Sunday, 19th November 2017

Recent News

7 days ago

ಮನೆಯೊಳಗೇ ತಂದೆ-ತಾಯಿಯ ಸಮಾಧಿ ಮಾಡಿ ಪೂಜಿಸ್ತಿದ್ದಾರೆ ಎನ್ ಟಿ ಆರ್ ಅಭಿಮಾನಿ!

ಕೋಲಾರ: ಜನ್ಮ ನೀಡಿ ಕಷ್ಟಪಟ್ಟು ಸಾಕಿ ಬೆಳೆಸಿದ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬರುವ ಮಕ್ಕಳು ಇರುವ ಇಂತಹ ಸಂದರ್ಭದಲ್ಲಿ ಇಲ್ಲಿ ವ್ಯಕ್ತಿ ಎಲ್ಲರಿಗೂ ಆದರ್ಶವಾಗಿದ್ದಾರೆ. ತಮ್ಮ ತಂದೆ-ತಾಯಿ ಮರಣ ನಂತರ ಅವರನ್ನು ಮನೆಯಲ್ಲಿಯೇ ಸಮಾಧಿ ಮಾಡಿ ನಿತ್ಯ ಪೂಜಿಸುತ್ತಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ಚಿತ್ರನಟನ ಪ್ರತಿಮೆಯನ್ನು ರೂಪಿಸಿ ಮನೆಯ ಮೇಲೆ ಸ್ಥಾಪನೆ ಮಾಡಿದ್ದಾರೆ. ಕೋಲಾರ ತಾಲೂಕು ಸೀಪುರ ಗ್ರಾಮದ ನಿವಾಸಿಯಾಗಿರುವ ನಾರಾಯಣಪ್ಪ ವೃತ್ತಿಯಲ್ಲಿ ಕುರಿಗಾಯಿ. ಕುರಿಕಾಯುವ ವೃತ್ತಿ ಮಾಡುತ್ತಿದ್ದರೂ ಇವರ ಆದರ್ಶ-ಅಭಿಮಾನ ಇಂದು ಎಲ್ಲರಿಗೂ ಮಾದರಿ ಎನ್ನುವಂತಿದೆ. […]

1 week ago

ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರಕ್ಕೆ ಗುಂಪುಗಳ ಮಧ್ಯೆ ಘರ್ಷಣೆ- ಐವರಿಗೆ ಗಾಯ

ಕೋಲಾರ: ದಾರಿಯಲ್ಲಿ ಪೈಪ್ ಲೈನ್ ಅಳವಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಐದು ಜನರಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸಮೀಪದ ಕದಿರೇನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಹಾಗೂ ಕುಟುಂಬಸ್ಥರು ಶೌಚಾಲಯ ನೀರನ್ನು ಮನೆ ಮುಂದೆ ಬಿಡಲಾಗುತ್ತಿದೆ ಎಂದು ದಲಿತ...

ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಬಾಡೂಟ ಪಾಲಿಟಿಕ್ಸ್- ಶಾಸಕ ವರ್ತೂರ್ ಪ್ರಕಾಶ್‍ರಿಂದ ಭರ್ಜರಿ ಊಟ

2 weeks ago

ಕೋಲಾರ: 2018ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ ಜಿಲ್ಲೆಯ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಕಳೆದ ಕೆಲವು ದಿನಗಳ ಹಿಂದೆ ಚಿಂತಾಮಣಿ ಶಾಸಕರಾದ ಜೆ.ಕೆ ಕೃಷ್ಣ ರೆಡ್ಡಿ ತಮ್ಮ ಮತದಾರರನ್ನು ಸೆಳೆಯಲು ಬಾಡೂಟ ಕಾರ್ಯಕ್ರಮ ಏರ್ಪಡಿಸಿದಂತೆ. ಇಂದು ಕೋಲಾರ ಪಕ್ಷೇತರ ಶಾಸಕ ವರ್ತೂರು...

