Monday, 22nd January 2018

Recent News

11 months ago

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಬೇಲೂರು ದೇವಾಲಯದಲ್ಲಿ ನಡೆಯುತ್ತಿದ್ದ ತೆಲುಗು ಚಿತ್ರದ ಶೂಟಿಂಗ್ ರದ್ದು

ಹಾಸನ: ಬೇಲೂರಿನ ಚನ್ನಕೇಶವ ದೇವಾಲಯದ ಒಳಗಡೆ ನಡೆಯುತ್ತಿದ್ದ ಅಲ್ಲು ಅರ್ಜುನ್ ಅಭಿನಯದ ‘ಡಿಜೆ’ ಚಿತ್ರದ ಶೂಟಿಂಗ್ ರದ್ದಾಗಿದೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭಕ್ತರ ಆಕ್ರೋಶಕ್ಕೆ ಮಣಿದ ಪುರಾತತ್ವ ಇಲಾಖೆ ಚಿತ್ರೀಕರಣವನ್ನು ರದ್ದುಮಾಡಿ ಆದೇಶ ಪ್ರಕಟಿಸಿದೆ. ವಿವಾದ ಏನು? ಸಾಮಾನ್ಯ ಜನರಿಗೆ ಬೇಲೂರು ದೇವಾಲಯದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಅಧೀನದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿರುವ ಈ ದೇವಾಲಯದಲ್ಲಿ ಯಾವುದೇ ಚಿತ್ರೀಕರಣ ಮಾಡುವುದಾದರೆ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕು. ಜೊತೆಗೆ ಕೆಲವು ನಿಬಂಧನೆ ಒಪ್ಪಿದರೆ ಮಾತ್ರ ಅನುಮತಿ […]

11 months ago

ಬೇಲೂರು ದೇವಸ್ಥಾನದೊಳಗೆ ತೆಲುಗು ದರ್ಬಾರ್- ವಾರದಿಂದ ನಡೀತಿದೆ ಅಲ್ಲು ಅರ್ಜುನ್ ಶೂಟಿಂಗ್

ಹಾಸನ: ಬೇಲೂರು ಅಂದ್ರೆ ಥಟ್ಟನೇ ನೆನಪಿಗೆ ಬರೋದು ಶಿಲ್ಪಕಲೆಯೊಂದಿಗೆ ವೈಭವಯುತವಾದ ಚನ್ನಕೇಶವನ ಪ್ರತಿರೂಪ. ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಈ ದೇವಾಲಯ ವಿಶ್ವಪ್ರಸಿದ್ಧ. ಹಲವು ವಿಶೇಷತೆಗಳನ್ನು ಹೊಂದಿರುವ ಈ ದೇವಾಲಯದಲ್ಲಿ ಸಾಮಾನ್ಯರಿಗೆ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಚಿತ್ರೀಕರಣ ನಿಷೇಧವಿದೆ. ಚಿತ್ರೀಕರಣಕ್ಕೆ ಅವಕಾಶವಿದ್ದರೂ ಸಹ ಹಲವು ಮಿತಿಗಳಿವೆ. ಆದ್ರೆ ತೆಲುಗು ಚಿತ್ರ ತಂಡವೊಂದಕ್ಕೆ ಚಿತ್ರೀಕರಣಕ್ಕೆ ಅನುವು ಮಾಡಿಕೊಡಲಾಗಿದ್ದು...

ಕಾರಿಗೆ ರೈಲ್ವೆ ಎಂಜಿನ್ ಡಿಕ್ಕಿ; ಇಬ್ಬರ ಸಾವು

12 months ago

ಹಾಸನ: ಕಾರೊಂದು ರೈಲ್ವೆ ಗೇಟ್ ದಾಟುವ ವೇಳೆ ರೈಲ್ವೇ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದ ಬಳಿ ನಡೆದಿದೆ. ದುದ್ದ ಗ್ರಾಮದ ನಿವಾಸಿಗಳಾದ ಆನಂದ್ (22) ಮತ್ತು ರಾಘವೇಂದ್ರ (28)...

ಮಣ್ಣಲ್ಲಿ ಮಣ್ಣಾದ ಹಾಸನದ ವೀರ ಯೋಧ ಸಂದೀಪ್ ಶೆಟ್ಟಿ

12 months ago

ಹಾಸನ: ವೀರಯೋಧ ಸಂದೀಪ್ ಪಾರ್ಥಿವ ಶರೀರ ಇಂದು ಮಣ್ಣಲ್ಲಿ ಮಣ್ಣಾಗಿದೆ. ಸ್ವಗ್ರಾಮ ದೇವಿಹಳ್ಳಿಯಲ್ಲಿ ಅಗಲಿದ ವೀರ ಯೋಧನಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಿ ಅಂತ್ಯ ಸಂಸ್ಕಾರ ಮಾಡಲಾಯಿತು. ವೀರಯೋಧ ಸಂದೀಪ್ ಶೆಟ್ಟಿ 18ನೇ ಗುಜರಾತ್ ರೆಜಿಮೆಂಟ್‍ಗೆ ಸೇರಿದವರು. ಜನವರಿ 25ರಂದು ಕಾಶ್ಮೀರದ...

ಹಾಸನ ತಲುಪಿದ ಮೃತ ಸಂದೀಪ್ ಪಾರ್ಥೀವ ಶರೀರ: ಇಂದು ಮಧ್ಯಾಹ್ನ ಅಂತ್ಯಕ್ರಿಯೆ

12 months ago

ಹಾಸನ: ಜಮ್ಮುಕಾಶ್ಮೀರದಲ್ಲಿ ಹಿಮಕುಸಿತಕ್ಕೆ ಸಿಲುಕಿ ವೀರಮರಣವನ್ನಪ್ಪಿದ ಯೋಧ ಸಂದೀಪ್ ಪಾರ್ಥೀವ ಶರೀರ ಮಂಗಳವಾರ ತಡರಾತ್ರಿ ತವರು ಜಿಲ್ಲೆ ಹಾಸನಕ್ಕೆ ಆಗಮಿಸಿದೆ. ತಡರಾತ್ರಿ 2.30ಕ್ಕೆ ವಿಶೇಷ ಅಂಬುಲೆನ್ಸ್‍ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಸೈನ್ಯದ ಅಧಿಕಾರಿಗಳ ತಂಡ ಸಂದೀಪ್ ಪಾರ್ಥೀವ ಶರೀರದೊಂದಿಗೆ ಆಗಮಿಸಿದರು. ಜಿಲ್ಲಾಡಳಿತದ ವತಿಯಿಂದ...