Friday, 15th December 2017

Recent News

5 months ago

ದಾವಣಗೆರೆ: ಡೆಂಗ್ಯೂ ಜ್ವರಕ್ಕೆ ವೈದ್ಯರ ಮಗ ಬಲಿ

ದಾವಣಗೆರೆ: ಡೆಂಗ್ಯೂ ಜ್ವರಕ್ಕೆ ವೈದ್ಯರ ಮಗನೇ ಬಲಿಯಾದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಜಿಗಳಿ ಗ್ರಾಮದಲ್ಲಿ ನಡೆದಿದೆ. ವೈದ್ಯ ಡಾ.ನಾಗರಾಜ್ ಅವರ ಪುತ್ರ ಮನೋಜ್ ಕುಮಾರ್(10) ಸಾವನ್ನಪ್ಪಿದ ಬಾಲಕ. ಮೂರ್ನಾಲ್ಕು ದಿನದಿಂದ ಜ್ವರದಿಂದ ಬಳಲುತಿದ್ದ ಮನೋಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಜಿಗಳಿ ಗ್ರಾಮದಲ್ಲಿ ನೂರಾರು ಜನರಿಗೆ ಡೆಂಗ್ಯೂ ಹರಡಿದೆ. ಆರೋಗ್ಯ ಇಲಾಖೆಯಿಂದ ಕ್ರಮಕೈಗೊಂಡಿದ್ದರು ಡೆಂಗ್ಯೂ ನಿಯಂತ್ರಣಕ್ಕೆ ಬಂದಿಲ್ಲ.

5 months ago

ಕೆಲಸದಿಂದ ತೆಗೆದುಹಾಕಿದ್ದಕ್ಕೆ ಮಹಿಳಾ ಸಿಬ್ಬಂದಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ

ದಾವಣಗೆರೆ: ಕೆಲಸದಿಂದ ತೆಗೆದು ಹಾಕಿದ ಕಾರಣಕ್ಕೆ ದಾವಣಗೆರೆಯ ರೈಲ್ವೆ ಸ್ವಚ್ಛತೆ ಮಾಡುವ ಮಹಿಳಾ ಸಿಬ್ಬಂದಿ ನಿಲ್ದಾಣದಲ್ಲೇ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಬೆಳಕಿಗೆ ಬಂದಿದೆ. ನಿಲ್ದಾಣದಲ್ಲಿ ಬೇರೊಬ್ಬ ಸಿಬ್ಬಂದಿ ಜೊತೆ ಮಾತನಾಡುತ್ತ ಕುಳಿತಿದ್ದರು ಅನ್ನೋ ಕಾರಣಕ್ಕೆ ಐದು ದಿನಗಳ ಹಿಂದೆ ಶೌಚಾಲಯ ಹಾಗೂ ನಿಲ್ದಾಣ ಸ್ವಚ್ಛಗೊಳಿಸುವ ರೇಣುಕಮ್ಮ ಅವರನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಅಲ್ಲದೇ...

ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಿದ್ದರೂ ಪ್ರತಿದಿನ ಒಂದೇ ಬೆಲೆಯಲ್ಲಿ ಮಾರಾಟ: ಬಂಕ್ ವಿರುದ್ಧ ರೈತರ ಆಕ್ರೋಶ

6 months ago

ದಾವಣಗೆರೆ: ದಿನ ನಿತ್ಯದ ಬೆಲೆ ಪರಿಷ್ಕರಣೆ ಮಾಡದೆ ಒಂದೇ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಕಲಾಗುತ್ತಿರುವ ಬಂಕ್ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಕ್ರಾಸ್‍ನಲ್ಲಿ ನಡೆದಿದೆ. ಕೇಂದ್ರ ಸರ್ಕಾರ ಜೂನ್ 1ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು...

