Wednesday, 23rd May 2018

Recent News

9 months ago

ಆಟೋ-ಲಾರಿ ನಡುವೆ ಡಿಕ್ಕಿ- ನಾಲ್ವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಆಟೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಬಳಿ ನಡೆದಿದೆ. ಹಿರಿಯೂರು ಪಟ್ಟಣದ ಸಮೀಪವಿರುವ ನಂಜಯ್ಯನ ಕೊಟ್ಟಿಗೆ ನಿವಾಸಿಗಳಾದ ಮನೋಹರ್, ಶರಣ್, ಮುತ್ತು ಹಾಗು ಮದಕರಿಪುರ ಗ್ರಾಮದ ನಿವಾಸಿ ಚಿದಾನಂದ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರ ಹೆಸರು ತಿಳಿದುಬಂದಿಲ್ಲ. ಲಾರಿ ಚಾಲಕನ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಅಪಘಾತದ ಬಳಿಕ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. […]

9 months ago

ಅನಾಥೆಯನ್ನ ಮದ್ವೆಯಾಗಿ ವೇಶ್ಯಾವಾಟಿಕೆಗೆ ತಳ್ಳಲೆತ್ನಿಸಿದ- ಪಿಂಪ್ ಗಂಡನ ವಿರುದ್ಧ ಪತ್ನಿಯ ಹೋರಾಟ

ಚಿತ್ರದುರ್ಗ: ಆಕೆ ಹೆತ್ತವರನ್ನ ಕಳೆದುಕೊಂಡು ತಬ್ಬಲಿಯಾಗಿದ್ಲು. ವಯಸ್ಸಿಗೆ ಬರೋ ಮುಂಚೆನೇ ಆಕೆಗೆ ಸಂಬಂಧಿಕರೆಲ್ಲಾ ಸೇರಿ ತನಗಿಂತ ಹಿರಿಯ ವಯಸ್ಸಿನ ವ್ಯಕ್ತಿಯೊಂದಿಗೆ ಮದುವೆ ಮಾಡಿಬಿಟ್ರು. ತನ್ನ ಗಂಡ ವೇಶ್ಯಾವಾಟಿಕೆ ನಡೆಸೋ ಪಿಂಪ್ ಅಂತ ಗೊತ್ತಾದಾಗ ಆಕೆ ಆಘಾತಕ್ಕೆ ಒಳಗಾದ್ಲು. ಚಿತ್ರದುರ್ಗದ ಮುದ್ದಾಪುರ ಗ್ರಾಮದ ನಿವಾಸಿಯಾದ ತಿಪ್ಪೇಸ್ವಾಮಿ ಪತ್ನಿಯನ್ನ ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಂಡಿದ್ದ. ಕೊನೆಗೆ ತಾನೊಬ್ಬ ವೇಶ್ಯಾವಾಟಿಕೆ ಪಿಂಪ್...

ಮನೆಬಾಗಿಲು ತಟ್ಟಿದ್ರೂ ತಲೆಕೆಡಿಸಿಕೊಳ್ಳದ ವೈದ್ಯೆ- ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 9ರ ಬಾಲಕಿ ದುರ್ಮರಣ!

10 months ago

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ರು. ಇದೀಗ ಮತ್ತೆ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ತೀವ್ರ ಉಸಿರಾಟದ ತೊಂದ್ರೆಯಿಂದ ತಡರಾತ್ರಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಐಶ್ವರ್ಯಳನ್ನ ಕರೆದುಕೊಂಡು ಬರಲಾಗಿತ್ತು. ತುರ್ತು ಚಿಕಿತ್ಸಾ...

ಅನಾಥನಾದ್ರೂ ಇವರು ನೂರಾರು ಹೆಣ್ಣುಮಕ್ಕಳಿಗೆ ಅಣ್ಣ

10 months ago

ಚಿತ್ರದುರ್ಗ: ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಠಿಯಿಂದ ನೋಡೋ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಇವರು ಮಾದರಿ. ಹುಟ್ಟುತ್ತಾ ಅನಾಥನಾದರೂ ನೂರಾರು ಹೆಣ್ಣು ಮಕ್ಕಳಿಗೆ ಅಣ್ಣ. ಇಂತಹ ಅಪರೂಪದ ಅಣ್ಣ ಜಿಲ್ಲೆಯಲ್ಲಿದ್ದಾರೆ. ಪ್ರತಿ ವರ್ಷ ರಕ್ಷಾ ಬಂಧನ ಸಮಯದಲ್ಲಿ ನೂರಾರು ಹೆಂಗಳೆಯರು ರಾಖಿ ಕಟ್ಟಿ...

