Browsing Category

Koppal

ಕೊಪ್ಪಳ: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಸಿ, ಅಭಿಮಾನಿಗಳ ಪ್ರತಿಭಟನೆ

ಕೊಪ್ಪಳ: ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಸಿ ಬಳಿದು ಅವಮಾನ ಮಾಡಿರುವ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಯಲಬುರ್ಗಾ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿರುವ ಟಿಪ್ಪು ಸುಲ್ತಾನ್‍ರ ಕಟೌಟ್‍ಗೆ ಕೆಲ ಕಿಡಿಗೇಡಿಗಳು…

ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ- ದಲಿತರಿಗೆ ಮನೆ ಬಾಡಿಗೆಗೆ ಕೊಡದೆ ಹೊರಹಾಕಿದ್ರು

ಕೊಪ್ಪಳ: ದೇಶದ 70 ನೇ ಸ್ವ್ಯಾತಂತ್ರ್ಯೋತ್ಸವದ ಹೊಸ್ತಿಲಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಮಾತ್ರ ಜೀವಂತವಾಗಿದೆ. ದಲಿತ ಕುಟುಂಬವೊಂದನ್ನು ಬಾಡಿಗೆ ಮನೆಯಿಂದ ಹೊರ ಹಾಕುವ ಮೂಲಕ, ಅಸ್ಪೃಶ್ಯತೆ ಮಾಡಿದ್ದಲ್ಲದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ…

ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ ಗಂಗಾವತಿಯ…

ಆಫ್ರಿಕಾದಲ್ಲಿ ಬಲಿಯಾದ ಕೊಪ್ಪಳ ವ್ಯಕ್ತಿಯ ಮೃತದೇಹ ಭಾರತಕ್ಕೆ ತರಲು ಸುಷ್ಮಾ ಸಹಾಯ

ಕೊಪ್ಪಳ: ಉತ್ತರ ಆಪ್ರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕೊಪ್ಪಳ ಮೂಲದ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಇದೀಗ ವ್ಯಕ್ತಿಯ ಮೃತದೇಹವನ್ನು ಭಾರತಕ್ಕೆ ತರುವಲ್ಲಿ ಸಹಾಯ ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸೈಯದ್ ಫಾರೂಕ್ ಬಾಷಾ ಖಾದ್ರಿ (25) ಶನಿವಾರ…

ಆಪರೇಷನ್ ಮಾಡದೆ 8 ತಿಂಗಳ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿ ಹೊರತೆಗೆದ ಕೊಪ್ಪಳದ ವೈದ್ಯರು

ಕೊಪ್ಪಳ: ಎಂಟು ತಿಂಗಳ ಮಗುವೊಂದು ಆಕಸ್ಮಿಕವಾಗಿ ನುಂಗಿದ್ದ ಮೆಂಥೋಪ್ಲಸ್ ಡಬ್ಬಿಯನ್ನ ಆಪರೇಷನ್ ಇಲ್ಲದೆ ಹೊರತೆಗೆಯುವಲ್ಲಿ ಕೊಪ್ಪಳದ ಕಿಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ. ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಎಂಟು ತಿಂಗಳ ಮಗು ಮೆಂಥೋಪ್ಲಸ್ ಡಬ್ಬಿ ನುಂಗಿದ ಪರಿಣಾಮ ಸಾವು ಬದುಕಿನ ಮಧ್ಯೆ…

ವಿಚಾರಣೆಗಾಗಿ ಕರೆತಂದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ

ಕೊಪ್ಪಳ: ವಿಚಾರಣೆಗಾಗಿ ಕರೆತಂದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿಯಾಗಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹುಲಿಗಿ ಗ್ರಾಮದಲ್ಲಿ ಪೊಲಿಸರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಹುಲಗಪ್ಪ (32) ಎನ್ನುವ ವ್ಯಕ್ತಿ ಪರಾರಿಯಾದ್ದಾನೆ. ಈತ ಗಲಾಟೆ ಮಾಡಿಕೊಂಡು…

ರಾತ್ರೋ ರಾತ್ರಿ ಕಮಾನು ಕೆಡವಿ ಜನರಿಗೆ ಹೆದರಿ ನಮಗೇನೂ ಗೊತ್ತಿಲ್ಲ ಅಂತಿದ್ದಾರೆ ಅಧಿಕಾರಿಗಳು!

