Sunday, 19th November 2017

Recent News

5 months ago

ವೈದ್ಯರ ನಿರ್ಲಕ್ಷ್ಯದಿಂದ ಕೋಮಾ ಸೇರಿದ ಬಾಣಂತಿ

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಕಡತೂರು ಗ್ರಾಮದ ಮಹಿಳೆಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಕೋಮಾದ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಾಣಂತಿ ದಿವ್ಯ ಎಂಬವರು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಕೋಮಾದಲ್ಲಿದ್ದಾರೆ. ದಿವ್ಯ ಕಳೆದ ಮೂರು ತಿಂಗಳಿನಿಂದ ಕೋಮಾದಲ್ಲಿದ್ದು, ನಗರದ ಆರ್‍ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮಾರ್ಚ್ 31ರಂದು ದಿವ್ಯಾ ಮಾಲೂರಿನ ಸೇಂಟ್ ಮಾರಿಸ್ ಖಾಸಗಿ ಅಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿದ್ದರು. ಹೆರಿಗೆ ವೇಳೆ ಅತಿಯಾದ ಅರಿವಳಿಕೆ ಹೊಂದಿದ್ದ ಚುಚ್ಚುಮದ್ದು ನೀಡಿದ್ದ ಹಿನ್ನೆಲೆಯಲ್ಲಿ ಕೋಮಾ […]

5 months ago

ಕೋಲಾರ: ವ್ಯಕ್ತಿಯ ದೇಹದ ಅರ್ಧ ಭಾಗವನ್ನೇ ತಿಂದು ಹಾಕಿದ ಚಿರತೆ!

ಕೋಲಾರ: ಚಿರತೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ವೀರಕಪುತ್ರ ಗ್ರಾಮದ ಬಳಿ ನಡೆದಿದೆ. ಬಂಡೂರು ಗ್ರಾಮದ ವೆಂಕಟೇಶಪ್(45) ಚಿರತೆ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದು, ಇವರು ಕಳೆದ ರಾತ್ರಿ ಹಳೆಪಾಳ್ಯದಿಂದ ತಮ್ಮ ಗ್ರಾಮಕ್ಕೆ ತೆರಳುವ ವೇಳೆ ಈ ದಾಳಿ ನಡೆದಿದೆ. ವ್ಯಕ್ತಿಯ ಅರ್ಧ ಭಾಗದಷ್ಟು ದೇಹವನ್ನ ಚಿರತೆ ತಿಂದುಹಾಕಿದೆ. ಘಟನೆಯಿಂದ ಸುತ್ತಮುತ್ತಲ...

ಬರದ ನಾಡಲ್ಲಿ ಬಂಗಾರದ ಬೆಳೆ ಬೆಳೆದ ರೈತ ಚಂದ್ರಪ್ಪ- ಪ್ಲಾಸ್ಟಿಕ್ ಬದಲಿಗೆ ನ್ಯೂಸ್‍ಪೇಪರ್ ಹೊದಿಕೆ

5 months ago

ಕೋಲಾರ: ಹನಿ ನೀರಿಗೂ ಪರದಾಡ್ತಿರೋ ಕೋಲಾರದಲ್ಲಿ ಪರಿಸರ ಸ್ನೇಹಿ ಕೃಷಿ ವಿಧಾನದಿಂದ ಅತ್ಯಧಿಕ ಇಳುವರಿ ಪಡೆದಿದ್ದಾರೆ. ಅದರಲ್ಲೂ ಪ್ಲಾಸ್ಟಿಕ್ ಬದಲಿಗೆ ನ್ಯೂಸ್‍ಪೇಪರ್ ಬಳಸಿ ಮಾದರಿ ರೈತನಾಗಿದ್ದಾರೆ. ಇವತ್ತಿನ ಪಬ್ಲಿಕ್ ಹೀರೋದಲ್ಲಿ ಚಂದ್ರಪ್ಪ ಅವರ ಯಶೋಗಥೆ ಇದು. ಹೌದು. ಕ್ಯಾಪ್ಸಿಕಂ ಬೆಳೆಗೆ ನ್ಯೂಸ್...

ಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ನಾಗರಹಾವಿನ ಜೊತೆ 17 ಮರಿಹಾವುಗಳನ್ನು ಕೊಂದ್ರು!

5 months ago

ಕೋಲಾರ: ನಾಗರಹಾವು ಕಚ್ಚಿ ರೈತ ಮೃತಪಟ್ಟಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಹಾವು ಮತ್ತು ಅದರ ಜೊತೆಗಿದ್ದ 17 ಮರಿ ಹಾವುಗಳನ್ನ ಕೊಂದಿರುವ ಮನಕಲಕುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದಿನ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾವು...

ಶೋಭಾ ಕರಂದ್ಲಾಜೆಯವರು ಪ್ರಭಾಕರ್ ಭಟ್ ಭಾಷಣ ಕೇಳಲಿ: ಸಂಸದೆಗೆ ಖಾದರ್ ತಿರುಗೇಟು

5 months ago

ಕೋಲಾರ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಮ್ಮಿಂದ ಯಾವುದೇ ಭಯಭೀತಿಯ ವಾತಾವರಣ ನಿರ್ಮಾಣವಾಗಿಲ್ಲ. ಪ್ರಭಾಕರ್ ಭಟ್ ಅವ್ರ ಭಾಷಣಗಳು ಪ್ರಚೋದನಾಕಾರಿಯಾಗಿದೆ. ಹೀಗಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಒಮ್ಮೆ ಅವರ ಭಾಷಣ ಕೇಳಲಿ ಎಂದು ಆಹಾರ ಸಚಿವ ಯು ಟಿ ಖಾದರ್...

ಮದುವೆ ಆರತಕ್ಷತೆ ಊಟ ಸೇವಿಸಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

5 months ago

ಕೋಲಾರ: ಮದುವೆ ಆರತಕ್ಷತೆ ಊಟ ಸೇವಿಸಿದ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿರುವ ಘಟನೆ ಕೋಲಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೋಲಾರದ ನುಕ್ಕನಹಳ್ಳಿ ಗ್ರಾಮದ ದಿವ್ಯ ಹಾಗೂ ಮುರಳಿ ಎಂಬವರ ಮದುವೆ ಇದೇ ಶನಿವಾರ-ಭಾನುವಾರ...

ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ- ಕೋಲಾರದಲ್ಲಿ ನರ್ಸಿಂಗ್ ಹೋಂ ಮೇಲೆ ರೇಡ್

5 months ago

– ಕಲಬುರಗಿಯಲ್ಲಿ ಜೆಸ್ಕಾಂ ಎಂಜಿನಿಯರ್ ಮನೆ ಮೇಲೆ ದಾಳಿ ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಬೇಟೆ ಆರಂಭಿಸಿದ್ದಾರೆ. ರಾಜ್ಯ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕುಮಾರ್‍ಗೌಡ ಮತ್ತವರ ಸ್ನೇಹಿತ ಪ್ರಕಾಶ್ ಅವರಿಗೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಎಸಿಬಿ...

ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

5 months ago

ಕೋಲಾರ: ಇಂದು ಕನ್ನಡಪರ ಸಂಘಟನೆಗಳು ನೀಡಿದ್ದ `ಕರ್ನಾಟಕ ಬಂದ್’ಗೆ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೆ ಬಹುತೇಕ ಮದುವೆಗೆ ಬರಬೇಕಾದ ಜನ ಬರದೇ ಮಂಟಪಗಳು ಬಿಕೋ ಎನ್ನುತ್ತಿದ್ದವು. ನಗರದ ವಕೀಲ ಕೋದಂಡಪ್ಪನವರ ಮಗ ವೀರೇಂದ್ರ ಹಾಗೂ ಚಿತ್ರಾ ಎಂಬವರ ಮದುವೆಗೂ ಬಂದ್...