Sunday, 24th June 2018

Recent News

1 week ago

ಎಂ.ಬಿ.ಪಾಟೀಲ್ ಬುಡಬುಡಕಿ ಆಟ ಕಾಂಗ್ರೆಸ್ಸಿನಲ್ಲಿ ನಡೆಯಲ್ಲ: ಶಾಮನೂರು

ದಾವಣಗೆರೆ: ಮಂತ್ರಿಗಿರಿಗೆ ಕಾಂಗ್ರೆಸ್‍ನಲ್ಲಿ ಬಂಡಾಯವೆದ್ದು, ಭಾರೀ ಸದ್ದು ಮಾಡುತ್ತಿರುವ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‍ಗೆ ಶಾಮನೂರು ಶಿವಶಂಕರಪ್ಪ ಭರ್ಜರಿ ಟಾಂಗ್ ನೀಡಿದ್ದಾರೆ. ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಸಚಿವ ಸ್ಥಾನಕ್ಕೆ ಪಕ್ಷದಲ್ಲಿ ಒತ್ತಡ ಹೇರುತ್ತಿರುವ ಶಾಸಕ ಎಂ.ಬಿ.ಪಾಟೀಲ್ ಬುಡಬುಡಕಿ ಆಟ ಕಾಂಗ್ರೆಸ್ ನಲ್ಲಿ ನಡೆಯುವುದಿಲ್ಲ. ಅಲ್ಲದೇ ಪಕ್ಷದಲ್ಲಿ ಒತ್ತಡ ತಂತ್ರ ಕೆಲಸ ಮಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ನಾನು ಸಚಿವ ಸ್ಥಾನದ ಹಿಂದೆ ಬಿದ್ದಿಲ್ಲ. ಸಚಿವ ಸ್ಥಾನಕ್ಕಿಂತ ಹೆಚ್ಚಾಗಿ ದಾವಣಗೆರೆ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಮಾಡುತ್ತೇನೆ. […]

1 week ago

ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಉಳಿಯೋದು ವೇಸ್ಟ್, ನನ್ನನ್ನು ಕ್ಷಮಿಸಿ- ತಾಯಿಗೆ ಮಗನಿಂದ ಸೆಲ್ಫಿ ವಿಡಿಯೋ

ದಾವಣಗೆರೆ: ಪೊಲೀಸರು ಹಾಗೂ ಪೋಷಕರು ಪ್ರೇಯಸಿಯನ್ನು ದೂರ ಮಾಡಿದ್ದಕ್ಕೆ ಮನನೊಂದು ಪ್ರಿಯಕರ ಸೆಲ್ಫಿ ವಿಡಿಯೋ ಮಾಡಿದ ಘಟನೆ ದಾವಣಗೆರೆಯ ಹದಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ದಾವಣಗೆರೆಯ ಲೋಕಿಕೆರೆ ಗ್ರಾಮದ ಯುವತಿಯೊಬ್ಬಳನ್ನು ಬಳ್ಳಾರಿಯ ರಾಜೇಂದ್ರ ಪ್ರೀತಿಸುತ್ತಿದ್ದರು. ಯುವತಿಯ ಮನೆಯಲ್ಲಿ ಬೇರೆ ಯುವಕನ ಜೊತೆ ಮದುವೆ ಮಾಡಲು ತಯಾರಿ ನಡೆದಿತ್ತು. ಇದರಿಂದ ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಿ ದೇವಸ್ಥಾನದಲ್ಲಿ...

ಡಿವೈಡರ್ ಗೆ ಡಿಕ್ಕಿಯಾಗಿ 4 ಸುತ್ತು ಹೊಡೆದು ಕಾರು ಪಲ್ಟಿ- ಗುರುತು ಸಿಗಲಾರದಷ್ಟು ವಿಕಾರ!

2 weeks ago

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭೀಕರ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯ ಹೊರವಲಯದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಗೆ ಡಿಕ್ಕಿಯಾಗಿ ನಾಲ್ಕು ಸುತ್ತು ಹೊಡೆದು ಕಾರು ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರ ಗುರುತು ಸಿಗಲಾರದಷ್ಟು ವಿಕಾರವಾಗಿದೆ. KA-17-Z-3614...

