Monday, 25th June 2018

Recent News

10 months ago

ಅಧಿಕಾರಿಯ ಕೊರಳ ಪಟ್ಟಿ ಹಿಡಿದ ಸಚಿವ ರುದ್ರಪ್ಪ ಲಮಾಣಿ ಸಹೋದರಿ

ಹಾವೇರಿ: ಆಡಳಿತ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರ ಸಹೋದರಿ ಆಡಳಿತ ಮಂಡಳಿ ನಿರ್ದೇಶಕರೊಬ್ಬರ ಮೇಲೆ ಕೊರಳುಪಟ್ಟಿ ಹಿಡಿದು ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್ 16 ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಬಿಎಜಿಎಸ್‍ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಭೆ ನಡೆದಿದೆ. ಈ ಸಂದರ್ಭದಲ್ಲಿ ಸಚಿವ ರುದ್ರಪ್ಪ ಲಮಾಣಿ ಅವರ ಸಹೋದರಿ ಪ್ರೇಮಾ ಡೊಂಬರಹಳ್ಳಿ ಅವರು ಕಾಲೇಜಿನ ನಿರ್ದೇಶಕರಾಗಿರುವ ಗೋಪಾಲ್ ಲಮಾಣಿ […]

10 months ago

8 ತಿಂಗಳು ಹಿಂದೆ ಸತ್ತವ ಇಂದು ದಿಢೀರ್ ಪ್ರತ್ಯಕ್ಷ-ಭಯಾನಕ ಕೊಲೆಯಲ್ಲೊಂದು ಸಸ್ಪೆನ್ಸ್ ಟ್ವಿಸ್ಟ್!

ಹಾವೇರಿ: ಜಿಲ್ಲೆಯ ರಾಣೆಬೆಣ್ಣೂರು ಬಸ್ ಡಿಪೋದಲ್ಲಿ ಜನವರಿ 1ರಂದು ಬಸ್ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ ಎಂದು ತಿಳಿದಿದ್ದ ವ್ಯಕ್ತಿ ಇಂದು ಪ್ರತ್ಯಕ್ಷವಾಗುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾನೆ. ಜನವರಿ 1ರಂದು ರಾಣೆಬೆಣ್ಣೂರು ಬಸ್ ಡಿಪೋದಲ್ಲಿ ಸೆಕ್ಯೂರಿಟಿ ಗಾರ್ಡ್ ನಿಂಗರಾಜ್ ಬೆಳಗುಟ್ಟಿ ಎಂಬವರನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಹಲಗೇರಿ ಪೊಲೀಸ್...

ಅಪ್ರಾಪ್ತ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸ್ತಿದ್ದ ಕಂಪ್ಯೂಟರ್ ಎಂಜಿನಿಯರ್ ಅರೆಸ್ಟ್

11 months ago

ಹಾವೇರಿ: ಅಪ್ರಾಪ್ತ ಬಾಲಕಿಯರಿಗೆ ಅಶ್ಲೀಲ ವಿಡಿಯೋ ಕಳಿಸುತ್ತಿದ್ದ ಕಂಪ್ಯೂಟರ್ ಎಂಜನಿಯರ್‍ನನ್ನು ಹಾವೇರಿಯಲ್ಲಿ ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆ ಹರಿಹರ ಮೂಲದ ಮಹ್ಮದ್ ಖಾಸಿ (28) ಬಂಧಿತ ಆರೋಪಿ. ಈತ ಹಿರೇಕೆರೂರು ಸಾರಿಗೆ ಡಿಪೋದಲ್ಲಿ ಕಂಪ್ಯೂಟರ್ ಎಂಜನಿಯರ್ ಆಗಿ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ....

ಕ್ರೂಸರ್ ಪಲ್ಟಿಯಾಗಿ 6 ಜನರಿಗೆ ಗಂಭೀರ ಗಾಯ

11 months ago

ಹಾವೇರಿ: ಕ್ರೂಸರ್ ವಾಹನ ಪಲ್ಟಿಯಾಗಿ ಇಬ್ಬರಿಗೆ ಗಾಯವಾಗಿದ್ದು, ಆರು ಜನರಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಗಿ ಗ್ರಾಮದ ಬಳಿ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಚಾಲಕರನನ್ನ ಚಿತ್ರದುರ್ಗದ ಹನುಮಂತಪ್ಪ ಕರ್ಜಗಿ(36) ಅನ್ಸರ್ ಅಬ್ದುಲ್(45), ಹನೀಫ್ (46),...

