Browsing Category

Mandya

ಮಂಡ್ಯದಲ್ಲಿ ವಿಚಿತ್ರ ಕುರಿಮರಿ ಜನನ

ಮಂಡ್ಯ: 2 ತಲೆ ಹಾಗೂ 4 ಕಣ್ಣಿನ ವಿಚಿತ್ರ ಕುರಿಮರಿಯೊಂದು ಮಂಡ್ಯದಲ್ಲಿ ಜನನವಾಗಿದ್ದು, ಇದೀಗ ಸಾರ್ವಜನಿಕರ ಕುತೂಹಲ ಕೆರಳಿಸಿದೆ. ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ, ನಂಜೇಗೌಡನದೊಡ್ಡಿ ಗ್ರಾಮದ ನಂಜಪ್ಪ ಎಂಬುವವರ ಮನೆಯಲ್ಲಿ ಈ ವಿಚಿತ್ರ ಕುರಿ ಜನನವಾಗಿದೆ. ಕುರಿ ಆರೋಗ್ಯವಾಗಿದ್ದು ತಾಯಿಯ ಹಾಲು…

ಮದ್ವೆಗೆ ಟಿವಿಎಸ್‍ನಲ್ಲಿ ಹೋಗ್ತಿದ್ದಾಗ ಖಾಸಗಿ ಬಸ್ ಡಿಕ್ಕಿ – ಓರ್ವ ದುರ್ಮರಣ

ಮಂಡ್ಯ: ಮದುವೆಗೆ ಹೋಗುತ್ತಿದ್ದ ವೇಳೆ ಖಾಸಗಿ ಬಸ್ಸೊಂದು ಟಿವಿಎಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದಿದೆ. ಮೃತ ದುರ್ದೈವಿ ಸ್ಕೂಟರ್ ಸವಾರನನ್ನು ಹೆಬ್ಬಣಿ ಗ್ರಾಮದ ಮಹದೇವಪ್ಪ(55) ಎಂದು ಗುರುತಿಸಲಾಗಿದೆ.…

ಸಿನಿಮೀಯ ರೀತಿ ಡಿವೈಡರ್ ದಾಟಿ ನಾಲ್ಕು ಪಲ್ಟಿಯಾಗಿ ಲಾರಿಗೆ ಕಾರು ಡಿಕ್ಕಿ – ಇಬ್ಬರು ಸಾವು, ಓರ್ವ ಗಂಭೀರ

ಮಂಡ್ಯ: ಸಿನಿಮೀಯ ರೀತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ನಾಲ್ಕು ಪಲ್ಟಿ ಹೊಡೆದು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದಿದೆ.…

ಎಚ್‍ಡಿಕೆ ಆಯ್ತು, ಈಗ ಬಿಎಸ್‍ವೈ ಬಗ್ಗೆಯೂ ಬರಲಿದೆ ಸಿನಿಮಾ! ಸಿನಿಮಾ ಹೆಸರೇನು?

ಮಂಡ್ಯ: ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಜೀವನಾಧಾರಿತ ಚಿತ್ರ ನಿರ್ಮಾಣದ ಸುದ್ದಿಯ ನಂತ್ರ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕುರಿತ ಚಿತ್ರವೂ ಕೂಡ ನಿರ್ಮಾಣವಾಗಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಎಚ್‍ಡಿಕೆ ಅವರ 20…

ಬೈಕ್, ಲಾರಿ ನಡುವೆ ಅಪಘಾತ: ಇಬ್ಬರು ಯುವಕರ ದುರ್ಮರಣ

ಮಂಡ್ಯ: ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ. 22 ವರ್ಷದ ಅಜಿತ್ ಮತ್ತು 26 ವರ್ಷದ ಉಮೇಶ್ ಮೃತ ದುರ್ದೈವಿಗಳು. ತಡರಾತ್ರಿ ಕೆಲಸದ ನಿಮಿತ್ತ ಇಬ್ಬರು ಯುವಕರು ಬೈಕ್‍ನಲ್ಲಿ ತೆರಳುತ್ತಿದ್ರು. ಈ ವೇಳೆ…

ಮಂಡ್ಯ: ಹಾವು ಕಚ್ಚಿ 2 ವರ್ಷದ ಬಾಲಕ ದುರ್ಮರಣ

ಮಂಡ್ಯ: ಹಾವು ಕಚ್ಚಿ ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ನಡೆದಿದೆ. ನಂಜುಂಡ ಮತ್ತು ಸಿತಾರ ದಂಪತಿಯ ಪುತ್ರ ಸೂರ್ಯ ಎಂಬ ಬಾಲಕನೇ ಮೃತ ದುರ್ದೈವಿ. ಮಂಗಳವಾರ ರಾತ್ರಿ ಮನೆಯ ಬಳಿ ಆಟವಾಡುತ್ತಿದ್ದಾಗ ಬಾಲಕನಿಗೆ ಹಾವು…