ಚಿಕ್ಕಪ್ಪನಿಂದಲೇ ಮನೆಗೆ ಪೆಟ್ರೋಲ್ ಬಾಂಬ್ ಎಸೆತ- ದ್ವಿಚಕ್ರವಾಹನ ಭಸ್ಮ

10 months ago

ಚಿತ್ರದುರ್ಗ: ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ಮನೆಯ ಕಾಂಪೌಂಡಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನ ಭಸ್ಮವಾಗಿರೋ ಘಟನೆ ಚಿತ್ರದುರ್ಗ ನಗರದ ವಿಪಿ ಬಡಾವಣೆಯಲ್ಲಿ ನಡೆದಿದೆ. ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿರುವ ರವಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಒಂದು ಲಕ್ಷ ರೂಪಾಯಿ...

ಹನಿ ಮಳೆ ನೀರೂ ವೇಸ್ಟ್ ಮಾಡಲ್ಲ- ಜೀವಜಲದ ಮಹತ್ವದ ಬಗ್ಗೆ ಜಾಗೃತಿ ಮೂಡಿಸ್ತಿರೋ ಚಿತ್ರದುರ್ಗದ ನಾಗರಾಜ್

10 months ago

ಚಿತ್ರದುರ್ಗ: ಮಳೆಕೊಯ್ಲಿನ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಅದನ್ನ ಅಳವಡಿಕೆ ಮಾಡಿಕೊಂಡಿರೋದು ಬೆರಳೆಣಿಕೆಯಷ್ಟು ಮಂದಿ. ಹೀಗೆ, ನೀರಿನ ಮಹತ್ವ ತಿಳಿದು ಮಳೆಕೊಯ್ಲು ಪದ್ಧತಿ ಜೊತೆಗೆ ಮನೆಯಲ್ಲಿ ಬಳಸಿದ ನೀರನ್ನೂ ಸದ್ಬಳಕೆ ಮಾಡಿಕೊಳ್ತಿದ್ದಾರೆ ಚಿತ್ರದುರ್ಗದ ಪಬ್ಲಿಕ್ ಹೀರೋ ನಾಗರಾಜ್....

ಮಲ್ಲೇಶ್ವರಂ ಗೋಡೆಗಳ ಮೇಲೆ ದೃಶ್ಯಕಾವ್ಯ ಅರಳಿಸಿದ್ದ ಅದ್ಭುತ ಕಲಾವಿದ ಈಗ ಹಾಸಿಗೆ ಹಿಡಿದು ಕೇಳ್ತಿದ್ದಾರೆ ಸಹಾಯ

10 months ago

ಚಿತ್ರದುರ್ಗ: ಈ ವ್ಯಕ್ತಿ ಕೇವಲ ಚಿತ್ರಕಲಾವಿದರಲ್ಲ, ಬಹುಮುಖ ಪ್ರತಿಭೆ. ಯಾವುದೇ ಶಾಲಾ- ಕಾಲೇಜಿಗೆ ಹೋಗಿ ಕಲಿತವರಲ್ಲ. ಪ್ರವೃತ್ತಿಯಲ್ಲಿ ವನ್ಯಜೀವಿ ಛಾಯಾಗ್ರಾಹಕರು. ಸಾಹಸಿಗ, ಚಾರಣಿಗ, ಪರಿಸರ ಪ್ರೇಮಿ ಕೂಡ. ಇಂತಹ ಬಹುಮುಖ ಪ್ರತಿಭೆ ಈಗ ಹಾಸಿಗೆ ಹಿಡಿದಿದ್ದಾರೆ. ಜೀವನ ಬಂಡಿ ಸಾಗಿಸಲು ಆಗದೆ...

ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು: ಕುಟುಂಬಸ್ಥರ ಆಕ್ರೋಶ

10 months ago

ಚಿತ್ರದುರ್ಗ: ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ತಾಲೂಕಿನ ತುರುವನೂರು ಗ್ರಾಮದ ಟಿ.ದೇವರಾಜ (45) ಮೃತ ದುರ್ದೈವಿ. ತಡರಾತ್ರಿ ಎದೆನೋವು ಕಾಣಿಸಿಕೊಂಡ ಕೂಡಲೇ ಜಿಲ್ಲಾಸ್ಪತ್ರೆಗೆ ಟಿ.ದೇವರಾಜ್ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೆ ರಾತ್ರಿ 12 ಗಂಟೆಯಿಂದಲೂ ಚಿಕಿತ್ಸೆಗಾಗಿ...