Wednesday, 18th October 2017

Recent News

7 months ago

ಚಿತ್ರದುರ್ಗ: ಟೈರ್‍ಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಹೊತ್ತಿ ಉರಿದ ಸರಕು ಸಾಗಣೆ ಲಾರಿ

ಚಿತ್ರದುರ್ಗ: ಸರಕು ಸಾಗಣೆ ಲಾರಿಯ ಟೈರ್‍ಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಚಲಿಸುತ್ತಿದ್ದ ಲಾರಿಯ ಟೈರ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಲಾರಿ ಭಾಗಶಃ ಸುಟ್ಟು ಭಸ್ಮವಾಗಿದೆ. ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿ ಚಾಲಕ ಲಾರಿ ಬಿಟ್ಟು ಇಳಿದಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

7 months ago

ಬಿಜೆಪಿ ಮುಖಂಡ ವಾಸು ಹತ್ಯೆಯ ಆರೋಪಿ ಸತೀಶ್ ಬಂಧನ

ಚಿತ್ರದುರ್ಗ: ಬೆಂಗಳೂರಿನ ಬಿಜೆಪಿ ಮುಖಂಡ ವಾಸು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸತೀಶ್ ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ. ಸತೀಶ್ ವಾಸು ಅವರನ್ನು ಹತ್ಯೆಗೈದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕರೆ ತಾಲೂಕಿನ ಉಗಣೆಕಟ್ಟೆ ವಡರಹಟ್ಟಿ ಗ್ರಾಮದ ಅಜ್ಜಿ ಮನೆಯಲ್ಲಿ ತಲೆಮರೆಸಿಕೊಂಡಿದ್ದನು. ಇಂದು ಸತೀಶ್ ಅಜ್ಜಿಯ ಮನೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬೆಂಗಳೂರಿನ ಹೊಸಕೋಟೆ ಪೊಲೀಸರ...

ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿ ರಕ್ಷಣೆ

7 months ago

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕರೆ ತಾಲೂಕಿನ ತಿರುಮಲಾಪುರ ಗ್ರಾಮಕ್ಕೆ ಆಹಾರ ಅರಸುತ್ತಾ ಬಂದು ತಂತಿ ಬೇಲಿಯಲ್ಲಿ ಸಿಲುಕಿದ್ದ ಕರಡಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆಹಾರ, ನೀರು ಹುಡುಕುತ್ತಾ ನಾಡಿನತ್ತ ಬಂದ ಕರಡಿ ರೈತರು ಗದ್ದೆಗೆ ಹಾಕಿದ ತಂತಿಗೆ ಸಿಲುಕಿತ್ತು. ಗ್ರಾಮದ ವೆಂಕಟೇಶ್ ಎಂಬವರ ಗದ್ದೆಯಲ್ಲಿ...

ಬೆಳಗ್ಗೆ 4 ಗಂಟೆಗೆ ಎದ್ದು ಕನ್ನಡ ಸುದ್ದಿಪತ್ರಿಕೆಗಳನ್ನ ಮಾರೋ ಚಿತ್ರದುರ್ಗದ ಸ್ವಾಭಿಮಾನಿ ಪುಟ್ಟಮ್ಮಜ್ಜಿ ನಮ್ಮ ಪಬ್ಲಿಕ್ ಹೀರೋ

7 months ago

ಚಿತ್ರದುರ್ಗ: ಹೆಣ್ಣು ಎಷ್ಟು ತ್ಯಾಗಮಯಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಆಕೆ ತನ್ನ ಇಡೀ ಜೀವನವನ್ನೇ ಕುಟುಂಬಕ್ಕೆ ಸಮರ್ಪಿಸಿಕೊಂಡಿರ್ತಾಳೆ. ಅಂಥದ್ದೇ ಮಹಿಳೆಯ ಸ್ಟೋರಿ ಚಿತ್ರದುರ್ಗದಿಂದ ತಂದಿದ್ದೀವಿ. ಸಂಧ್ಯಾಕಾಲದಲ್ಲೂ ಸ್ವಾಭಿಮಾನದ ಬದುಕು ಸಾಗಿಸ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ ಪುಟ್ಟಮ್ಮಜ್ಜಿ. ಪುಟ್ಟಮ್ಮ ಚಿತ್ರದುರ್ಗದ...

