Tuesday, 24th April 2018

Recent News

11 months ago

ಅನ್ನಭಾಗ್ಯದಲ್ಲೂ ಪ್ಲಾಸ್ಟಿಕ್ ಅಕ್ಕಿ ವಿತರಣೆ ಆರೋಪ- ರಬ್ಬರ್ ಬಾಲ್‍ನಂತೆ ಪುಟಿಯುತ್ತಿದೆ ಅನ್ನದ ಉಂಡೆ

ಕೊಪ್ಪಳ: ಇದು ಇಡೀ ರಾಜ್ಯದ ಜನರು ಬೆಚ್ಚಿ ಬೀಳುವ ಸುದ್ದಿ. ಅಂಗಡಿ, ಮಾಲ್‍ಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಸಿಕ್ಕಿದ್ದಾಯ್ತು. ಇದೀಗ ಸರ್ಕಾರದ ವತಿಯಿಂದಲೇ `ಪ್ಲಾಸ್ಟಿಕ್ ಅಕ್ಕಿ’ ಭಾಗ್ಯ. ಹೌದು. ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗಿರುವ ಅಕ್ಕಿ ಪ್ಲಾಸ್ಟಿಕ್ ಅಕ್ಕಿ ಎಂಬ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯ ಪಡಿತರ ವಿತರಣಾ ಕೇಂದ್ರದಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆಯಾಗಿದೆ ಎಂದು ಆರೋಪಿಸಲಾಗಿದೆ. ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಹಕರು ಮನೆಗೆ ಬಂದು ಪರಿಶೀಲನೆ ಮಾಡಿದಾಗ ಪ್ಲಾಸ್ಟಿಕ್ ಅಕ್ಕಿ ಎಂದು […]

11 months ago

ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಕೊಪ್ಪಳ: ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ ಮುಖಕ್ಕೆ ಟವಲ್ ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಯುವಕನನ್ನು 33 ವರ್ಷದ ಸಂತೋಷ ಎಂದು ಗುರುತಿಸಲಾಗಿದೆ. ಯುವಕ ಮಂಡ್ಯ ಮೂಲದ ಲಾರಿ ಚಾಲಕನಾಗಿದ್ದಾನೆ. ಮೃತ ಯುವಕ ಭಾನುವಾರ ಸಂಜೆ ಲಾರಿಯಲ್ಲಿ ಭತ್ತ ತುಂಬಿಕೊಂಡು ಕೊಪ್ಪಳದ ಕಡೆ ಬಂದಿದ್ದು, ಇಂದು ಬೆಳಗ್ಗಿನ ಜಾವ ಕಾರಟಗಿಯ ವಿಶೇಷ ಎಪಿಎಂಸಿ ಆವರಣದಲ್ಲಿ...

ಕೃಷಿ ಬಿಟ್ಟು ಮೂಕ ಪ್ರಾಣಿಗಳ ಪಾಲಿಗೆ ದೇವರಾದ ಕೊಪ್ಪಳದ ಗವಿಸಿದ್ದಪ್ಪ

11 months ago

ಕೊಪ್ಪಳ: ಈ ಬರಗಾಲದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರೂ ಸಿಗುತ್ತಿಲ್ಲ. ಮೂರ್ನಾಲ್ಕು ಕಿಲೋ ಮೀಟರ್ ಅಲೆದಾಡಿದ್ರೂ ಜಾನುವಾರುಗಳಿಗೆ ಹನಿ ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರೊಬ್ಬರು ಬೆಳೆ ಬೆಳೆಯಲು ಹಾಕಿಸಿದ್ದ ಬೋರ್‍ವೆಲ್‍ನಲ್ಲೇ ಜಾನುವಾರುಗಳಿಗೆ ನೀರು ಕುಡಿಸುತ್ತಿದ್ದಾರೆ. ಹೌದು. ಕೊಪ್ಪಳ ತಾಲೂಕಿನ...

