Wednesday, 18th October 2017

Recent News

8 months ago

ಕಪ್ಪತಗುಡ್ಡ ಉಳಿಸಲು ಉಪವಾಸ ಸತ್ಯಾಗ್ರಹ – 3 ದಿನಗಳ ಹೋರಾಟಕ್ಕೆ ಗಣ್ಯರ ಸಾಥ್

– ಇತ್ತ ಬಳ್ಳಾರಿಯಲ್ಲಿ ಬೂದಿಗುಡ್ಡ ಸಂರಕ್ಷಣೆ ಕೂಗು ಬಳ್ಳಾರಿ,ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಸಸ್ಯಕಾಶಿ ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ಹೋರಾಟ ತೀವ್ರಗೊಂಡಿದೆ. ಕಪ್ಪತ್ತಗುಡ್ಡ ಬಗೆಯಲು ಹವಣಿಸುತ್ತಿರುವ ಬಲ್ದೋಟಾ ಕಂಪನಿ ವಿರುದ್ಧದ ಹೋರಾಟಕ್ಕೆ ಹೊಸ ರೂಪು ನೀಡಲಾಗಿದೆ. ಅಹೋರಾತ್ರಿ ಧರಣಿ ಜೊತೆಗೆ ಮೂರು ದಿನಗಳ ಕಾಲ ಉಪವಾಸಕ್ಕೆ ತೀರ್ಮಾನಿಸಲಾಗಿದೆ. ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್‍ಎಸ್ ದೊರೆಸ್ವಾಮಿ, ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಎಸ್.ಆರ್ ಹಿರೇಮಠ್, ತೋಂಟದಾರ್ಯ ಸ್ವಾಮೀಜಿ ಭಾಗವಹಿಸುತ್ತಿದ್ದಾರೆ. ಬೆಳಗ್ಗೆ ತೋಂಟದ ಸಿದ್ಧಲಿಂಗ […]

8 months ago

ಆಕ್ರೋಶದ ಬೆಂಕಿಗೆ ಲಕ್ಷ್ಮೇಶ್ವರ ಠಾಣೆ ಧಗಧಗ – 25 ದುಷ್ಕರ್ಮಿಗಳ ಬಂಧನ

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಲಾಕಪ್ ಡೆತ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಠಾಣೆಗೆ ಬೆಂಕಿಹಚ್ಚಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ 25 ಮಂದಿ ದುಷ್ಕರ್ಮಿಗಳನ್ನ ಗದಗ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಈ ಗಲಾಟೆಯಲ್ಲಿ ಅಕ್ರಮ ಮರಳು ದಂಧೆಕೊರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 25 ಜನ ದುಷ್ಕರ್ಮಿಗಳನ್ನು ವಿಚಾರಣೆಗಾಗಿ ಕರೆತರಲಾಗಿದ್ದು, ವೀಡಿಯೋ ದೃಶ್ಯಗಳನ್ನ ನೋಡಿ ಇನ್ನುಳಿದ ಆರೋಪಿಗಳ...

ಗದಗ: ಎರಡೂ ಕೈ ಕಳ್ಕೊಂಡ್ರೂ ಟ್ರ್ಯಾಕ್ಟರ್ ಓಡಿಸೋ ಗುರುಪಾದಪ್ಪ!

9 months ago

ಗದಗ: ಮನಸ್ಸಿದ್ದರೆ ಮಾರ್ಗ ಅನ್ನೋ ಮಾತನ್ನ ಹಲವರು ತೋರಿಸಿದ್ದಾರೆ. ಅವರ ಸಾಲಿಗೆ ಗದಗದ ಸೊರಟೂರ ಗ್ರಾಮದ ವ್ಯಕ್ತಿ ಕೂಡ ಸೇರ್ಪಡೆಯಾಗಿದ್ದಾರೆ. ಎರಡೂ ಕೈಗಳು ವಿದ್ಯುತ್ ಅವಘಡದಲ್ಲಿ ಸುಟ್ಟುಹೋಗಿದ್ದರೂ ಕೈ ಇದ್ದವರನ್ನೂ ಮೀರಿಸುವಂತೆ ಬದುಕು ಸಾಗಿಸುತ್ತಿದ್ದಾರೆ. ಗದಗ ತಾಲೂಕಿನ ಸೊರಟೂರ ಗ್ರಾಮದ ಗುರುಪಾದಪ್ಪ...