ್ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಈ ದುರಂತದಲ್ಲಿ 58 ವರ್ಷದ ಭಾಗ್ಯಮ್ಮ ಎಂಬ ಮಹಿಳೆ ಸಜೀವ ದಹನವಾಗಿದ್ದಾರೆ. ಅವಘಡದಲ್ಲಿ...

ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ- ಎಟಿಎಂ ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ

9 months ago

ಬೆಂಗಳೂರು: ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಹಣಕ್ಕಾಗಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ಪೊಲೀಸ್ ವಶದಲ್ಲಿದ್ದು, ಇದೀಗ ಭಯಾನಕ ಮಾಹಿತಿಯೊಂದನ್ನ ಹೊರಹಾಕಿದ್ದಾನೆ. `ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಅಂತಾ...

ಬೆಂಗ್ಳೂರಾಯ್ತು ಇದೀಗ ಮೈಸೂರು ಸರದಿ- ವಿದೇಶಿ ಮಹಿಳೆಯ ತುಟಿ ಕಚ್ಚಿದ ಕಾಮುಕ

9 months ago

ಮೈಸೂರು: ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಸುದ್ದಿಯಾದ ಬೆನ್ನಲ್ಲೇ ಇದೀಗ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಾಮುಕನೊಬ್ಬ ವಿದೇಶಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಚಾಮುಂಡಿ ಬೆಟ್ಟದ ನಂದಿ ಬಳಿ ಸೋಮವಾರ ಸಂಜೆ ಈ ಘಟನೆ ನಡೆದಿದೆ....

ಬೆಂಗ್ಳೂರು ವಿವಿ ಕುಲಪತಿ ಹುದ್ದೆಗೆ ಭಾರೀ ಡಿಮ್ಯಾಂಡ್- 150 ಆಕಾಂಕ್ಷಿಗಳಿಂದ ಅರ್ಜಿ

9 months ago

-ಶ್ರೀನಿವಾಸ್ ರಾವ್ ದಳವೆ ಬೆಂಗಳೂರು: ವಿಶ್ವ ವಿದ್ಯಾಲಯದ ಕುಲಪತಿ ಪೋಸ್ಟ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿಸಿ ಪೋಸ್ಟ್ ಗೆ ಯಾವ ಸಿಎಂ ಪೋಸ್ಟ್ ಗಿಂತಲೂ ಕಡಿಮೆ ಇಲ್ಲ ಅನ್ನುವಷ್ಟು ಮಟ್ಟಿಗೆ ಡಿಮ್ಯಾಂಡ್. ಕುಲಪತಿಯಾಗಿದ್ದ ಪ್ರೊ.ತಿಮ್ಮೇಗೌಡರ ಅವಧಿ ಫೆಬ್ರವರಿ...