ಜಮೀನಿಗೆ ಹೋಗುತ್ತಿದ್ದಾಗ ಕರಡಿ ದಾಳಿ- ಮಹಿಳೆ ಗಂಭೀರ

2 weeks ago

ದಾವಣಗೆರೆ: ಕರಡಿ ದಾಳಿ ಮಾಡಿ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿಪುರ ಗ್ರಾಮದಲ್ಲಿ ನಡೆದಿದೆ. ಶಾಂತಮ್ಮ (55) ಕರಡಿ ದಾಳಿಗೆ ಒಳಗಾದ ಮಹಿಳೆ. ಇವರು ಉಚ್ಚಂಗಿದುರ್ಗದ ವಾಸಿಯಾಗಿದ್ದು, ಇಂದು ಬೆಳಗ್ಗೆ 7-30ರ ಸುಮಾರಿಗೆ ತನ್ನ ಜಮೀನಿಗೆ...

ಬ್ಯಾಂಕ್ ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ರೈತ

2 weeks ago

ದಾವಣಗೆರೆ: ಬ್ಯಾಂಕ್ ಅಧಿಕಾರಿಗಳು ಸಾಲ ನೀಡಲು ಸತಾಯಿಸಿದ ಕಾರಣಕ್ಕೆ ಮನನೊಂದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಿಲು ಗ್ರಾಮದಲ್ಲಿ ನಡೆದಿದೆ. ನಿಟ್ಟೂರು ಗ್ರಾಮದ ಪ್ರಕಾಶ್ ಎಂಬುವರೇ ಆತ್ಮಹತ್ಯೆಗೆ ಯತ್ನಿಸಿದ ರೈತರಾಗಿದ್ದಾರೆ. ಹಲವಾಗಿಲಿನ ಪ್ರಗತಿ ಕೃಷ್ಣಾ ಪ್ರಗತಿ...

ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕ!

2 weeks ago

ದಾವಣಗೆರೆ: ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕನಿಗೆ ಸ್ಥಳೀಯರು ಥಳಿಸಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಮಂಜುನಾಥ್ ಎಂಬಾತನೇ ಸ್ಥಳೀಯರಿಂದ ಹಲ್ಲೆಗೊಳಗಾದ ಆಟೋ ಚಾಲಕ. ಮಂಜುನಾಥ್ ಯುವತಿಯನ್ನು ನಗರದ ಹೊರವಲಯದ ಬೈಪಾಸ್ ಬಳಿ ಕರೆತಂದಿದ್ದನು. ಯುವತಿಯೊಂದಿಗೆ ಅಸಭ್ಯವಾಗಿ...

ಲಂಚ ಕೊಟ್ರೆ ಮಾತ್ರ ಮನೆ ಮಂಜೂರು- ಹಾರಕನಾಳು ಪಿಡಿಓ ಲಂಚಾವತಾರ ಬಯಲು

2 weeks ago

ದಾವಣಗೆರೆ: ವಸತಿ ಯೋಜನೆ ಫಲಾನುಭವಿಗಳನ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬ ಮನೆಗೆ ಕರೆಸಿಕೊಂಡು ಲಂಚ ಪಡೆಯುತ್ತಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಹಾರಕನಾಳು ಗ್ರಾಪಂ ಪಿಡಿಓ ಸಿ.ಬಸಪ್ಪ ಲಂಚ ಪಡೆಯುವ ಪಿಡಿಓ. ಬಸವ ವಸತಿ ಯೋಜನೆಯಡಿ...

ದಾರಿಯಲ್ಲಿ ಹೋಗ್ತಿದ್ದಾಗ ಹೆಜ್ಜೇನು ದಾಳಿ: ಪಾರಾಗಲು ರಸ್ತೆಯಲ್ಲೇ ಉರುಳಾಡಿದ ಮಹಿಳೆ

2 weeks ago

ದಾವಣಗೆರೆ: ದಾರಿಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ನಗರದ ಕೆಬಿ ಬಡಾವಣೆಯ ಶಿವಪ್ಪ ವೃತ್ತದ ಬಳಿ ನಡೆದಿದೆ. ಹೆಜ್ಜೇನು ಹುಳಗಳಿಂದ ತಪ್ಪಿಸಿಕೊಳ್ಳಲು ಮಹಿಳೆ ಪರದಾಡಿ ರಸ್ತೆಯಲ್ಲೆಲ್ಲಾ ಉರುಳಾಡಿದ್ದಾರೆ. ಹುಳುಗಳು ಕಚ್ಚಿ ಮುಖಕ್ಕೆ ಗಾಯವಾಗಿದೆ. ಮಹಿಳೆಯ ಆಕ್ರಂದನ ಕೇಳಿ...