ಮುಂದಿನ ಸೆಮಿಸ್ಟರ್‍ನಿಂದ ಸಮಸ್ಯೆಗಳು ಪರಿಹಾರ: ವಿಟಿಯು ಕುಲಪತಿ

11 months ago

ಬೆಂಗಳೂರು/ಕೊಪ್ಪಳ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಪರೀಕ್ಷಾ ವಿಧಾನದಲ್ಲಿ ಹೊಸ ಪದ್ದತಿ ಅಳವಡಿಕೆಯಿಂದ ಫಲಿತಾಂಶ ತಡವಾಗಿದೆ. ಮುಂದಿನ ಸೆಮಿಸ್ಟರ್‍ನಿಂದ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಕುಲಪತಿ ಡಾ. ಕರಿಸಿದ್ದಪ್ಪ ಹೇಳಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗ ಬಹುತೇಕ ಎಲ್ಲ ಫಲಿತಾಂಶ ಪ್ರಕಟವಾಗಿದೆ....

ಕೊಪ್ಪಳದಲ್ಲಿ ಮತ್ತೊಂದು ವಿಚಿತ್ರ ಮಗು ಜನನ

11 months ago

ಕೊಪ್ಪಳ: ಇತ್ತೀಚೆಗಷ್ಟೇ ವಿಚಿತ್ರ ಮಗುವೊಂದು ಜನಿಸಿದ್ದ ಕಾರಣ ಸುದ್ದಿಯಾದ ಕೊಪ್ಪಳ ಇದೀಗ ಮತ್ತೆ ಇದೇ ವಿಚಾರದಲ್ಲಿ ಸುದ್ದಿಯಾಗಿದೆ. ಕುಷ್ಟಗಿ ತಾಲೂಕಿನ ಮನ್ನೇರಾಳ ಗ್ರಾಮದಲ್ಲಿ ವಿಲಕ್ಷಣ ಶಿಶು ಜನನವಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಮನ್ನೇರಾಳ ಗ್ರಾಮದ ಗಂಗವ್ವ ಗೌಡರ ಅನ್ನೋ ಮಹಿಳೆ ಶುಕ್ರವಾರದಂದು ಈ...

ಗುಂಪು ಚದುರಿಸಲು ಬೂಟ್‍ನಿಂದ ಬಾರಿಸಿದ ಪಿಎಸ್‍ಐ: ವಿಡಿಯೋ ವೈರಲ್

11 months ago

ಕೊಪ್ಪಳ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆಯೇ ಕೈ ಕೈ ಮಿಲಾಯಿಸಿದ ವೇಳೆ ಪಿಎಸ್‍ಐ ಬೂಟ್‍ನಿಂದ ಹೊಡೆದು ದರ್ಪ ತೋರಿಸಿದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ನಡೆದಿದ್ದು, ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ...

ಕೊಪ್ಪಳ: ಹನಿ ನೀರಿಗೂ ತತ್ವಾರ, ಆದ್ರೆ ಇಲ್ಲಿ ಪೆಟ್ಟಿ ಅಂಗಡಿಯಲ್ಲೂ ಸಿಗುತ್ತೆ ಮದ್ಯ

11 months ago

ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಬೀದಿಗೊಂದು ಬಾರ್ ಇದೆ. ಸ್ವತಃ ಇಲ್ಲಿನ ಶಾಸಕ ಇಕ್ಬಾಲ್ ಅನ್ಸಾರಿ ಲಿಕ್ಕರ್ ಲಾಬಿ ನಡೆಸ್ತಿದ್ದಾರೆ ಅನ್ನೋದನ್ನ ಮೊನ್ನೆಯಷ್ಟೇ ದಾಖಲೆ ಸಮೇತ ಬಹಿರಂಗಪಡಿಸಿದ್ವಿ. ಆದ್ರೆ ಇಷ್ಟೇ ಅಲ್ಲ ಇಲ್ಲಿ ಸಣ್ಣ ಪುಟ್ಟ ಪಾನ್ ಶಾಪ್, ಕಿರಾಣಿ ಅಂಗಡಿ, ಡಾಬಾ,...

ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನ

11 months ago

ಕೊಪ್ಪಳ: ವಿಲಕ್ಷಣ ಹೆಣ್ಣು ಮಗು ಜನನವಾಗಿ ಜನರಲ್ಲಿ ಅಚ್ಚರಿ ಮೂಡಿಸಿದ ಘಟನೆ ಕೊಪ್ಪಳದ ಮುದೇನೂರಿನಲ್ಲಿ ನಡೆದಿದೆ. ಮುದೇನೂರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಜನಿಸಿದ ವಿಚಿತ್ರ ಮಗು ಕೆಲಕಾಲ ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿತ್ತು. ಮಗುವನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸಿದ್ರು. ಕುಷ್ಟಗಿ ತಾಲೂಕಿನ...