ಬಹು ವರ್ಷಗಳ ನಂತರ ತುಂಬಿದ ಕೋಲಾರ ಕೆರೆಗಳು-ಜನತೆಯಲ್ಲಿ ಹೊಸ ಆತಂಕ

2 weeks ago

ಕೋಲಾರ: ಬಹುವರ್ಷಗಳ ನಂತರ ಬಯಲು ಸೀಮೆ ಪ್ರದೇಶದ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ಆದರೆ ತುಂಬಿದ ಕೆರೆಗಳಲ್ಲಿನ ನೀರು ಹಸಿರು ಬಣ್ಣ ಪಡೆದಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಸುಮಾರು 15 ವರ್ಷಗಳ ನಂತರ ಕೆರೆ ತುಂಬಿದ್ದು ಗ್ರಾಮಸ್ಥರಲ್ಲಿ ಮುಗುಳುನಗೆಯನ್ನು...

ಆಗ್ನಿಶಾಮಕ ದಳ ಕಚೇರಿಗೆ ಬಂದ ಅಪರೂಪದ ಚಿಪ್ಪು ಹಂದಿ

2 weeks ago

ಕೋಲಾರ: ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿರುವ ಅಗ್ನಿಶಾಮಕ ದಳದ ಕಚೇರಿಗೆ ಕಳೆದ ರಾತ್ರಿ ಚಿಪ್ಪು ಹಂದಿಯೊಂದು ಅತಿಥಿಯಾಗಿ ಬಂದು ಅಚ್ಚರಿ ಮೂಡಿಸಿತ್ತು. ಆರಂಭದಲ್ಲಿ ಸ್ಥಳೀಯರು ಈ ಪ್ರಾಣಿಯನ್ನು ನೋಡಿ ಅದರ ಮೇಲೆ ದಾಳಿಗೆ ಮುಂದಾಗಿದ್ದಾರೆ. ನಂತರ ಅದು ಅಪರೂಪದ ಪ್ರಾಣಿ ಪ್ರಬೇಧಕ್ಕೆ ಸೇರಿದ...

ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟ- ಇಬ್ಬರಿಗೆ ಗಾಯ

3 weeks ago

ಕೋಲಾರ: ಮದುವೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದ ಕೋಟೆ ಬೀದಿಯಲ್ಲಿ ಜಯಮ್ಮ ಎಂಬವರ ಮನೆಯಲ್ಲಿ ತಡರಾತ್ರಿ ಈ ಅವಘಢ ಸಂಭವಿಸಿದೆ. ಮನೆಯಲ್ಲಿ ನೀರು ಕಾಯಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ...

ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆ ಮಾಡುತ್ತಿದ್ದವರ ಮೇಲೆ ದಾಳಿ

4 weeks ago

ಕೋಲಾರ: ನಗರದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರದ ಮೇಲೆ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ಜಿ.ಸತ್ಯವತಿ ನೇತೃತ್ವದ ತಂಡ ದಾಳಿ ನಡೆಸಿದೆ. ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳು ನಡೆಯುತ್ತವೆ, ಹಲವಾರು ಜನ ಅಕ್ರಮವಾಗಿ ಆವರಣದಲ್ಲಿ ಕುಳಿತು ಮದ್ಯ ಸೇವನೆ ಮಾಡೋದು...

ಸ್ವಚ್ಛ ನಗರಿ ಎಂದು ಕರೆಸಿಕೊಂಡ ಕೋಲಾರಕ್ಕೆ ಈಗ ಕಸ ವಿಲೇವಾರಿ ಸಮಸ್ಯೆ!

4 weeks ago

ಕೋಲಾರ: ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನ ಘೋಷಣೆ ಮಾಡುವುದಕ್ಕೂ ಮೊದಲೇ ಕೋಲಾರ ಸ್ವಚ್ಛ ನಗರಿ ಎಂದು ಹೆಸರು ಮಾಡಿತ್ತು. ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸಿ ಎಲ್ಲಾ ಜಿಲ್ಲೆಗಳಿಗೂ ಬಂಗಾರದ ನಾಡು ಮಾದರಿಯಾಗಿತ್ತು. ಆದರೆ ಕೋಲಾರ...