Tuesday, 12th December 2017

Recent News

2 weeks ago

ಅನೈತಿಕ ಸಂಬಂಧದಿಂದಾಗಿ ಆಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ವಜಾ

ಕೊಪ್ಪಳ: ಅರ್ಚಕರು ಅಂದರೆ ಜನ ದೇವರಂತೆ ಭಾವಿಸುತ್ತಾರೆ. ಅಪಾರ ಗೌರವವನ್ನಿಟ್ಟಿರುತ್ತಾರೆ. ಆದರೆ ಇಲ್ಲಿ ಪ್ರಧಾನ ಅರ್ಚಕನೊಬ್ಬ ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಿಂದ ದೇವಸ್ಥಾನದ ಅಪವಿತ್ರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಐತಿಹಾಸಿಕ ಅಂಜನಾದ್ರಿ ಪರ್ವತದ ಆಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಎಂಬಾತ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಅದರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಜೊತೆ ದೇವಾಸ್ಥಾನದ ಆದಾಯ-ಖರ್ಚಿನ ಲೆಕ್ಕವನ್ನ ನೀಡಿಲ್ಲ. ಹೀಗಾಗಿ ದೇವಾಸ್ಥಾನದ ಟ್ರಸ್ಟಿಗಳೆಲ್ಲಾ ಸಭೆ ನಡೆಸಿ ಬಾಬಾನನ್ನು ಹೊರಹಾಕಿ […]

3 weeks ago

ಎತ್ಕೊಂಡು ಹೋಗಿ ದೇವೇಗೌಡರಿಗೆ ಗವಿಸಿದ್ದೇಶ್ವರ ದರ್ಶನ ಮಾಡಿಸಿದ ಭದ್ರತಾ ಸಿಬ್ಬಂದಿ

ಕೊಪ್ಪಳ: ಇಳಿವಯಸ್ಸಿನಲ್ಲೂ ಬೆಟ್ಟವೇರಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ದೇವರ ದರ್ಶನ ಪಡೆದಿದ್ದಾರೆ. ಇದನ್ನ ಕಂಡು ಕಾರ್ಯಕರ್ತರು ಅಚ್ಚರಿ ಪಟ್ಟಿದ್ದಾರೆ. ಕಾರ್ಯಕರ್ತರ ಸಭೆಗೆ ಕೊಪ್ಪಳಕ್ಕೆ ಆಗಮಿಸಿದ ವೇಳೆ ಎಚ್‍ಡಿ ದೇವೇಗೌಡ ಅವರು ಅಂಗರಕ್ಷಕರ ಸಹಾಯದಿಂದ ಹರಸಾಹಸಪಟ್ಟು ಗವಿಸಿದ್ದೇಶ್ವರ ದೇವರ ದರ್ಶನ ಪಡೆದ್ರು. ಅಂಗರಕ್ಷರ ಸಹಾಯದಿಂದಲೇ ಗರ್ಭ ಗುಡಿಯಲ್ಲಿ ಇಳಿದರು. ಕಳೆದ ವರ್ಷದ...

ಮಗನ ಸಿನಿಮಾ ಹುಚ್ಚುತನಕ್ಕಾಗಿ ಮೂರೂವರೆ ಎಕರೆ ಜಮೀನನ್ನೇ ಮಾರಲು ಮುಂದಾದ ಹೆತ್ತವರು!

3 weeks ago

ಕೊಪ್ಪಳ: ಕೋಟಿಗಟ್ಟಲೆ ಬಂಡವಾಳ ಹಾಕಿ ತಯಾರಾಗಿರುವ ಅದೆಷ್ಟೋ ಸಿನಿಮಾಗಳು ಫ್ಲಾಪ್ ಆಗಿರುವ ಉದಾಹರಣೆಗಳಿವೆ. ಆದರೆ ಇದು ಬಣ್ಣದ ಬದುಕಿನ ಸೆಳೆತ ಎನ್ನಬೇಕೋ ಅಥವಾ ಹುಚ್ಚುತನ ಎನ್ನಬೇಕೋ ಗೊತ್ತಿಲ್ಲ. ಮಗನ ಸಿನಿಮಾ ಹುಚ್ಚಿಗೆ ತಂದೆ-ತಾಯಿ ತಮಲ್ಲಿರು ಜಮೀನನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ. ಹೌದು....