ಕೊಪ್ಪಳ: ನಗರದ ಮಧ್ಯಭಾಗದಲ್ಲಿದ್ದ ಐತಿಹಾಸಿಕ ಕಮಾನುಗಳನ್ನು ಕದ್ದುಮುಚ್ಚಿ ಸಾರ್ವಜನಿಕರ ವಿರೋಧದ ನಡುವೆಯೂ ತೆರವು ಮಾಡಲಾಗಿದೆ. ನಗರ ಸಭೆಯ ಅಧಿಕಾರಿಗಳು ಸಾರ್ವಜನಿಕರ ವಿರೋಧಕ್ಕೆ ಹೆದರಿ ಮಧ್ಯರಾತ್ರಿ 2 ಗಂಟೆಗೆ ಕಮಾನುಗಳನ್ನು ಕೆಡವಿದ್ದಾರೆ. ಹಿಂದೆಯೂ ಈ ಕಮಾನುಗಳನ್ನು ಕೆಡವಲು ಮುಂದಾಗಿದ್ದ…

ಶಾಲಾ ವಾರ್ಷಿಕೋತ್ಸವದಂದು ತಾಯಿಯ ಪಾದ ತೊಳೆದು ಪೂಜೆ ಸಲ್ಲಿಸಿದ ಕೊಪ್ಪಳದ ಮಕ್ಕಳು

ಕೊಪ್ಪಳ: ಜಿಲ್ಲೆಯ ಹನುಮಸಾಗರ ಪಟ್ಟಣದ ಸರ್ವೋದಯ ಖಾಸಗಿ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ತಮ್ಮ ತಾಯಂದಿರ ಪಾದ ಪೂಜೆ ಮಾಡಿ ಜನ್ಮದಾತೆಯರಿಗೆ ನಮನ ಸಲ್ಲಿಸಿದರು. ಫೆಬ್ರವರಿ ಮತ್ತು ಮಾರ್ಚ ತಿಂಗಳು ಬಂದರೆ ಎಲ್ಲ ಶಾಲೆಗಳಲ್ಲಿ ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಸರ್ವೋದಯ…

ಅಧಿಕಾರ ಇಲ್ಲ, ಜನ ಬರ್ತಿಲ್ಲ ಅಂತ ಹತಾಶರಾಗಿ ಎಸ್‍ಎಂಕೆ ಪಕ್ಷ ತೊರೆದಿದ್ದಾರೆ: ರಾಯರೆಡ್ಡಿ

ಕೊಪ್ಪಳ: ಅಧಿಕಾರ ಇಲ್ಲ, ಜನ ಬರುತ್ತಿಲ್ಲ ಎಂದು ಹತಾಶರಾಗಿ ಎಸ್‍ಎಂ ಕೃಷ್ಣ ಪಕ್ಷ ತೊರೆದಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿಕೆ ನೀಡಿದ್ದಾರೆ. ಇಂದು ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಯರಡ್ಡಿ, ಎಸ್‍ಎಂ ಕೃಷ್ಣ ಹಿಂದೆ ಎಲ್ಲಾ ರೀತಿಯ ಅಧಿಕಾರ…

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ರೂ ಯುವಕನಿಗೆ ಯಾರೂ ಸಹಾಯ ಮಾಡಲಿಲ್ಲ!

ಕೊಪ್ಪಳ: ಯುವಕನ ಮೇಲೆ ಬಸ್ ಹರಿದ ನಂತ್ರ ಗಾಯಗೊಂಡ ಯುವಕ ಸಹಾಯಕ್ಕೆ ಅಂಗಲಾಚಿದ್ರೂ ಯಾವ ಸ್ಥಳೀಯರು ಸಹಾಯ ಮಾಡದ ಅಮಾನವೀಯ ಘಟನೆ ಕೊಪ್ಪಳ ನಗರದ ಪಬ್ಲಿಕ್ ಗ್ರೌಂಡ್ ಬಳಿ ಇಂದು ಬೆಳಗ್ಗೆ 09:30ರ ವೇಳೆಯಲ್ಲಿ ನಡೆದಿದೆ. ಅನ್ವರ್ ಶಾಬುದ್ದೀನ್ (17) ಅಪಘಾತಕ್ಕೊಳಗಾದ ಯುವಕ. ಅನ್ವರ್ ಮೇಲೆ…