ಆಧಾರ್ ಕಾರ್ಡ್‍ಗಾಗಿ ತಾಲೂಕು ಆಫೀಸಿಗೆ ಮಹಿಳೆ ತೆವಳಿಕೊಂಡೇ ಹೋದ ಮನಕಲಕುವ ವಿಡಿಯೋ ನೋಡಿ

6 months ago

ದಾವಣಗೆರೆ: ಮಹಿಳೆಯೊಬ್ಬಳು ಆಧಾರ್ ಕಾರ್ಡ್ ಗಾಗಿ ತಾಲೂಕು ಅಫೀಸಿಗೆ ತೆವಳಿಕೊಂಡೇ ಹೋದ ಮನ ಕಲುಕುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕು ಕಛೇರಿಯಲ್ಲಿ ನಡೆದಿದೆ. ಹರಪ್ಪನಹಳ್ಳಿ ತಾಲ್ಲೂಕಿನ ಗೌರಮ್ಮ ಅಂಗವಿಕಲೆಯಾಗಿದ್ದು, ಅಂಗವಿಕಲರ ವೇತನಕ್ಕೆ ಆಧಾರ್ ಕಡ್ಡಾಯ ಮಾಡಿರುವುದರಿಂದ ಐದು ತಿಂಗಳಿನಿಂದ ತಾಲೂಕು...

ರಾತ್ರೋರಾತ್ರಿ ಮಹಿಳಾ ರೋಗಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ದಾವಣಗೆರೆ ಜಿಲ್ಲಾಸ್ಪತ್ರೆ!

6 months ago

ದಾವಣಗೆರೆ: ವೈದ್ಯರು ರಾತ್ರೋರಾತ್ರಿ ಮಹಿಳಾ ರೋಗಿಯನ್ನು ಹೊರ ಹಾಕಿದ ಮನಕಲುಕುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದ ಗಂಗುಬಾಯಿ ಎಂಬುವರಿಗೆ ತಲೆಗೆ ಗಂಭೀರ ಪೆಟ್ಟು ಬಿದ್ದು ಜೂನ್ 9 ರಂದು...

ಕೇಂದ್ರ ರೈತ ವಿರೋಧಿ ನೀತಿಗೆ ಖಂಡನೆ- ದಾವಣಗೆರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ರೈಲು ತಡೆಗೆ ಯತ್ನ

6 months ago

ದಾವಣಗೆರೆ: ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ದಾವಣಗೆರೆಯಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ರೈಲು ತಡೆ ಯತ್ನ ನಡೆಸಲಾಯ್ತು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ, ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಫಲ್ಯ, ಹಾಗೂ ರೈತರ ಮೇಲೆ ನಡೆದ ಗೋಲಿಬಾರ್ ತೀವ್ರವಾಗಿ ಖಂಡಿಸಿದ್ರು....

ಬುಲೆಟ್ ಪ್ರಕಾಶ್‍ಗೆ ಟಾಂಗ್, ನಟ ಶ್ರೀನಗರ ಕಿಟ್ಟಿ ಹೇಳಿಕೆ ನೀಡಿದ್ದು ಹೀಗೆ

6 months ago

ದಾವಣಗೆರೆ: ಇತ್ತೀಚಿಗೆ ಹಾಸ್ಯ ನಟ ಬುಲೆಟ್ ಪ್ರಕಾಶ್ ದೊಡ್ಡ ನಟನ ಸಣ್ಣತನ ಬಯಲು ಮಾಡ್ತೀನಿ ಎಂದು ತಣ್ಣಗಾಗಿದ್ದರು. ಇಂದು ದಾವಣಗೆರೆಯಲ್ಲಿ ನಟ ಶ್ರೀನಗರ ಕಿಟ್ಟಿ ಹಾಸ್ಯ ನಟ ಬುಲೆಟ್ ಪ್ರಕಾಶ್‍ಗೆ ಟಾಂಗ್ ನೀಡಿದ್ದಾರೆ. ಇಂದು ನಗರದಲ್ಲಿ ತಮ್ಮ ಸಿನಿಮಾ `ಸಿಲಿಕಾನ್ ಸಿಟಿ’...

ಪ್ರಿಯಕರ, ಸ್ನೇಹಿತರಿಂದ ಗ್ಯಾಂಗ್ ರೇಪ್ ಪ್ರಕರಣ- ಪರಾರಿಯಾಗಿದ್ದ ಇಬ್ಬರು ಕಾಮುಕರ ಬಂಧನ

6 months ago

ದಾವಣಗೆರೆ: ಪ್ರಿಯಕರನೊಬ್ಬ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಇಬ್ಬರು ಕಾಮುಕರನ್ನು ಬಂಧಿಸುವಲ್ಲಿ ಚನ್ನಗಿರಿ ಠಾಣಾ ಪೊಲೀಸರು ಯಶ್ವಸಿಯಾಗಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳು ಗುಡ್ಡದಲ್ಲಿ ಕಳೆದ ಶುಕ್ರವಾರದಂದು ಈ ಘಟನೆ ನಡೆದಿತ್ತು....