Sunday, 21st January 2018

16 hours ago

ಜಾತಿ-ಧರ್ಮ, ಮತಕ್ಕಿಂತ ಈ ಗ್ರಾಮದಲ್ಲಿ ಪಕ್ಷವೇ ಪ್ರತಿಷ್ಠೆ-ಪ್ರತ್ಯೇಕವಾಗಿ ನಡೆಯುತ್ತೆ ಪ್ರತಿ ಹಬ್ಬ, ಆಚರಣೆ

ಚಿಕ್ಕಬಳ್ಳಾಪುರ: ವಿವಿಧ ಭಾಷೆ, ಧರ್ಮ, ಜಾತಿ, ಮತ, ಪಂಥ ಗಳನ್ನು ಮೀರಿದ ಏಕತೆಯ ರೂಪವಾಗಿ ಭವ್ಯ ಭಾರತವನ್ನು ಕಾಣಬಹುದು. ಆದರೆ ಇತ್ತೀಚೆಗೆ ಜಾತಿ-ಜಾತಿ, ಧರ್ಮಗಳ ನಡುವೆಯೇ ರಾಜಕೀಯ ವ್ಯಕ್ತಿಗಳು ಕಿಚ್ಚು ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಘಟನೆಗೆ ಸ್ಪಷ್ಟ ಸಾಕ್ಷಿ ಎಂಬಂತೆ ಇಲ್ಲೊಂದು ಗ್ರಾಮದ ಜನರಿಗೆ ಜಾತಿ-ಧರ್ಮಗಳಿಗಿಂತ ರಾಜಕೀಯ ಪಕ್ಷವೇ ಶ್ರೇಷ್ಠವಾಗಿದೆ. ತಮ್ಮ ಒಣ ಪ್ರತಿಷ್ಠೆಗಾಗಿ ಗ್ರಾಮದ ದೇವರಿಗೆ ಪ್ರತ್ಯೇಕ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹುಜಗೂರು ಗ್ರಾಮದಲ್ಲಿ ಇಂತಹ […]

17 hours ago

ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

ಚಿಕ್ಕಬಳ್ಳಾಪುರ: ಜಿಲ್ಲೆಗೆ 10 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ದಶಮಾನೋತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರ ವೇತನದಲ್ಲಿ 500 ರೂಪಾಯಿ ಕಡಿತ ಮಾಡಿಕೊಳ್ಳಲು ನಿರ್ಧಾರಕ್ಕೆ ಆಕ್ಷೇಪ ಕೇಳಿ ಬಂದಿದೆ. ಫೆಬ್ರವರಿ 2, 3 ಹಾಗೂ 4 ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರ ನಗರದಲ್ಲಿರುವ ಸರ್.ಎಂ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ದಶಮಾನೋತ್ಸವ ಆಚರಿಸಲು ಸಿದ್ಧತೆ...

ಚಳಿ ಕಾಯಿಸಲು ಹೋಗಿ ಬೆಂಕಿಗಾಹುತಿಯಾದ ಯುವಕ!

19 hours ago

ಬೆಂಗಳೂರು: ಚಳಿ ಕಾಯಿಸಲು ಹೋದ ಯುವಕನೋರ್ವ ಬೆಂಕಿಗಾಹುತಿಯಾದ ಘಟನೆಯೊಂದು ನಡೆದಿದೆ. ಆನೇಕಲ್ ತಾಲೂಕಿನ ಅತ್ತಿಬೆಲೆಯ ಟಿವಿಎಸ್ ರಸ್ತೆ ಬಳಿ ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಮೃತ ಯುವಕನನ್ನು 5 ವರ್ಷಗಳಿಂದ ಅತ್ತಿಬೆಲೆಯಲ್ಲಿ ಅಲೆದಾಡುತ್ತಿದ್ದ ಸುಮಾರು 29 ವರ್ಷ ವಯಸ್ಸಿನ...

ಅಧಿಕಾರಿಯಿಂದಾಗಿ ಪ್ರವಾಸಕ್ಕೆ ಬಿತ್ತು ಬ್ರೇಕ್- ತಟ್ಟೆ ಹಿಡಿದು ವಿದ್ಯಾರ್ಥಿಗಳಿಂದ ರಾತ್ರಿಯಿಡೀ ಧರಣಿ

20 hours ago

ಬಾಗಲಕೋಟೆ: ಶಾಲಾ ಪ್ರವಾಸಕ್ಕೆಂದು ಸಿದ್ಧಗೊಂಡ ವಿದ್ಯಾರ್ಥಿಗಳು ಅಧಿಕಾರಿಯ ಸ್ಪಂದನೆ ಸಿಗದ ಕಾರಣ ರಾತ್ರಿಪೂರ್ತಿ ವಸತಿ ಶಾಲೆಯ ಆವರಣದಲ್ಲೇ ಪ್ರತಿಭಟನೆ ನಡೆಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆಯ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಯ 200 ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಪ್ರವಾಸಕ್ಕೆ ಹೋಗಲು ಸಿದ್ಧವಾಗಿದ್ದರು....