9ನೇ ತರಗತಿ ವಿದ್ಯಾರ್ಥಿಯ ಕತ್ತು ಕುಯ್ದು ಬರ್ಬರ ಹತ್ಯೆ – ಬೆಚ್ಚಿ ಬಿದ್ದ ಮಂಡ್ಯ ಜನ

ಮಂಡ್ಯ: 9ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಕತ್ತು ಕುಯ್ದು ಹತ್ಯೆ ಮಾಡಿರೋ ಭೀಕರ ಘಟನೆ ಮಂಡ್ಯದಲ್ಲಿ ನಡೆದಿದೆ. ಪಟ್ಟಣದ ಹೊರ ವಲಯದ ಹೇಮಗಿರಿ ರಸ್ತೆಯ ಸರ್ಕಾರಿ ನೌಕರರ ಕಾಲೋನಿ ಬಳಿ ನಿರ್ಜನ ಪ್ರದೇಶದಲ್ಲಿ ಶಾಲಾ ಬಾಲಕನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ತೇಗನಹಳ್ಳಿಯ ಆಶೀರ್ವಾದ ಅಂಗ್ಲಾ…

ಮಂಡ್ಯ: ಹೆಚ್‍ಡಿಕೆ ಸ್ಥಳಕ್ಕೆ ಬರಬೇಕೆಂದು ನೀರಿನ ಟ್ಯಾಂಕ್ ಏರಿ ಮಾನಸಿಕ ಅಸ್ವಸ್ಥನ ಪ್ರತಿಭಟನೆ

ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ ಸ್ಥಳಕ್ಕೆ ಬರಬೇಕು ಹಾಗೂ ಫ್ರೀ ಡ್ರಿಂಕ್ಸ್, ಸಿಗರೇಟ್ ಬೇಕು ಅಂತ ಮಾನಸಿಕ ಅಸ್ವಸ್ಥನೊಬ್ಬ ನೀರಿನ ಟ್ಯಾಂಕ್ ಮೇಲೆ ಹತ್ತಿ ಪ್ರತಿಭಟನೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಮಳ್ಳವಳ್ಳಿ ತಾಲೂಕಿನ ಅಂಕನಹಳ್ಳಿಯಲ್ಲಿ ಪ್ರಸನ್ನ ಎಂಬಾತ ವಿಚಿತ್ರ ಪ್ರತಿಭಟನೆ…

ಇಂದು ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಅಮೂಲ್ಯ-ಜಗದೀಶ್ ಮದುವೆ

ಮಂಡ್ಯ: ನಟಿ ಅಮೂಲ್ಯ ಜಗದೀಶ್ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಆದಿಚುಂಚನಗಿರಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಅಮೂಲ್ಯ ಜಗದೀಶ್ ಕೈ ಹಿಡಿಯಲಿದ್ದಾರೆ. ಆದಿಚುಂಚನಗಿರಿಯ ನಾಗಲಿಂಗನ ಸನ್ನಿಧಿಯಲ್ಲಿ ಮದುವೆ ನಡೆಯಲಿದ್ದು, ಅದ್ಧೂರಿ ಮಂಟಪ ಸಜ್ಜಾಗಿದೆ. ನಾನಾ ಬಗೆಯ ಪುಷ್ಪಗಳಿಂದ…

ಮಂಡ್ಯದಲ್ಲಿ ವಿಚಾರಣಾಧೀನ ಕೈದಿ ಸಾವು- ಕಾರಾಗೃಹ ಅಧೀಕ್ಷಕರ ವಿರುದ್ಧ ಕೈದಿಗಳು ಆಕ್ರೋಶ

ಮಂಡ್ಯ: ವಿಚಾರಣಾಧೀನ ಕೈದಿಯ ಸಾವಿಗೆ ಕಾರಾಗೃಹ ಅಧೀಕ್ಷಕರ ನಿಲಕ್ಷ್ಯವೇ ಕಾರಣ ಅಂತಾ ಆರೋಪಿಸಿ ಇದೀಗ ಜೈಲಿನೊಳಗೆ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಆನಂದ್ ಎಂಬಾತನೇ ಮೃತ ದುರ್ದೈವಿ. ವರ್ಷದ ಹಿಂದೆ ಪೋಕ್ಸೋ ಕಾಯ್ದೆಯಡಿ ಬಂಧಿಯಾಗಿದ್ದ…
badge