Saturday, 23rd June 2018

Recent News

1 year ago

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಯೇಸುದಾಸ್ ಗಾನಸುಧೆ

ಉಡುಪಿ: ಶ್ರೀಕೃಷ್ಣನ ಅಪ್ಪಟ ಅಭಿಮಾನಿ, ಪದ್ಮವಿಭೂಷಣ ಗಾಯಕ ಕೆ.ಜೆ. ಯೇಸುದಾಸ್ ಉಡುಪಿಯಲ್ಲಿ ತಮ್ಮ ಗಾಯನದ ಮೂಲಕ ಸಾವಿರಾರು ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿರಂತರ ಗಾನಸುಧೆಯನ್ನು ಯೇಸುದಾಸ್ ಹರಿಸಿದರು. ಮೊದಲು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೇ ಹಾಡಿದ ಯೇಸುದಾಸ್, ನಂತರ ದೇವರ ಕೀರ್ತನೆಗಳನ್ನು ಹಾಡಿದರು. ತಮಗಿಷ್ಟದ ಆರಾಧ್ಯ ದೇವರು ಶ್ರೀಕೃಷ್ಣನ ನಾಮಗಳನ್ನು ಹಾಡಿದರು. ಇದಕ್ಕೂ ಮೊದಲು ಶ್ರೀಕೃಷ್ಣಮಠಕ್ಕೆ ಆಗಮಿಸಿದ ಅವರು ಕಡೆಗೋಲು ಕೃಷ್ಣನ ದರ್ಶನ ಮಾಡಿದರು. ಕುಟುಂಬ ಸಮೇತ ಆಗಮಿಸಿ […]

1 year ago

ವಿಡಿಯೋ: ತನ್ನ ಹಾಲನ್ನು ತಾನೇ ಕುಡಿದು ಜನರಿಗೆ ಅಚ್ಚರಿ ಮೂಡಿಸುತ್ತಿದೆ ದಾವಣಗೆರೆಯ ಹಸು

ದಾವಣಗೆರೆ: ಹಸುವೊಂದು ತನ್ನ ಕೆಚ್ಚಲಿನ ಹಾಲನ್ನು ತಾನೇ ಕುಡಿದು ಜನರಿಗೆ ಅಚ್ಚರಿ ಮೂಡಿಸುತ್ತಿರುವ ಘಟನೆ ಕೆಟಿಜೆ ನಗರದಲ್ಲಿ ನಡೆಯುತ್ತಿದೆ. ಹಲವು ದಿನಗಳಿಂದ ಹಸು ಹೀಗೆ ಹಾಲು ಕುಡಿಯುವುದನ್ನು ನೋಡಿದ ಜನರು ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಮಾಧ್ಯಮಗಳಿಗೆ ನೀಡಿದ್ದಾರೆ. ಕರು ಇಲ್ಲದ ಕಾರಣ ಕೆಚ್ಚಲ ಭಾರವನ್ನು ಇಳಿಸಿಕೊಳ್ಳಲು ಹಸು ತನ್ನ ಹಾಲನ್ನು ತಾನೇ ಕುಡಿಯುತ್ತಿದೆ. ಅಷ್ಟೇ...

ನೀರಿಲ್ಲದ್ದಕ್ಕೆ ದಾವಣಗೆರೆ ಆಸ್ಪತ್ರೆಯಲ್ಲಿ ಆಪರೇಷನ್ ಇಲ್ಲ!

1 year ago

ದಾವಣಗೆರೆ: ಇತ್ತೀಚಿನ ದಿನನಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿದ್ದರೆ, ದಾವಣಗೆರೆಯ ಇಎಸ್‍ಐ ಆಸ್ಪತ್ರೆಯಲ್ಲಿ ನೀರಿನ ಕೊರತೆಯಿಂದಾಗಿ ವೈದ್ಯಾಧಿಕಾರಿಗಳು ಆಪರೇಷನ್ ಮಾಡೋದನ್ನೇ ಮುಂದೂಡುತ್ತಿದ್ದಾರೆ. ಹೌದು. ಕಳೆದ 15 ದಿನಗಳಿಂದ ನಗರದ ಇಎಸ್‍ಐ ಆಸ್ಪತ್ರೆಗೆ ನೀರಿನ ಸಮಸ್ಯೆಯಾಗಿದೆ. ಆಸ್ಪತ್ರೆಯಲ್ಲಿ ನೀರು...