ಮಂಚವೇರಿದ ಕಲ್ಮಠ ಸ್ವಾಮೀಜಿಯಿಂದ ಜೀವಬೆದರಿಕೆ – ಪ್ರತಿಭಟನೆ ಮಾಡದಂತೆ ಕೋಟಿ-ಕೋಟಿ ಆಮಿಷ

20 hours ago

ಕೊಪ್ಪಳ: ಕಲ್ಮಠ ಸ್ವಾಮಿ ಕಾಮ ಪುರಾಣ ಬಯಲಿಗೆಳೆದ ಕಾರು ಚಾಲಕನಿಗೆ ಜೀವಬೆದರಿಕೆ ಹಾಕಿರೋ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಸ್ವಾಮೀಜಿ ಆಪ್ತರಾದ ಶರಣಪ್ಪ ಹುನಗುಂದ, ಶರಣಪ್ಪ ಹೊಸೂರು, ನಾಗರಾಜ್, ಶಿವಾನಂದ ಹಾಗೂ ಗುರುಪಾದಯ್ಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಮನೆಗೆ ನುಗ್ಗಿ ಕಲ್ಮಠ...

ಬೆಳ್ಳಂದೂರು ಕೆರೆಯಲ್ಲಿ ಆರದ ಬೆಂಕಿ: ಏನ್ ಮಾಡ್ತಿದೆ ಬೆಂಗ್ಳೂರು ಆಡಳಿತ?

21 hours ago

ಬೆಂಗಳೂರು: ಬೆಳ್ಳಂದೂರು ಕೆರೆಯ ಇಬ್ಬಲೂರು ಮತ್ತು ಈಜಿಪುರ ಕಡೆಯ ದಡದಲ್ಲಿನ ಹುಲ್ಲಿಗೆ ಶುಕ್ರವಾರ ಹತ್ತಿದ ಬೆಂಕಿ ನಂದಿಸುವ ಕಾರ್ಯ ಶನಿವಾರವೂ ಮುಂದುವರಿದಿದೆ. 21 ಗಂಟೆಗಳ ಕಾರ್ಯಾಚರಣೆಯ ಬಳಿಕವೂ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ತಣ್ಣಾಗಾಗಿಲ್ಲ. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ...

ಕೇಂದ್ರದ ಕವರ್ ಚೇಂಜ್ ಮಾಡಿ, ರಮ್ಯಾ ಕೈಯಲ್ಲಿ ಬಲ್ಬ್ ಹಿಡಿಸಿದ್ರು: ಸಿಟಿ ರವಿ ಕಿಡಿ

21 hours ago

ಮಂಡ್ಯ: ಭಾರತ ಸರ್ಕಾರದ ಬಲ್ಬನ್ನು ರಮ್ಯಾ ಕೈಯಲ್ಲಿ ಹಿಡಿಸಿ ಪಕ್ಕದಲ್ಲಿ ಡಿಕೆ ಶಿವಕುಮಾರಣ್ಣ ನಿಂತುಕೊಂಡು ಹೊಸಬೆಳಕು ಯೋಜನೆ ನಮ್ಮದು ಅಂತಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಮಂಡ್ಯ ಜಿಲ್ಲೆಯ, ನಾಗಮಂಗಲದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು,...

ಸ್ಮಶಾನದಲ್ಲಿ ದುನಿಯಾ ವಿಜಿ ಹುಟ್ಟುಹಬ್ಬ ಆಚರಿಸಿದ ಗದಗ್ ಅಭಿಮಾನಿಗಳು

21 hours ago

ಗದಗ: ಜಿಲ್ಲೆಯ ಅಡವಿ ಸೋಮಾಪುರ ಗ್ರಾಮದಲ್ಲಿರುವ ಅಭಿಮಾನಿಗಳು ದುನಿಯಾ ವಿಜಯ್ ಅವರ 44ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಸ್ಮಶಾನದಲ್ಲಿ ಆಚರಣೆ ಮಾಡಿದ್ದಾರೆ. ಗ್ರಾಮದ ಜನರು ಗುರುವಾರ ಮಧ್ಯರಾತ್ರಿ 12 ಗಂಟೆ ನಂತರ ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸುವ ಮೂಲಕ ದುನಿಯಾ ವಿಜಿಗೆ ಜೈಕಾರ ಕೂಗಿದ್ದಾರೆ....