Sunday, 24th June 2018

10 months ago

ಹೆಲ್ಮೆಟ್ ಹಾಕಿಕೊಂಡು ಜ್ಯುವೆಲ್ಲರಿ ಶಾಪ್ ಕಳ್ಳತನಕ್ಕೆ ವಿಫಲ ಯತ್ನ- ವಿಡಿಯೋ ನೋಡಿ

ಚಿಕ್ಕಬಳ್ಳಾಪುರ: ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಚೋರರು ಜ್ಯುವೆಲ್ಲರಿ ಶಾಪ್ ನಲ್ಲಿ ಕಳ್ಳತನ ಮಾಡಲು ಯತ್ನಿಸಿ ವಿಫಲವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ನಡೆದಿದೆ. ಶನಿವಾರ ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಸಿಸಿಕ್ಯಾಮೆರಾದಲ್ಲಿ ಕಳ್ಳರ ವಿಫಲ ಯತ್ನ ಸೆರೆಯಾಗಿದೆ. ಲಕ್ಷ್ಮೀ ಜ್ಯೂವೆಲ್ಲರ್ಸ್ ಅಂಡ್ ಬ್ಯಾಂಕರ್ಸ್ ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, ಹೆಲ್ಮೆಟ್ ಧರಿಸಿ ಮೊದಲು ಅಂಗಡಿ ಮುಂದೆಯ ಗೇಟ್ ನ ಬೀಗ ಒಡೆದು ಕಳ್ಳತನಕ್ಕೆ ಮುಂದಾಗಿದ್ದಾರೆ. ನಂತರ ರಸ್ತೆ […]

10 months ago

ಮಾವನ ಮನೆಯಲ್ಲಿ 11 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದ ಅಳಿಯ ಅರೆಸ್ಟ್

ಚಿಕ್ಕಬಳ್ಳಾಪುರ: ಮಾವನ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗಿದ್ದ ಅಳಿಯ ಪೊಲೀಸರ ಅತಿಥಿಯಾಗಿರುವ ಘಟನೆ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ. ನೂರ್ ಮಹಮದ್ ಪೊಲೀಸರ ಅತಿಥಿಯಾಗಿರುವ ಕಳ್ಳ ಅಳಿಯ. ಮೂಲತಃ ಆಂಧ್ರದ ಹಿಂದೂಪುರ ಮೂಲದ ನೂರ್ ಮಹಮದ್ ಗುಡಿಬಂಡೆ ತಾಲೂಕಿನ ರಾಮಪಟ್ಟಣ ಗ್ರಾಮದ ಮಹಬೂಬ್ ಸಾಬ್ ರ ಕಿರಿಯ ಮಗಳು...

ಪ್ರೇಮ ವೈಫಲ್ಯ ಶಂಕೆ- ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ

10 months ago

ಚಿಕ್ಕಬಳ್ಳಾಪುರ: ರೈಲಿಗೆ ಸಿಲುಕಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಶಾಂತಿ ನಗರದ 20 ವರ್ಷದ ಮದನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ರೈಲ್ವೆ ಹಳಿಗಳ ಮೇಲೆ ಇಂದು ಬೆಳಿಗ್ಗೆ ಮದನ್ ಶವ...

ಬಾಗೇಪಲ್ಲಿಯಲ್ಲಿ ಭಾರೀ ಮಳೆ, ರೈತರಿಗೆ ಸಂತಸ

10 months ago

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಾದ್ಯಾಂತ ಭಾರೀ ಮಳೆ ಯಾಗುತ್ತಿರುವುದರಿಂದ ರೈತರಿಗೆ ಸಂತಸ ಮೂಡಿಸಿದೆ. ಬಾಗೇಪಲ್ಲಿ ತಾಲೂಕಿನಲ್ಲಿ ಇಂದು ಮುಂಜಾನೆ 4 ಗಂಟೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಅಲ್ಲಿಯ ಪಟ್ಟಣದ ರಸ್ತೆಗಳ ತುಂಬೆಲ್ಲಾ ತಗ್ಗು ಪ್ರದೇಶಗಳು ಜಲಾವೃತಗೊಂಡು ಹಲವು ಮನೆಗಳಿಗೆ ನೀರು ನುಗ್ಗಿದೆ....

ಆಂಬುಲೆನ್ಸ್ ನಲ್ಲೇ ಮಗುವಿನ ಜನನ- ವೈದ್ಯರು ಕೈ ಕೊಟ್ರೂ ಕೈ ಹಿಡಿದ ಆಂಬುಲೆನ್ಸ್ ಸಿಬ್ಬಂದಿಗೆ ಬಾಣಂತಿಯಿಂದ ಧನ್ಯವಾದ

10 months ago

ಚಿಕ್ಕಬಳ್ಳಾಪುರ: ಮಹಿಳೆಯೊಬ್ಬರು ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ನಡೆದಿದೆ. ಸಿದ್ದೇಪಲ್ಲಿ ಗ್ರಾಮದ ವೆಂಕಟರತ್ನಮ್ಮ ಎಂಬವರನ್ನು ಚಿಂತಾಮಣಿಯಿಂದ ಕೋಲಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯೆಯೇ ಹೆರಿಗೆಯಾಗಿದೆ. ಮೊದಲು ಚಿಂತಾಮಣಿ ತಾಲೂಕು ಆಸ್ಪತ್ರೆಗೆ...

ಹರ್ಯಾಣ ಸಿಎಂ ತೆಗಳಿ, ಪಂಜಾಬ್ ಸಿಎಂ ಕ್ರಮವನ್ನು ಹೊಗಳಿದ ವೀರಪ್ಪ ಮೊಯ್ಲಿ

10 months ago

ಚಿಕ್ಕಬಳ್ಳಾಪುರ: ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ವಿರುದ್ಧ ವಾಗ್ದಾಳಿ ನಡೆಸಿ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಸಂಸದ ವೀರಪ್ಪ ಮೊಯ್ಲಿ ಹೊಗಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂಸಾಚಾರವನ್ನು ನಿಭಾಯಿಸಲು ಆಗದ ಮನೋಹರ್ ಲಾಲ್ ಖಟ್ಟರ್ ಹರ್ಯಾಣದ...

ರಾಮಲಿಂಗಂ ಕಂಪನಿಯಿಂದ ರಾಜ್ಯದ ಸಂಪತ್ತು ಲೂಟಿ- ಅಕ್ರಮವಾಗಿ ಬೆಟ್ಟವನ್ನೇ ಅಗೆದು ಕರಗಿಸಿದ್ರು

10 months ago

ಚಿಕ್ಕಬಳ್ಳಾಪುರ: ರಾಮಲಿಂಗಂ ಕನ್ಸ್ಟ್ರಕ್ಷನ್ಸ್ ಕಂಪನಿ. ತಮಿಳುನಾಡು ಮೂಲದ ದೊಡ್ಡ ಕಂಪನಿ. ರಸ್ತೆ ಮಾಡ್ತಿದ್ದೇವೆ, ರಸ್ತೆಗೆ ಬೇಕಾದ ಕಲ್ಲು ಪುಡಿ ತಯಾರಿ ಘಟಕ ಮಾಡಲು ಘಟಕ ಸ್ಥಾಪನೆಗೆ ಸ್ವಲ್ಪ ಜಾಗ ಕೊಡಿ ಅಂತ ಗೋಮಾಳದ ಜಾಗ ಪಡೆದಿತ್ತು. ಆದ್ರೆ ಕಲ್ಲು ಪುಡಿ ಘಟಕ...

ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಿ ಕೊಲೆಗೈದ ಕಾಮುಕರು

10 months ago

ಚಿಕ್ಕಬಳ್ಳಾಪುರ: ಮನೆಯಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿರುವ ಕಾಮುಕರು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗ್ರಾಮದ 9 ವರ್ಷದ ಬಾಲಕಿಯನ್ನ ಅಪಹರಿಸಿರುವ ದುಷ್ಕರ್ಮಿಗಳು,...