ಸಾವಿನಲ್ಲೂ ಒಂದಾದ ದಂಪತಿ- 4 ಗಂಟೆಗೆ ಪತಿ, 8 ಗಂಟೆ ಹೊತ್ತಿಗೆ ಪತ್ನಿ ಸಾವು

3 weeks ago

ಕೊಪ್ಪಳ: ಜಿಲ್ಲೆಯ ಗಂಗಾವತಿಯ ಜಯನಗರದಲ್ಲಿ ಗಂಡ-ಹೆಂಡತಿ ಸಾವಿನಲ್ಲೂ ಒಂದಾಗಿರೋ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ 4 ಗಂಟೆಗೆ ವಯೋಸಹಜವಾಗಿ 65 ವರ್ಷದ ದುರ್ಗಪ್ಪ ನಾಯಕ ಮೃತಪಟ್ಟಿದ್ದಾರೆ. ಪತಿಯ ಸಾವಿನ ಬಳಿಕ ಅಂದರೆ ಬೆಳಗ್ಗೆ 8 ಗಂಟೆ ಸುಮಾರಿಗೆ ಪತ್ನಿ ಹುಲಿಗೆಮ್ಮ(55)...

ನೀರು ಕುಡಿಯಲು ಹೋಗಿ ಕೊಡದಲ್ಲಿ ಕತ್ತು ಸಿಲುಕಿಸಿಕೊಂಡ ನಾಯಿ

3 weeks ago

ಕೊಪ್ಪಳ: ನಾಯಿಯೊಂದು ನೀರು ಕುಡಿಯಲು ಹೋಗಿ ತನ್ನ ಕತ್ತನ್ನು ಕೊಡದಲ್ಲಿ ಸಿಲುಕಿಸಿಕೊಂಡು ಬಳಿಕ ಗ್ರಾಮಸ್ಥರು ಹರಸಾಹಸಪಟ್ಟು ಕತ್ತಿನಿಂದ ಕೊಡ ಬೇರ್ಪಡಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ತಾಲೂಕಿನ ಮುದೇನೂರ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ ನಾಯಿ ನೀರು ಕುಡಿಯಲು ಪ್ಲಾಸ್ಟಿಕ್ ಕೊಡದಲ್ಲಿ ಇಣುಕಿದೆ. ಆದರೆ...

ಕರ್ತವ್ಯ ನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

4 weeks ago

ಕೊಪ್ಪಳ: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರಿಗೆ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳದ ಡಿ.ಆರ್ ಪೊಲೀಸ್ ಪೇದೆಯಾಗಿದ್ದ 40 ವರ್ಷದ ಧರ್ಮಣ್ಣ ಪೂಜಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಎಂದಿನಂತೆ ಬೆಳಗಿನ ಜಾವ ಕರ್ತವ್ಯದಲ್ಲಿದ್ದಾಗ ಧರ್ಮಣ್ಣ ಅವರಿಗೆ...

ಸರ್ಜರಿಗೆ 5 ಸಾವಿರವಾಗುತ್ತೆ ಎಂದು ನಂತರ 15 ಸಾವಿರ ಕೊಡಿ ಅಂದ್ರು- ಕಿಮ್ಸ್ ನಿರ್ದೇಶಕ ದುಡ್ಡು ಪೀಕುತ್ತಿರುವ ವಿಡಿಯೋ ವೈರಲ್

4 weeks ago

ಕೊಪ್ಪಳ: ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕೋ ವಿಧೇಯಕ ಜಾರಿ ಮಾಡುತ್ತಿರೋ ಬೆನ್ನಲ್ಲೇ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರ ಅಕ್ರಮ ಬಟಾಬಯಲಾಗಿದೆ. ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆ ಸಂಜೀವಿನಿ ಆಗಬೇಕಿತ್ತು. ಆದರೆ ಚಿಕಿತ್ಸೆಯ ನೆಪದಲ್ಲಿ ಕಿಮ್ಸ್ ನಿರ್ದೇಶಕ ದುಡ್ಡು ಪೀಕತ್ತಿರೋ...

ಟೀ ಮಾರಾಟ ಮಾಡಿ ಸಂಪಾದನೆ- ಭರ್ಜರಿಯಾಗಿ ಇಂಗ್ಲಿಷ್ ಮಾತನಾಡುವ ಹೈಟೆಕ್ ಹಳ್ಳಿ ಮಕ್ಕಳು

4 weeks ago

ಕೊಪ್ಪಳ: ಅದು ವಿದೇಶಿ ಪ್ರವಾಸಿಗರ ಸ್ವರ್ಗದ ತಾಣ. ಅಲ್ಲಿನ ಸೂರ್ಯಾಸ್ತ ನೋಡಲು ದೇಶ, ವಿದೇಶದಿಂದ ಜನರು ಬರುತ್ತಾರೆ. ಅಲ್ಲಿಗೆ ಕೆಲವು ಶಾಲಾ ಮಕ್ಕಳು ಬಂದು ಟೀ ಮಾರಿಕೊಂಡು ಸಂಪಾದನೆ ಮಾಡುತ್ತಾರೆ. ಜೊತೆಗೆ ಭರ್ಜರಿಯಾಗಿ ಇಂಗ್ಲಿಷ್ ಭಾಷೆಯಲ್ಲಿ ಸರಾಗವಾಗಿ ಮಾತನಾಡಿಕೊಂಡು ವ್ಯವಹಾರ ನಡೆಸುತ್ತಾರೆ....