Friday, 15th December 2017

Recent News

6 months ago

ಆಟೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ ಧರ್ಮದೇಟು

ಮಂಗಳೂರು: ಆಟೋದಲ್ಲಿ ಬರುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನಿಗೆ ಸ್ಥಳೀಯರು ಧರ್ಮದೇಟು ನೀಡಿ ಬುದ್ಧಿ ಕಲಿಸಿದ್ದಾರೆ. ಉಜಿರೆ ನಿವಾಸಿ ಮಹಮ್ಮದ್ ತಾಜುವುದ್ದೀನ್ ಎಂಬಾತನೇ ಧರ್ಮದೇಟು ತಿಂದ ವ್ಯಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ಘಟನೆ ನಡೆದಿದೆ. ಕೊಯ್ಯೂರಿನಿಂದ ಬೆಳ್ತಂಗಡಿಗೆ ಕಡೆಗೆ ಆಟೋದಲ್ಲಿ ಬರುತ್ತಿದ್ದ ಯುವತಿಗೆ ತಾಜುವುದ್ದೀನ್ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಆಟೋದಲ್ಲಿದ್ದ ಸಹ ಪ್ರಯಾಣಿಕರು ತಾಜುವುದ್ದೀನ್ ಗೆ ಥಳಿಸಿ ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ತಾಜಾವುದ್ದೀನ್‍ನ್ನು ವಶಕ್ಕೆ ಪಡೆದುಕೊಂಡು […]

6 months ago

ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಅವಹೇಳನಕಾರಿ ಹೇಳಿಕೆ- ರೈ ವಿರುದ್ಧ ಬಿಜೆಪಿ ದೂರು

ಮಂಗಳೂರು: ಕರಾವಳಿಯ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರನ್ನು ಅವಹೇಳನ ಮಾಡಿದ ಸಚಿವ ರಮಾನಾಥ ರೈ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳೀಯ ಬಿಜೆಪಿ ಮುಖಂಡ ದಿನೇಶ್ ಅಮ್ಟೂರ್ ಸಚಿವರ ವಿರುದ್ಧ ದೂರು ನೀಡಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಶನಿವಾರ ರಾತ್ರಿ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ರಮಾನಾಥ ರೈ ಅವರು...

Exclusive: ದಕ್ಷಿಣ ಕನ್ನಡ ಜಿಲ್ಲಾ ಎಸ್‍ಪಿಗೆ ಸಚಿವ ರಮಾನಾಥ ರೈ ಕ್ಲಾಸ್- ವಿಡಿಯೋ ನೋಡಿ

6 months ago

ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳನ್ನು ರಾಜಕಾರಣಿಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳೋ ಸಂಪ್ರದಾಯ ಮತ್ತೆ ಮುಂದುವರೆದಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಜಿಲ್ಲಾ ಎಸ್‍ಪಿ ಭೂಷಣ್ ರಾವ್ ಬೋರಸೆಯವರನ್ನು ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ದಕ್ಷಿಣ ಕನ್ನಡ...

ಟಾಟಾ ಎಸ್ ಪಲ್ಟಿ: 10 ಮಂದಿಗೆ ಗಂಭೀರ ಗಾಯ

6 months ago

ಕಾರವಾರ: ಟಾಟಾ ಎಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವಾಹನದಲ್ಲಿದ್ದ ಹತ್ತು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸಿಂಗನಳ್ಳಿ ಬಳಿ ನೆಡೆದಿದೆ. ಮುಂಡಗೋಡಿನಿಂದ ಸಿಂಗನಳ್ಳಿಗೆ ಕೂಲಿ ಕೆಲಸಗಾರರನ್ನು ಕರೆದುಕೊಂಡು ಹೋಗುವ ವೇಳೆ ಈ ಅವಘಡ ನೆಡೆದಿದೆ. ಚಾಲಕ...