ಪ್ರಭಾವಿ ರಾಜಕರಾಣಿಗಳ ಹೆಸರಲ್ಲಿ ವಂಚನೆ, ಅತ್ಯಾಚಾರ- ಹಾವೇರಿಯಲ್ಲಿ ಕಾಮುಕ ಅರೆಸ್ಟ್

11 months ago

ಹಾವೇರಿ: ಜಿಲ್ಲೆಯ ಹಾನಗಲ್ ಪೊಲೀಸರ ಭರ್ಜರಿ ಭೇಟೆಯ ಬಳಿಕ ಇದೀಗ ರಾಜ್ಯವನ್ನೆ ಬೆಚ್ಚಿ ಬೀಳಿಸಿದ ವಿಕೃತ ಕಾಮುಕನೊಬ್ಬನನ್ನು ಸೆರೆ ಹಿಡಿದಿದ್ದಾರೆ. ಬೆಳಗಾವಿ ಜಿಲ್ಲೆಯ ಪಾಚಾಪುರ ಗ್ರಾಮದ ಮನೋಜ್ ಪವಾರ್ ಬಂಧಿತ ಆರೋಪಿ. ಈತ ಹದಿಹರಿಯದ ಯುವತಿಯರನ್ನು ಪ್ರೀತಿ ಹೆಸರಲ್ಲಿ ನಂಬಿಸಿ ನೀಲಿ...

ಜಮೀನಿನಲ್ಲಿ ನಾಯಿಗಳ ದಾಳಿಗೊಳಗಾದ ಜಿಂಕೆ ಸಾವು

11 months ago

ಹಾವೇರಿ: ಆಹಾರ ಅರಸಿ ಬಂದ ಕೃಷ್ಣಮೃಗವೊಂದು ರೈತರ ಜಮೀನಿನಲ್ಲಿ ನಾಯಿಗಳ ದಾಳಿಗೊಳಗಾಗಿ ದಯಾನೀಯ ಸಾವು ಕಂಡಿದೆ. ಚಿಕ್ಕಲಿಂಗದಹಳ್ಳಿ ಗ್ರಾಮದ ಹುಸೇನಸಾಬ್ ನದಾಫ್ ಎಂಬುವರ ಜಮೀನಿನಲ್ಲಿ ಕೃಷ್ಣಮೃಗ ಹೋಗುತಿತ್ತು. ಆ ವೇಳೆ ನಾಲ್ಕು ನಾಯಿಗಳು ದಾಳಿ ನಡೆಸಿ ಸಿಕ್ಕ-ಸಿಕ್ಕಲ್ಲಿ ಕಚ್ಚಿ ಸಂಪೂರ್ಣವಾಗಿ ಗಾಯಗೊಳಿಸಿದ್ದವು....

ಸಾರಿಗೆ ಬಸ್ಸಿಗೆ ಖಾಸಗಿ ಶಾಲೆಯ ವ್ಯಾನ್ ಡಿಕ್ಕಿ – 15 ವಿದ್ಯಾರ್ಥಿಗಳಿಗೆ ಗಾಯ

11 months ago

ಹಾವೇರಿ: ಸಾರಿಗೆ ಬಸ್ ಮತ್ತು ಖಾಸಗಿ ಶಾಲೆಯ ವ್ಯಾನ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹದಿನೈದಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಾಸನಕಟ್ಟಿ ಗ್ರಾಮದ ಬಳಿ ನಡೆದಿದೆ. ಸರ್ಕಾರಿ ಬಸ್ ಹುಬ್ಬಳ್ಳಿಯಿಂದ ಹಾನಗಲ್ ನತ್ತ...

ಕೊಟ್ಟಿಗೆಯಲ್ಲಿದ್ದ ಹಸುಗಳ ಕಿಡ್ನಿ ತೆಗೆದು ಹತ್ಯೆ- ಹಾವೇರಿಯಲ್ಲಿ ಅಮಾನವೀಯ ಕೃತ್ಯ

11 months ago

ಹಾವೇರಿ: ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಕಿಡ್ನಿಗಳನ್ನು ತೆಗೆದು ಹತ್ಯೆ ಮಾಡಿದ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ದಂಡಿನ ಪೇಟೆಯಲ್ಲಿ ನಡೆದಿದೆ. ರೈತ ಕಲ್ಲಪ್ಪ ಪೂಜಾರಿ ಎಂಬವರಿಗೆ ಸೇರಿದ ಎರಡು ಹಸುಗಳನ್ನು ಮನೆಯ ಹಿಂಭಾಗದಲ್ಲಿರೋ ದನದ ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು....