Thursday, 22nd February 2018

Recent News

4 days ago

ಸುಳ್ಯದಲ್ಲಿ ರಾತ್ರೋರಾತ್ರಿ ದನಕಳ್ಳತನ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರು: ಕರಾವಳಿಯಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ. ರಾತ್ರಿ ರಸ್ತೆ ಬದಿ ಮಲಗುವ ದನಗಳನ್ನು ದುಷ್ಕರ್ಮಿಗಳು ಕಾರಿನಲ್ಲಿ ಹಾಕಿ ಅಪಹರಿಸಿ ಹತ್ಯೆ ಮಾಡುತ್ತಿದ್ದು, ನಿರಂತರವಾಗಿ ದನ ಕಳ್ಳತನ ಮಾಡುತ್ತಿದ್ದಾರೆ. ಫೆಬ್ರವರಿ 16 ರಂದು ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗ ಸ್ಕಾರ್ಪಿಯೋ ಮತ್ತು ಮಾರುತಿ 800 ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ದನಗಳನ್ನು ಓಡಿಸಿಕೊಂಡು ಹೋಗಿ ಅಪಹರಿಸಿ ಕಾರ್ ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಸುಳ್ಯ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ ಘಟನೆ ನಡೆದಿದ್ದು, ಮಧ್ಯರಾತ್ರಿಯೇ ದುಷ್ಕರ್ಮಿಗಳು ಕೃತ್ಯ […]

6 days ago

ಸಾಮಾನ್ಯರಂತೆ ಸುಳ್ಯದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ

ಮಂಗಳೂರು: ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ ಕರಾವಳಿಯ ಮಸೀದಿಯೊಂದಕ್ಕೆ ತೆರಳಿ ಶುಕ್ರವಾರ ಜುಮಾ ನಮಾಝ್ ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ. ಸಿನೆಮಾ ಶೂಟಿಂಗ್ ಒಂದರ ಚಿತ್ರೀಕರಣಕ್ಕಾಗಿ ಕಳೆದ ಒಂದು ವಾರದಿಂದ ಮಂಗಳೂರಿನ ಸುಳ್ಯದ ಕೊಯಿಲದಲ್ಲಿರುವ ಅವರು ಶುಕ್ರವಾರ ಸಾಮಾನ್ಯರಂತೆ ನಿಂತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ನಗರದ ಕೊಯಿಲದ ಅತ್ತೂರು ಮಸೀದಿಗೆ ತೆರಳಿದ ಅವರು ತಲೆಗೆ ಟೊಪ್ಪಿ...

ಪಕೋಡಾ ವ್ಯಾಪಾರಿಯ ನಿರ್ಲಕ್ಷ್ಯಕ್ಕೆ ಬಾಲಕಿಯ ಕಾಲು ಸುಟ್ಟೇ ಹೋಯ್ತು!

1 week ago

ಮಂಗಳೂರು: ರಸ್ತೆ ಬದಿ ಪಕೋಡಾ ವ್ಯಾಪಾರಿಯೊಬ್ಬಳು ಕಾದ ಎಣ್ಣೆಯನ್ನು ಸುರಿದ ಪರಿಣಾಮ ಬಾಲಕಿಯ ಬಲಗಾಲು ಸುಟ್ಟು ಹೋಗಿರುವ ಅಮಾನವೀಯ ಘಟನೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನಲ್ಲಿ ನಡೆದಿದೆ. 14 ವರ್ಷದ ಅಮಂಡಾ ಗಾಯಗೊಳಗಾದ ಬಾಲಕಿ. ಭಾನುವಾರ ಮಧ್ಯಾಹ್ನ ಅಮಂಡಾ ತನ್ನ ತಂದೆ...

ಹಳೇ ದ್ವೇಷದ ಹಿನ್ನೆಲೆಯಲ್ಲಿ ತಂದೆಯಿಂದಲೇ ಮಗನ ಕೊಲೆ

1 week ago

ಮಂಗಳೂರು: ತಂದೆಯೇ ತನ್ನ ಸ್ವಂತ ಮಗನನ್ನು ಚೂರಿಯಿಂದ ಇರಿದು ಕೊಲೆಗೈದಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಟ್ಲ ಎಂಬಲ್ಲಿ ನಡೆದಿದೆ. ನವೀನ್ (28) ಕೊಲೆಯಾದವನಾಗಿದ್ದು ತಂದೆ ಮಂಜುನಾಥ್ ಹಾಗೂ ಇನ್ನೊಬ್ಬ ಪುತ್ರ ರಾಘವೇಂದ್ರ ಕೃತ್ಯ ಎಸಗಿದ್ದಾರೆ. ಕಳೆದ ಡಿ.31...

ಜನಾರ್ದನ ಪೂಜಾರಿ ಪ್ಯಾಂಟ್ ಒಳಗೆ RSSನ ಚಡ್ಡಿ ಇದೆ: ಮಧು ಬಂಗಾರಪ್ಪ ಲೇವಡಿ

2 weeks ago

– ಬಿಜೆಪಿಯವರು ಅನಂತ್ ಕುಮಾರ್ ಹೆಗಡೆಗೆ ಗೋಮೂತ್ರದಿಂದ ಸ್ನಾನ ಮಾಡಿಸಲಿ ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ್ ಪೂಜಾರಿಯವರ ಪ್ಯಾಂಟ್ ಒಳಗೆ ಆರ್ ಎಸ್‍ಎಸ್ ಚಡ್ಡಿ ಹಾಕಿಕೊಳ್ಳುತ್ತಾರೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಲೇವಡಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ...

ಶಾಲೆಯಲ್ಲಿ ತಪ್ಪು ಮಾಡಿದ್ದಾಳೆಂದು 20 ವರ್ಷದಿಂದ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿದ ಪೋಷಕರು

2 weeks ago

ಮಂಗಳೂರು: ಶಾಲೆಯಲ್ಲಿ ತಪ್ಪು ಮಾಡಿದಳೆಂಬ ಕಾರಣಕ್ಕಾಗಿ ಯುವತಿಯನ್ನು 20 ವರ್ಷದಿಂದ ಮನೆಯ ಕತ್ತಲೆ ಕೋಣೆಯೊಳಗೆ ಕೂಡಿ ಹಾಕಿ ಮನೆ ಮಂದಿ ಅಮಾನವೀಯತೆ ಮೆರೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿ ನಡೆದಿದೆ. ಮಲ್ಲಿಕಾ (35) ಕತ್ತಲೆ ಕೋಣೆಯಲ್ಲಿದ್ದ ಯುವತಿ....

ಹಳಿ ದಾಟುವಾಗ ಡಿಕ್ಕಿ ಹೊಡೆದ ರೈಲು-ಒಂದೂವರೆ ವರ್ಷದ ಮಗು ಸೇರಿ ಮೂವರ ಸಾವು

3 weeks ago

ಮಂಗಳೂರು: ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೂರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡು ಬಳಿಯ ಮಂಜೇಶ್ವರದಲ್ಲಿ ನಡೆದಿದೆ. ಮಂಜೇಶ್ವರ ರೈಲ್ವೆ ನಿಲ್ದಾಣದ ಬಳಿಯೇ ಘಟನೆ ನಡೆದಿದ್ದು ಇಬ್ಬರು ಮಹಿಳೆಯರು ಸೇರಿದಂತೆ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಮಂಜೇಶ್ವರದಲ್ಲಿ...

150 ವರ್ಷಗಳ ಬಳಿಕ ರಕ್ತಚಂದಿರ ಗ್ರಹಣ- ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವಿಲ್ಲ

3 weeks ago

ಬೆಂಗಳೂರು, ಮಂಗಳೂರು: ಸೌರವ್ಯೂಹದಲ್ಲಿ ಇಂದು ಚಂದ್ರ ಚೋದ್ಯ ಸಂಭವಿಸಲಿದೆ. 152 ವರ್ಷಗಳ ಬಳಿಕ ಮೊದಲ ಬಾರಿಗೆ ಒಟ್ಟೊಟ್ಟಿಗೆ ಸೂಪರ್‍ಮೂನ್, ಬ್ಲಡ್‍ಮೂನ್, ಬ್ಲೂ ಮೂನ್, ಗೋಚರವಾಗ್ತಿದೆ. ರಕ್ತಚಂದಿರ ಗ್ರಹಣದಿಂದಾಗಿ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಬೀಗ ಬಿದ್ದಿದೆ. ಧರ್ಮಸ್ಥಳದ ಮಂಜುನಾಥೇಶ್ವರ, ಕುಕ್ಕೆ, ಚಾಮುಂಡೇಶ್ವರಿ, ತಿರುಪತಿ...