Sunday, 24th June 2018

10 months ago

ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ಇಬ್ಬರು ನೀರು ಪಾಲು

ಮೈಸೂರು: ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ವಿ.ಜಿ.ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಾಲಕ ಮಂಜುನಾಥ್(16), ಯುವಕ ಮಹೇಶ್(27) ಮೃತಪಟ್ಟ ದುರ್ದೈವಿಗಳು. ಇಂದು ಬೆಳಗ್ಗೆ ತಮ್ಮ ಗ್ರಾಮದ ಕೆರೆಗೆ ಯುವಕರ ಗುಂಪು ಗಣಪತಿ ಮೂರ್ತಿ ವಿಸರ್ಜನೆಗೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕೆರೆಯಿಂದ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕಕರಣ ದಾಖಲಾಗಿದೆ.

10 months ago

ಮೈಸೂರು ದಸರಾಗೆ ಕೇಂದ್ರ ವಿಮಾನಯಾನ ಇಲಾಖೆಯಿಂದ ಗಿಫ್ಟ್!

ಮೈಸೂರು: ದಸರಾಗೆ ಕೇಂದ್ರ ವಿಮಾನಯಾನ ಇಲಾಖೆಯಿಂದ ಗಿಫ್ಟ್ ಸಿಕ್ಕಿದೆ. ಸೆಪ್ಟೆಂಬರ್ 15 ರಿಂದ ಮೈಸೂರು ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಆರಂಭವಾಗಲಿದೆ. ಹಲವು ತಿಂಗಳಿಂದ ನಿಷ್ಕ್ರಿಯಗೊಂಡಿದ್ದ ಮೈಸೂರಿನ ವಿಮಾನ ನಿಲ್ದಾಣವೂ ಸೆಪ್ಟೆಂಬರ್ 15 ರಿಂದ ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟ ಆರಂಭವಾಗುವ ಮೂಲಕ ಮತ್ತೆ ನಿಲ್ದಾಣ ಕಾರ್ಯೋನ್ಮುಖವಾಗಲಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ವಿಮಾನ...

ರಾಹುಲ್‍ಗೆ ದಲಿತ ಹೆಣ್ಣನ್ನು ಕೊಡಲು ಸಿದ್ಧ ಎಂಬ ಕಾರಜೋಳ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದು ಹೀಗೆ

10 months ago

ಮೈಸೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ದಲಿತ ಹೆಣ್ಣು ಮಗಳನ್ನು ಕೊಡಲು ಸಿದ್ಧರಿದ್ದೇವೆ. ರಾಹುಲ್ ದಲಿತ ಹೆಣ್ಣು ಮಗಳನ್ನು ಮದುವೆಯಾಗಲು ಸಿದ್ಧರಿದ್ದಾರಾ? ಎಂದು ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನ ನಿವಾಸದಲ್ಲಿ...

ವಿಡಿಯೋ: ಪ್ರಶ್ನೆ ಮಾಡಿದ ವ್ಯಕ್ತಿಯ ಹಂಡ್ತಿಯನ್ನೇ ಉದಾಹರಣೆ ತೆಗೆದುಕೊಂಡು ಏಕವಚನದಲ್ಲಿ ಶಾಸಕರ ಅವಾಜ್

10 months ago

ಮೈಸೂರು: ಮತದಾರರು ಸಾರ್ವಜನಿಕವಾಗಿ ಶಾಸಕರನ್ನು ಪ್ರಶ್ನಿಸುವುದೇ ತಪ್ಪಾ? ಒಂದು ವೇಳೆ ಪ್ರಶ್ನಿಸಿದರೆ ಪ್ರಶ್ನೆ ಮಾಡಿದವರ ಕುಟುಂಬಸ್ಥರನ್ನು ಉದಾಹರಣೆಗೆ ತೆಗೆದುಕೊಂಡು ಏಕವಚನದಲ್ಲೆ ಗದರುವುದು ಶಾಸಕರ ಸುಸಂಸ್ಕೃತ ವರ್ತನೆಯಾ? ಇಂತಹ ಪ್ರಶ್ನೆ ಮೂಡಿಸುವಂತಹ ವೀಡಿಯೋ ಈಗ ವೈರಲ್ ಆಗಿದೆ. ಮೈಸೂರು ಜಿಲ್ಲೆಯ ಹುಣಸೂರು ಕ್ಷೇತ್ರದ...