ಸಹಜ ಸ್ಥಿತಿಯತ್ತ ಕಲ್ಲಡ್ಕ- ಪ್ರಮುಖ ಆರೋಪಿ ಪೊಲೀಸರಿಂದ ಎಸ್ಕೇಪ್

6 months ago

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಗುಂಪು ಘರ್ಷಣೆಯಿಂದ ನಲುಗಿದ್ದ ಈಗ ಸಹಜ ಸ್ಥಿತಿಗೆ ಮರಳಿದೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿಂದೂ ಮುಖಂಡನೊಬ್ಬ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ಇರಿತಕ್ಕೊಳಗಾಗಿ ಮಂಗಳೂರು ಜಿಲ್ಲೆಯ ಪುತ್ತೂರು ಆಸ್ಪತ್ರೆಯಲ್ಲಿ...

ಮುಖದ ಮೇಲೆ ಜೇನು ಬಿಟ್ಟುಕೊಂಡರೂ ಕಚ್ಚಲ್ಲ- ಜೇನು ಸಾಕಾಣೆಯಲ್ಲಿ ಪರಿಣತಿ ಹೊಂದಿರೋ ಮಂಗಳೂರಿನ ಕುಮಾರ್

6 months ago

ಮಂಗಳೂರು: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ವಲ್ಪ ಭಿನ್ನವಾಗಿದ್ದಾರೆ. ಸಾಮಾನ್ಯವಾಗಿ ಜೇನುನೋಣ ಅಂದ್ರೆ ಅಯ್ಯಯ್ಯೋ ಅಂತ ಓಡೋವ್ರೋ ಜಾಸ್ತಿ. ಆದರೆ ಮಂಗಳೂರಿನ ನಮ್ಮ ಪಬ್ಲಿಕ್ ಹೀರೋಗೆ ಜೇನುನೊಣಗಳು ಅಂದರೆ ಬಲು ಪ್ರೀತಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣ ಮುಡ್ನೂರು...

ದಕ್ಷಿಣ ಕನ್ನಡದ ಕಲ್ಲಡ್ಕದಲ್ಲಿ ಮತ್ತೆ ಗುಂಪು ಘರ್ಷಣೆ – ಇಂದು ಮಧ್ಯರಾತ್ರಿವರೆಗೆ 4 ತಾಲೂಕುಗಳಲ್ಲಿ ನಿಷೇಧಾಜ್ಞೆ

6 months ago

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಮತ್ತೆ ಘರ್ಷಣೆ ನಡೆದಿದೆ. ಕೆಲ ದಿನಗಳ ಹಿಂದೆ ಕೋಮುಗಲಭೆಯಾಗಿದ್ದ ಕಲ್ಲಡ್ಕದಲ್ಲಿ ಜೂನ್ 16 ವರೆಗೆ ನಿಷೇಧಾಜ್ಞೆ ಹಾಕಲಾಗಿತ್ತು. ಆದರೂ ಮಂಗಳವಾರದಂದು ಎರಡು ಯುವಕರ ನಡುವಿನ ಘರ್ಷಣೆ ಕೋಮುಗಲಭೆಗೆ ತಿರುಗಿದೆ. ಸಂಜೆ ವೇಳೆಗೆ ರತ್ನಾಕರ್ ಹಾಗೂ...

ಪೀಠಬಿಟ್ಟು ಅಲ್ಲಿಗೆ ಹೋಗುವುದು ಹೇಗೆ: ವೀರೇಂದ್ರ ಹೆಗ್ಗಡೆ ಪ್ರಶ್ನೆ

6 months ago

ಮಂಗಳೂರು: ಕ್ಷೇತ್ರದ ಎಲ್ಲಾ ಪೂಜೆಯಲ್ಲಿ, ಕಾರ್ಯಕ್ರಮದಲ್ಲಿ ನಾನು ಇಲ್ಲಿ ಇರಲೇಬೇಕು. ಪೀಠಬಿಟ್ಟು ಅಲ್ಲಿಗೆ ಹೋಗುವುದು ಹೇಗೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ರಾಷ್ಟ್ರಪತಿ ರೇಸ್‍ನಲ್ಲಿ ಧರ್ಮಾಧಿಕಾರಿಯವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ವೀರೇಂದ್ರ ಹೆಗ್ಗಡೆಯವರನ್ನು ಸಂಪರ್ಕಿಸಿದಾಗ,...