Friday, 22nd September 2017

Recent News

6 months ago

ವೀಡಿಯೋ: ಕಾರು ಡಿಕ್ಕಿ ಹೊಡೆದು ಬೈಕ್ ಮೇಲೆ ಬಿದ್ದ ಲೈಟ್ ಕಂಬ- ಕ್ಷಣಾರ್ಧದಲ್ಲಿ ಸ್ಫೋಟಿಸಿದ ಬೈಕ್

– ಪವಾಡಸದೃಶ ರೀತಿಯಲ್ಲಿ ಬೈಕ್ ಸವಾರ ಪಾರು ಮೈಸೂರು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬಗಳು ಉರುಳಿ ಬಿದ್ದು ಒಂದು ಕಾರು ಜಖಂಗೊಂಡು ಒಂದು ಬೈಕ್ ಬೆಂಕಿಗೆ ಅಹುತಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಇಲ್ಲಿನ ರೇಸ್ ಕೋರ್ಸ್ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಕಾರು ಚಾಲಕ ಅತಿ ವೇಗದಿಂದ ಕಾರು ಚಾಲನೆ ಮಾಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. […]

6 months ago

ರಂಗೇರಿದ ನಂಜನಗೂಡು ಉಪಚುನಾವಣೆ- ವೋಟಿಗಾಗಿ ಕಾಂಗ್ರೆಸ್‍ನ ಟಾರ್ಗೆಟ್ ಆದ ಬಿಎಸ್‍ವೈ

ಮೈಸೂರು: ನಂಜನಗೂಡು ಉಪಚುನಾವಣೆಗೆ ಪ್ರಚಾರ ಜೋರಾಗೇ ನಡೀತಿದೆ. ಕಾಂಗ್ರೆಸ್‍ನವರು ಮಾತಿನುದ್ದಕ್ಕೂ ಅಭ್ಯರ್ಥಿಯನ್ನ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಇದ್ರಿಂದ ನಂಜನಗೂಡಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಲಿಂಗಾಯತ ಸಮುದಾಯ ಬಿಜೆಪಿಯತ್ತ ವಾಲುತ್ತೆ ಅನ್ನೋದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ. ನಂಜನಗೂಡು ಮೀಸಲು ಕ್ಷೇತ್ರದಲ್ಲಿ ದಲಿತ ಮತದಾರರು ಸುಮಾರು 40 ಸಾವಿರದಷ್ಟಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಲಿಂಗಾಯತರು ಪ್ರಾಬಲ್ಯ...

ಕಳ್ಳತನ ಕೇಸ್‍ನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದಕ್ಕೆ ಪತಿ ಆತ್ಮಹತ್ಯೆ

7 months ago

– ಕಂಗಾಲಾದ ಪತ್ನಿಯೂ ಆತ್ಮಹತ್ಯೆಗೆ ಶರಣು ಮೈಸೂರು: ಕಳ್ಳತನ ಕೇಸಿನಲ್ಲಿ ಹೆಂಡತಿ ಸಿಕ್ಕಿಬಿದ್ದಿದ್ದರಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಗರದ ವಿವಿ ಮೊಹಲ್ಲಾದಲ್ಲಿ ನಡೆದಿದೆ. 35 ವರ್ಷದ ರಾಜು ಆತ್ಮಹತ್ಯೆಗೆ ಶರಣಾದ ಪತಿ. ರಾಜು ಅವರ ಪತ್ನಿ ಲತಾ...

ಕುಡಿಯೋಕೆ ನೀರಿಲ್ಲದೆ ಸಾವನ್ನಪ್ಪುತ್ತಿವೆ ಪ್ರಾಣಿಗಳು: ಇಲ್ಲಿದೆ ಕರ್ನಾಟಕದ ಬರದ ಚಿತ್ರಣ

7 months ago

ಅರುಣ್ ಸಿ  ಬಡಿಗೇರ್ ಬೆಂಗಳೂರು: ಸಾಯುವ ಸ್ಥಿತಿಯಲ್ಲಿ ಬಾಯ್ತೆರೆದು ನಿಂತಿದ್ದಾಳೆ ಧರಿತ್ರಿ. ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಭೂ ತಾಯಿ ಮಕ್ಕಳು. ಇನ್ನೊಂದು ತಿಂಗಳು ಕಳೆದರೆ ಬಿಸಿಲಿನ ಬೇಗುದಿಗೆ ಸುಟ್ಟು ಕರಕಲಾಗಲಿವೆ ದೇಹಗಳು. ಒಣಗಿ ಹೋಗಲಿವೆ ಮರಗಿಡಗಳು. ಅನಾಥ ಶವವಾಗಿ ಬೀಳಲಿವೆ ಪ್ರಾಣಿ...

ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

7 months ago

ಮೈಸೂರು: ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸರಿಗಮಪದಲ್ಲಿ ಹಾಡಿದ ಮುಸ್ಲಿಂ ಯುವತಿ ಸುಹಾನ ಸೈಯದ್ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಸುಹಾನ ಸೈಯದ್...

ಪತಿ ಗಂಡಸಲ್ಲ ಎಂದ ಪತ್ನಿ: ಸಾಯಲು ನೀರಿನ ಟ್ಯಾಂಕರ್ ಹತ್ತಿದ ಪತಿರಾಯ

7 months ago

ಮೈಸೂರು: ನನ್ನ ಪತಿ ಗಂಡಸಲ್ಲ ಎಂದು ಹೆಂಡತಿ ಆರೋಪ ಮಾಡಿದಕ್ಕೆ ಮನನೊಂದ ಪತಿರಾಯ ಸಾಯಲು ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ನೀರಿನ ಟ್ಯಾಂಕರ್ ಹತ್ತಿದ್ದಾರೆ. ಅರುಣ್ ಕುಮಾರ್ ನೀರಿನ ಟ್ಯಾಂಕ್ ಏರಿದ ವ್ಯಕ್ತಿ. ಅರುಣ್ ಕುಮಾರ್ ನಗರದ ಗಾಯತ್ರಿಪುರಂ ನಿವಾಸಿ....

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ: ಯಾವೆಲ್ಲಾ ಪ್ರಾಣಿಗಳಿವೆ?

7 months ago

ಮೈಸೂರು: ಚಾಮರಾಜೇಂದ್ರ ಮೃಗಾಲಯಕ್ಕೆ ನೂತನ ಅತಿಥಿಗಳ ಆಗಮನವಾಗಿದೆ. 10 ಹೊಸ ಪ್ರಾಣಿಗಳು ಇದೀಗ ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಹೊಸ ಪ್ರಾಣಿಗಳ ಆಗಮನದಿಂದ ಮೃಗಾಲಯದಲ್ಲಿ ಸಂತಸ ಮನೆ ಮಾಡಿದೆ. ಕಡವೆ, ಕೋತಿ, ಹೆಬ್ಬಾವು ಮೈಸೂರು ಮೃಗಾಲಯಕ್ಕೆ ನೂತನವಾಗಿ ಆಗಮಿಸಿರುವ ಹೊಸ ಅತಿಥಿಗಳಾಗಿದ್ದು ಪ್ರವಾಸಿಗರ...

ಎಚ್‍ಡಿ ಕೋಟೆ, ಮಧುಗಿರಿಯಲ್ಲಿ ಭಾರೀ ಮಳೆ

7 months ago

ಮೈಸೂರು: ಬಿಸಿಲ ಧಗೆಯಿಂದ ಬೆಂದು ಹೋಗಿರೋ ಕರುನಾಡಿಗೆ ಮಳೆರಾಯ ತಂಪೆರೆಯುತ್ತಿದ್ದಾನೆ. ಇವತ್ತು ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಮಳೆರಾಯ ಪ್ರತ್ಯಕ್ಷಗೊಂಡು ತಂಪೆರೆದಿದ್ದಾನೆ. ಮೈಸೂರಿನ ಎಚ್.ಡಿ.ಕೋಟೆಯ ಅರಣ್ಯ ಭಾಗ ಸೇರಿದಂತೆ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ. ಸಂಜೆ 3 ಗಂಟೆಗೆ ಆರಂಭವಾದ ಮಳೆ ಅರ್ಧಗಂಟೆ...