Wednesday, 18th October 2017

Recent News

8 months ago

ಇಂದು ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮನೆಯಿಂದ ನಾಪತ್ತೆ

ಕೊಪ್ಪಳ: ಇಂದು ನಿಶ್ಚತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಂಗಳವಾರ ಮಧ್ಯಾಹ್ನ ತನ್ನ ಗೆಳತಿಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಮನೆಯಿಂದ ಹೊರ ಹೋದವಳು ನಾಪತ್ತೆಯಾಗಿದ್ದಾಳೆ. ಕವಿತಾ(22) ನಾಪತ್ತೆಯಾಗಿರುವ ಯುವತಿ. ಗಂಗಾವತಿ ತಾಲೂಕಿನ ಯರಡೋಣ ಗ್ರಾಮದ ನಿವಾಸಿಯಾಗಿರುವ ಕವಿತಾ ಜೊತೆ ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಗ್ರಾಮದ ಯುವಕನೊಂದಿಗೆ ಮದುವೆ ನಿಶ್ಚಯ ಕಾರ್ಯಕ್ರಮ ನಡೆಯಬೇಕಿತ್ತು. ಪ್ರಿಯಕರನ ಜೊತೆ ಪರಾರಿ?: ಕವಿತಾ ಕಳೆದ 2 ವರ್ಷಗಳಿಂದ ಕಾರಟಗಿ ಗ್ರಾಮದ ಶ್ರೀಕಾಂತ್ ಎಂಬ ಯುವಕನ ಜೊತೆ ಪ್ರೇಮಾಂಕುರವಾಗಿತ್ತು. ಕವಿತಾ ಮತ್ತು ಶ್ರೀಕಾಂತ್ […]

8 months ago

ಬತ್ತಿದ ತುಂಗಭದ್ರ ಜಲಾನಯನ ಪ್ರದೇಶ: ಜಲಚರಗಳ ಸಾವು

ಕೊಪ್ಪಳ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದ ನದಿ ಸಂಪೂರ್ಣ ಬತ್ತಿದ್ದು ಜಲಚರಗಳಿಗೆ ಕುತ್ತು ಬಂದಿದೆ. ಭೀಕರ ಬರದಿಂದ ಬತ್ತಿದ ತುಂಗಾಭದ್ರಾ ನದಿಯಲ್ಲಿನ ಮೀನು ಸೇರಿದಂತೆ ಅನೇಕ ಜಲಚರಗಳು ಸಾವನ್ನಪ್ಪುತ್ತಿವೆ. ಜಿಲ್ಲೆಯ ಗಂಗಾವತಿ ತಾಲೂಕಿನ ನಂದಿಹಳ್ಳಿ ಗ್ರಾಮದ ಜಲಾನಯನ ಪ್ರದೇಶದಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ. ಮೀನು ಹಿಡಿಯುವುದನ್ನೇ ನಂಬಿ ಜೀವನ ಸಾಗಿಸುತ್ತಿದ್ದವರು ನದಿಯಲ್ಲಿ ಮೀನಿಲ್ಲದೇ ಜೀವನ...

ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ- ದಲಿತರಿಗೆ ಮನೆ ಬಾಡಿಗೆಗೆ ಕೊಡದೆ ಹೊರಹಾಕಿದ್ರು

8 months ago

ಕೊಪ್ಪಳ: ದೇಶದ 70 ನೇ ಸ್ವ್ಯಾತಂತ್ರ್ಯೋತ್ಸವದ ಹೊಸ್ತಿಲಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮಾತ್ರ ಜೀವಂತವಾಗಿದೆ. ದಲಿತ ಕುಟುಂಬವೊಂದನ್ನು ಬಾಡಿಗೆ ಮನೆಯಿಂದ ಹೊರ ಹಾಕುವ ಮೂಲಕ, ಅಸ್ಪೃಶ್ಯತೆ ಮಾಡಿದ್ದಲ್ಲದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದಲ್ಲಿ...

ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

8 months ago

ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ...