ಗಣೇಶೋತ್ಸವದ ಬಂದೋಬಸ್ತ್ ಜೊತೆಗೆ ಸ್ಟೇಜ್ ಮೇಲೆ ಹಾಡಿ ರಂಜಿಸಿದ ಪೊಲೀಸ್- ವಿಡಿಯೋ ವೈರಲ್

10 months ago

ಮೈಸೂರು: ಗಣೇಶೋತ್ಸವದ ಬಂದೋಬಸ್ತ್ ಕೆಲಸದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಸಮವಸ್ತ್ರದಲ್ಲೇ ಚಲನಚಿತ್ರ ಗೀತೆ ಹಾಡುವುದರ ಜೊತೆಗೆ ವೇದಿಕೆಯ ಮೇಲೆ ನರ್ತಿಸುವ ಮೂಲಕ ಸಾರ್ವಜನಿಕರಿಗೆ ಸಖತ್ ಮನರಂಜನೆ ನೀಡಿದ್ದಾರೆ. ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಕಳೆದ ರಾತ್ರಿ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ...

ಮನೆಗೆ ನುಗ್ಗಿ ಕುಕ್ಕರ್ ಓಪನ್ ಮಾಡಿ ರೈಸ್ ತಿನ್ನುತ್ತೆ ಕೋತಿ -ವಿಡಿಯೋ ನೋಡಿ

10 months ago

ಮೈಸೂರು: ಕೋತಿಗಳು ಪ್ರಯಾಣಿಕರಿಗೆ, ದೇವಾಲಯದಲ್ಲಿ ಭಕ್ತರಿಗೆ ತೊಂದರೆ ಕೊಡುವುದು ನಿಮಗೆ ಗೊತ್ತೇ ಇದೆ. ಆದರೆ ಈಗ ಮಂಗಗಳ ಹಾವಳಿ ಮತ್ತಷ್ಟು ಹೆಚ್ಚಾಗಿದ್ದು ಮನೆ ಒಳಗಡೆ ನುಗ್ಗಿ ಅಡುಗೆ ಮನೆಯ ಕುಕ್ಕರ್ ಓಪನ್ ಮಾಡಿ ಅನ್ನವನ್ನು ತಿನ್ನುವನ್ನು ತಿಂದಿದೆ. ಮೈಸೂರಿನ ಜೆಪಿ ನಗರದಲ್ಲಿ...

ಉಂಗುರ, ಚೈನ್ ಹಾಕಿಕೊಂಡವರೆಲ್ಲ ನಮ್ಮ ಇಂದೀರಾ ಕ್ಯಾಂಟೀನ್‍ಗೆ ಹೋಗುತ್ತಿದ್ದಾರೆ: ಸಿಎಂ

10 months ago

ಮೈಸೂರು: ನಮ್ಮ ಇಂದೀರಾ ಕ್ಯಾಂಟೀನ್ ಗೆ ಉಂಗುರ, ಚೈನ್ ಹಾಕಿಕೊಂಡವರೆಲ್ಲ ಹೋಗುತ್ತಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಸುತ್ತೂರು ಮಠದ ಕಾರ್ಯಕ್ರಮದ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಕುರಿತು ಪ್ರಸ್ತಾಪ ಮಾಡಿದರು. ಈ ವೇಳೆ ಅವರು, ನಮ್ಮ...

ಮತ್ತೆ ಅಸ್ಪೃಶ್ಯತೆ ವಿಚಾರದಲ್ಲಿ ಸುದ್ದಿಯಾಗ್ತಿದೆ ಸಿಎಂ ಓದಿದ ಶಾಲೆ!

10 months ago

ಮೈಸೂರು: ಸಿಎಂ ಸಿದ್ದರಾಮಯ್ಯ ಓದಿದ ಶಾಲೆ ಮತ್ತೆ ಅಸ್ಪೃಶ್ಯತೆ ವಿಚಾರವಾಗಿ ಸುದ್ದಿಯಾಗುತ್ತಿದೆ. ಸಿಎಂ ಹುಟ್ಟೂರು ಸಿದ್ದರಾಮನಹುಂಡಿ ಪಕ್ಕದಲ್ಲಿನ ಕುಪ್ಪೆಗಾಲ ಸರ್ಕಾರಿ ಶಾಲೆಯಲ್ಲಿ ಸಿಎಂ ಓದಿದ್ದರು. ಇದೇ ಶಾಲೆಯಲ್ಲಿ ಈಗ ಮತ್ತೆ ಅಸ್ಪೃಶ್ಯತೆ ಮರುಕಳಿಸಿದೆ. ಶಾಲೆಯ ಅಡುಗೆ ಸಹಾಯಕ ಹುದ್ದೆಗೆ ಪರಿಶಿಷ್ಟ ಜಾತಿಯವರು...