Sunday, 24th June 2018

Recent News

1 week ago

ಬಸ್ ಬ್ರೇಕ್ ಫೇಲ್: NWKRTC ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಅನಾಹುತ

ಬೆಳಗಾವಿ: ಬ್ರೇಕ್ ಫೇಲ್‍ನಿಂದಾಗಿ ಸಂಭವಿಸುತ್ತಿದ್ದ ಭಾರೀ ಅನಾಹುತವನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ತಪ್ಪಿಸಿ ಸಮಯ ಪ್ರಜ್ಞೆ ಮೆರೆದ ಘಟನೆ ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿ ನಡೆದಿದೆ. ಗುರುವಾರ ಬೆಳಗಾವಿ ಘಟಕದ ಧಾರವಾಡದಿಂದ ಬೆಳಗಾವಿಗೆ ಹೊರಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಅನಾಹುತದಿಂದ ಪಾರಾಗಿದೆ. ಕಿತ್ತೂರು ಬಸ್ ನಿಲ್ದಾಣಕ್ಕೆ ಹೊರಟಿದ್ದಾಗ ಬ್ರೇಕ್ ಫೇಲ್ ಆಗಿರುವುದನ್ನು ತಿಳಿದ ಚಾಲಕ, ಬಸ್ಸನ್ನು ನಿಧಾನವಾಗಿ ಚಾಲನೆ ಮಾಡುತ್ತ ರಸ್ತೆ ಪಕ್ಕದಲ್ಲಿದ್ದ ದಿಬ್ಬಕ್ಕೆ ತಾಕಿಸುತ್ತ ವರ್ಷಿಣಿ ಬಾರ್ ಕಂಪೌಂಡ್‍ಗೆ […]

1 week ago

ಗೌರಿ ಲಂಕೇಶ್ ಹತ್ಯೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣದಲ್ಲಿ ಬಿಜೆಪಿಯ ಪಾತ್ರವಿಲ್ಲ. ಹಿಂದಿನಿಂದಲೂ ಗೌರಿ ಹತ್ಯೆಯ ಪ್ರಕರಣದಲ್ಲಿ ಬಿಜೆಪಿ ಹೆಸರನ್ನು ತಳುಕು ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಇದೂವರೆಗೂ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಹೊರ ಹಾಕಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಎನ್ನಲಾದ ಯುವಕನೋರ್ವನನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಯುವಕನ...

`ಕುಕ್ಕರ್ ಲಕ್ಷ್ಮಿದು, ಬಿರಿಯಾನಿ ಜಯಮಾಲಾದು’ ಜೋಕ್ ಕೇಳೋಕೆ ಚೆನ್ನಾಗಿದೆ – ಲಕ್ಷ್ಮೀ ಹೆಬ್ಬಾಳ್ಕರ್

2 weeks ago

ಧಾರವಾಡ: ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸಚಿವ ಸ್ಥಾನ ಕೈ ತಪ್ಪಿರುವ ಕುರಿತು ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತಮ್ಮ ವಿರುದ್ಧದ...

ತಲ್ವಾರ್ ನಿಂದ ಕೇಕ್ ಕತ್ತರಿಸಿದವ ಅರೆಸ್ಟ್

2 weeks ago

ಹುಬ್ಬಳ್ಳಿ: ತಲ್ವಾರ್ ನಿಂದ ಕೇಕ್ ಕತ್ತರಿಸಿಕೊಂಡು ಹುಟ್ಟು ಹಬ್ಬ ಆಚರಿಸಿಕೊಂಡ ಶಂಭು ಬಿಜವಾಡ ಎಂಬಾತನನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಸೆಟ್ಲಮೆಂಟ್ ನಿವಾಸಿಯಾಗಿದ್ದು, ಇತ್ತೀಚಿಗೆ ಈತ ಹುಟ್ಟುಹಬ್ಬ ಆಚರಿಸಿಕೊಂಡಿದ್ದನು. ಆಗ ತಲ್ವಾರ್ ನಿಂದ ಕೇಕ್ ಕತ್ತರಿಸಿದ್ದನು. ರೌಡಿ ಚಟುವಟಿಕೆ ನಡೆಸಿದ...

ಕಳಸಾ ಬಂಡೂರಿ ವಿವಾದ – ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್

2 weeks ago

ಬೆಂಗಳೂರು: ಕಳಸಾ ಬಂಡೂರಿ ವಿವಾದ ಪರಿಹಾರದ ಚರ್ಚೆಗೆ ಪ್ರಧಾನಮಂತ್ರಿ ಗಳಿಂದ ಕಳಸಾ ಬಂಡೂರಿ ರೈತರ ಭೇಟಿಗೆ ದಿನ ನಿಗದಿಯಾಗಿದೆ. ಇದೇ ತಿಂಗಳು 14 ಅಥವಾ 15 ರಂದು ಪ್ರಧಾನಿ ನರೇಂದ್ರ ಮೋದಿಯವರನ್ನ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ಕಳಸಾ ಬಂಡೂರಿ...

10 ಸಾವಿರಕ್ಕಾಗಿ ಸ್ನೇಹಿತರನ್ನೇ ಕೊಲೆ ಮಾಡಿ ಜೈಲು ಸೇರಿದ್ರು

2 weeks ago

ಹುಬ್ಬಳ್ಳಿ: ಕೇವಲ 10 ಸಾವಿರ ಹಣಕ್ಕಾಗಿ ಇಬ್ಬರು ಸ್ನೇಹಿತರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಎಂ.ಎನ್ ನಾಗರಾಜ್, ಜೂನ್ 8 ರ...

ಹುಬ್ಬಳ್ಳಿ-ಧಾರವಾಡ ಹೋಟೆಲ್ ಗಳಿಗೆ ಇಂದು ಬೀಗ!

2 weeks ago

ಹುಬ್ಬಳ್ಳಿ: ಹೋಟೆಲ್ ಕಾರ್ಮಿಕರ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಹುಬ್ಬಳ್ಳಿ-ಧಾರವಾಡ ಹೋಟೆಲ್ ಬಂದ್ ಗೆ ಕರೆನೀಡಲಾಗಿದ್ದು, ಬಂದ್ ಹಿನ್ನೆಲೆಯಲ್ಲಿ ಅವಳಿನಗರದ ಎಲ್ಲಾ ಹೋಟೆಲ್ ಗಳಿಗೆ ಬೀಗ ಹಾಕಲಾಗಿದೆ. ಹೋಟೆಲ್ ಮಾಲೀಕರು ಕರೆ ನೀಡಿರುವ ಬಂದ್ ಗೆ ಬಾರ್ ಆಂಡ್ ರೆಸ್ಟೋರೆಂಟ್...

ಲಿಂಗಾಯತರ ಬಗ್ಗೆ ಕಾಳಜಿ ಇದ್ದವರು ಜನಾಂದೋಲನ ಕೈಗೊಳ್ಳಲಿ: ಜಗದೀಶ್ ಶೆಟ್ಟರ್ ಸವಾಲು

2 weeks ago

ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕಾಳಜಿ ಇರುವವರು ಈಗ ಜನಾಂದೋಲನ ಹೋರಾಟಕ್ಕೆ ಮುಂದಾಗಲಿ. ರಾಜಕೀಯ ಉದ್ದೇಶಕ್ಕಾಗಿ ಹೋರಾಟ ಮಾಡಿ ಸಮಾಜದಲ್ಲಿ ಒಡಕು ತಂದಿಟ್ಟರು ಎಂದು ಶಾಸಕ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು,...