ಆಫ್ರಿಕಾದಲ್ಲಿ ಬಲಿಯಾದ ಕೊಪ್ಪಳ ವ್ಯಕ್ತಿಯ ಮೃತದೇಹ ಭಾರತಕ್ಕೆ ತರಲು ಸುಷ್ಮಾ ಸಹಾಯ

8 months ago

ಕೊಪ್ಪಳ: ಉತ್ತರ ಆಪ್ರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪಳ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಇದೀಗ ವ್ಯಕ್ತಿಯ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಸಹಾಯ ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸೈಯದ್ ಫಾರೂಕ್ ಬಾಷಾ ಖಾದ್ರಿ (25) ಶನಿವಾರ ದುಷ್ಕರ್ಮಿಗಳ...

ಆಪರೇಷನ್ ಮಾಡದೆ 8 ತಿಂಗಳ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿ ಹೊರತೆಗೆದ ಕೊಪ್ಪಳದ ವೈದ್ಯರು

8 months ago

ಕೊಪ್ಪಳ: ಎಂಟು ತಿಂಗಳ ಮಗುವೊಂದು ಆಕಸ್ಮಿಕವಾಗಿ ನುಂಗಿದ್ದ ಮೆಂಥೋಪ್ಲಸ್ ಡಬ್ಬಿಯನ್ನ ಆಪರೇಷನ್ ಇಲ್ಲದೆ ಹೊರತೆಗೆಯುವಲ್ಲಿ ಕೊಪ್ಪಳದ ಕಿಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ. ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಎಂಟು ತಿಂಗಳ ಮಗು ಮೆಂಥೋಪ್ಲಸ್ ಡಬ್ಬಿ ನುಂಗಿದ ಪರಿಣಾಮ ಸಾವು ಬದುಕಿನ ಮಧ್ಯೆ ಹೋರಾಡ್ತಿತ್ತು. ವೈದ್ಯರು...

ವಿಚಾರಣೆಗಾಗಿ ಕರೆತಂದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ

8 months ago

ಕೊಪ್ಪಳ: ವಿಚಾರಣೆಗಾಗಿ ಕರೆತಂದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹುಲಿಗಿ ಗ್ರಾಮದಲ್ಲಿ ಪೊಲಿಸರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಹುಲಗಪ್ಪ (32) ಎನ್ನುವ ವ್ಯಕ್ತಿ ಪರಾರಿಯಾದ್ದಾನೆ. ಈತ ಗಲಾಟೆ ಮಾಡಿಕೊಂಡು ಪೊಲೀಸೊಬ್ಬರಿಗೆ ಚಪ್ಪಲಿಯಿಂದ ಹೊಡೆದಿದ್ದ....

ರಾತ್ರೋ ರಾತ್ರಿ ಕಮಾನು ಕೆಡವಿ ಜನರಿಗೆ ಹೆದರಿ ನಮಗೇನೂ ಗೊತ್ತಿಲ್ಲ ಅಂತಿದ್ದಾರೆ ಅಧಿಕಾರಿಗಳು!

9 months ago

ಕೊಪ್ಪಳ: ನಗರದ ಮಧ್ಯಭಾಗದಲ್ಲಿದ್ದ ಐತಿಹಾಸಿಕ ಕಮಾನುಗಳನ್ನು ಕದ್ದುಮುಚ್ಚಿ ಸಾರ್ವಜನಿಕರ ವಿರೋಧದ ನಡುವೆಯೂ ತೆರವು ಮಾಡಲಾಗಿದೆ. ನಗರ ಸಭೆಯ ಅಧಿಕಾರಿಗಳು ಸಾರ್ವಜನಿಕರ ವಿರೋಧಕ್ಕೆ ಹೆದರಿ ಮಧ್ಯರಾತ್ರಿ 2 ಗಂಟೆಗೆ ಕಮಾನುಗಳನ್ನು ಕೆಡವಿದ್ದಾರೆ. ಹಿಂದೆಯೂ ಈ ಕಮಾನುಗಳನ್ನು ಕೆಡವಲು ಮುಂದಾಗಿದ್ದ ಅಧಿಕಾರಿಗಳು ಜನರ ವಿರೋಧಕ್ಕೆ...