ಬೇಸಿಗೆಯಲ್ಲೂ ಕಾಡು, ನಾಡಿನ ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊಟ್ಟು ನೀರುಣಿಸ್ತಾರೆ

8 months ago

ಚಿತ್ರದುರ್ಗ: ಈ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರ, ನೀರು ಸಿಗೋದೇ ಕಷ್ಟ. ಕೆಲವರು ಮನೆಗಳ ಮುಂದೆ ಬರುವ ಪ್ರಾಣಿ, ಪಕ್ಷಿಗಳಿಗೆ ಆಹಾರ ಕೊಟ್ಟು ಪ್ರೀತಿ ತೋರುತ್ತಾರೆ. ಆದರೆ ಚಿತ್ರದುರ್ಗದಲ್ಲಿ ಪ್ರಾಣಿ, ಪಕ್ಷಿ ಪ್ರೇಮಿಯೊಬ್ಬರು ನೇರವಾಗಿ ಕಾಡಿಗೆ ಹೋಗಿ ಪಕ್ಷಿ, ಪ್ರಾಣಿಗಳಿಗೆ ಆಹಾರ...

ಚಿತ್ರದುರ್ಗ: ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು, 11 ಜನರಿಗೆ ಗಾಯ

8 months ago

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದ ಬಳಿ ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, 11 ಜನರಿಗೆ ಗಾಯಗೊಂಡಿದ್ದಾರೆ. ಗಂಗಮ್ಮ (34) ಮತ್ತು ಚಿರಂಜೀವಿ (28) ಮೃತ...

ಪೂಜೆಗಾಗಿ ತಾಯಿಯ ರುಂಡವನ್ನೇ ಮಚ್ಚಿನಿಂದ ಕೊಚ್ಚಿದ ಮಗ..!

8 months ago

ಚಿತ್ರದುರ್ಗ: ಪೂಜೆಗಾಗಿ ಹೆತ್ತ ತಾಯಿಯ ರುಂಡವನ್ನೇ ಕಡಿದು ಭೀಕರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿಗೊಲ್ಲರ ಹಟ್ಟಿಯಲ್ಲಿ ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ. ಸಾವಿತ್ರಮ್ಮ (60) ಮಗನಿಂದ ಹತಳಾದ ತಾಯಿ. ತಿಮ್ಮರಾಜು ಎಂಬುವನೇ ತಾಯಿಯ ರುಂಡವನ್ನು ಕಡಿದು...

ಅಂಗವಿಕಲರ ತ್ರಿಚಕ್ರ ಬೈಸಿಕಲ್ ಕೊಟ್ಟು ಫೋಟೋ ತೆಗೆಸಿ ಕಸಿದುಕೊಂಡ್ರು!

8 months ago

ಚಿತ್ರದುರ್ಗ: ಅಂಗವಿಕಲ ಫಲಾನುಭವಿ ಅಂತಾ ವಾಹನ ಕೊಟ್ಟಿದೀವಿ ಅಂತಾ ಫೋಟೋ ತೆಗೆದು ಕಾರ್ಯಕ್ರಮ ಮುಗಿದ ಮೇಲೆ ಎರಡು ದಿನ ಆದ್ಮೇಲೆ ಗಾಡಿ ಕೊಡ್ತೀವಿ ಎಂದು ಹೇಳಿ ಎರಡೂವರೆ ತಿಂಗಳಾದ್ರೂ ನೀಡದೇ ಅವಮಾನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹೊಳಲ್ಕೆರೆ ತಾಲೂಕಿನ ಕೆಂಗುಂಟೆ...