ದಾವಣಗೆರೆ: ಹಳೇ ನೋಟು ಬದಲಾವಣೆ ಕಾರ್ಯದಲ್ಲಿ ತೊಡಗಿದ್ದ ಮೂವರ ಬಂಧನ

1 year ago

ದಾವಣಗೆರೆ: ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ ಮೂವರನ್ನು ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಹಾಸನದ ಸುನೀಲ್ ಕುಮಾರ್, ಚನ್ನಪಟ್ಟಣದ ಪ್ರದೀಪ್, ಶಿರಾ ತಾಲೂಕಿನ ಲಕ್ಷ್ಮೀಕಾಂತ್ ಬಂಧಿತರಾಗಿದ್ದಾರೆ. ಈ ಮೂವರು ನಗರದಲ್ಲಿ...

ಆಸ್ತಿ ಪತ್ರಕ್ಕೆ ಸಹಿ ಹಾಕದ್ದಕ್ಕೆ ತಮ್ಮನಿಂದ ಅಕ್ಕನ ಕೊಲೆ

1 year ago

ದಾವಣಗೆರೆ: ಆಸ್ತಿ ವಿಚಾರವಾಗಿ ತಮ್ಮನೇ ತನ್ನ ಸ್ವಂತ ಅಕ್ಕನನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಬೊಮ್ಮನಹಳ್ಳಿ ತಾಂಡಾದಲ್ಲಿ ನಡೆದಿದೆ. ಶಾಂತಾಬಾಯಿ (50) ಸಹೋದರನಿಂದ ಕೊಲೆಯಾದ ದುರ್ದೈವಿ. ಗಣೇಶ್ ನಾಯಕ್ ಎಂಬಾತನೇ ತನ್ನ ಅಕ್ಕಳಾದ ಶಾಂತಾಬಾಯಿ ಎಂಬವರನ್ನು ಎರಡು ಎಕರೆ ಜಮೀನು ವಿಚಾರವಾಗಿ...

ದಾವಣಗೆರೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಜಾತ್ರೆ – ಸಾವಿರಾರು ಭಕ್ತರು ಭಾಗಿ

1 year ago

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಅಜ್ಜಯ್ಯನ ಸುಕ್ಷೇತ್ರದಲ್ಲಿ ವಿಶಿಷ್ಟ ಜಾತ್ರೆ ನಡೆಯುತ್ತಿದೆ. ಮಾನಸಿಕ ಕಾಯಿಲೆಯಿಂದ ಹಿಡಿದು ಎಲ್ಲಾ ರೋಗಗಳನ್ನು ವಾಸಿ ಮಾಡುವ ಶಕ್ತಿ ಈ ಕ್ಷೇತ್ರಕ್ಕಿದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಪ್ರತಿ ಅಮಾವಾಸ್ಯೆಯಲ್ಲಿ ಈ ಕ್ಷೇತ್ರದಲ್ಲಿ ವಿಶಿಷ್ಟವಾದ ಪೂಜೆ...

ಡೈರಿ ಬಾಂಬ್ ಪ್ರತೀಕಾರಕ್ಕೆ ಕಾಂಗ್ರೆಸ್ ಸಜ್ಜು- 2 ದಿನದಲ್ಲಿ ಬಿಜೆಪಿ ಬಂಡವಾಳ ಬಯಲು ಮಾಡ್ತೀವಿ ಎಂದ ಕೈ ನಾಯಕರು

1 year ago

ದಾವಣಗೆರೆ/ಬೆಂಗಳೂರು: ತಮ್ಮ ಮೇಲಿನ ಡೈರಿ ಬಾಂಬ್ ಪ್ರತೀಕಾರಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಇನ್ನೆರಡು ದಿನದಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪ ಬಂಡವಾಳ ಬಯಲಾಗುತ್ತೆ ಅಂತಾ ದಾವಣಗೆರೆಯಲ್ಲಿ ವಿಎಸ್ ಉಗ್ರಪ್ಪ ಬಾಂಬ್ ಹಾಕಿದ್ದಾರೆ. ಇನ್ನು ಹೆಚ್‍ಎಂ ರೇವಣ್ಣ ಕೂಡಾ ಬಿಜೆಪಿ ವಿರುದ್ಧ ಡೈರಿ ಬಾಂಬ್ ಸಿಡಿಸೋದಾಗಿ...

ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿಯಿತು ಬೋಟ್!

1 year ago

ಕಾರವಾರ: ಆಕಸ್ಮಿಕವಾಗಿ ಅರಬಿ ಸಮುದ್ರದಲ್ಲಿದ್ದ ಬೋಟ್‍ಗೆ ಬೆಂಕಿ ತಗುಲಿ ಬೋಟ್ ಹೊತ್ತಿ ಉರಿದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ಘಟನೆ ನಡೆದಿದೆ. ಖಾದರ್ ಸಾಬ್ ಅಬ್ದುಲ್ ರಜಾಕ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ಅಡುಗೆ ತಯಾರಿಸುವ ವೇಳೆ ಬೋಟ್‍ನ...