Friday, 24th November 2017

Recent News

3 weeks ago

ಶೀಘ್ರವೇ ಗೌರಿ ಹತ್ಯೆ ಆರೋಪಿಗಳು ಅರೆಸ್ಟ್: ರಾಮಲಿಂಗಾರೆಡ್ಡಿ

ಚಿಕ್ಕಬಳ್ಳಾಪುರ: ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ಬಹುತೇಕ ಮುಗಿದಿದ್ದು ಸದ್ಯದಲ್ಲೇ ಹಂತಕರನ್ನು ಬಂಧಿಸುತ್ತೇವೆಂದು ಗೃಹಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇಂದಿರಾ ನಮನ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಈ ಹಿಂದೆ ಕೂಡ ಸಾಕಷ್ಟು ಬಾರಿ ಹೇಳಿದ್ದೇನೆ. ತನಿಖೆ ಮಾಡಲಾಗಿದ್ದು, ಹಂತಕರು ಯಾರು ಅಂತ ತಿಳಿದಿದೆ. ಶೀಘ್ರದಲ್ಲೇ ಆರೋಪಿಗಳು ಯಾರು ಅಂತ ಪ್ರಕಟಿಸಲಾಗುತ್ತೆ. 100 ಕ್ಕೆ 100 ರಷ್ಟು ಹಂತಕರನ್ನ ಬಂಧಿಸುತ್ತೇವೆ. ಆರೋಪಿಗಳ […]

4 weeks ago

ಧರ್ಮಸ್ಥಳಕ್ಕೆ ಹೋಗುವಾಗ ಮೀನು ಮಾತ್ರವಲ್ಲ, ಕೋಳಿಯನ್ನೂ ತಿಂದಿದ್ದೆ: ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ನಾನು ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೋದಾಗ ಮೀನು ತಿಂದಿದ್ದು ನಿಜ, ಕೋಳಿ ತಿಂದಿದ್ದೂ ನಿಜ. ಮಾಂಸ ತಿಂದು ಹೋದ್ರೆ ದೇವರು ಅಪವಿತ್ರ ಆಗ್ಬಿಡ್ತಾನಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಅವತ್ತು ಮಂಗಳೂರಿನಲ್ಲಿ ಮೀನು ತಿಂದಿರೋದು ನಿಜ, ಕೋಳಿ ತಿಂದಿರೋದು ನಿಜ. ಅಂದೇ ಧರ್ಮಸ್ಥಳಕ್ಕೆ ಕಾರ್ಯಕ್ರಮ...

ಈ ಕಾರಣಕ್ಕಾದ್ರೆ ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿಲ್ಲ: ಮುತಾಲಿಕ್

4 weeks ago

ಚಿಕ್ಕಬಳ್ಳಾಪುರ: ಟಿಪ್ಪು ಮುಸ್ಲಿಂ ಎಂಬ ಕಾರಣಕ್ಕೆ ಜಯಂತಿ ಆಚರಣೆಗೆ ನಮ್ಮ ವಿರೋಧವಿಲ್ಲ. ಆದರೆ ಟಿಪ್ಪು ಒರ್ವ ಮತಾಂಧ, ಕನ್ನಡ ವಿರೋಧಿ ಎಂಬ ಕಾರಣಕ್ಕೆ ಮಾತ್ರ ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಅಂತ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ...

ಸ್ಪ್ಲೆಂಡರ್, ಬುಲೆಟ್ ನಡುವೆ ಮುಖಾಮುಖಿ ಡಿಕ್ಕಿ – ರಸ್ತೆ ಮಧ್ಯೆ ಗಾಯಾಳುಗಳ ನರಳಾಟ

4 weeks ago

ಚಿಕ್ಕಬಳ್ಳಾಪುರ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಮೂವರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡು ರಸ್ತೆ ಮಧ್ಯೆ ನರಳಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಏನಿಗದೆಲೆ ಕ್ರಾಸ್ ಬಳಿ ನಡೆದಿದೆ. ಬುಲೆಟ್ ಹಾಗೂ ಸ್ಪ್ಲೆಂಡರ್ ನಡುವೆ ಅಪಘಾತ...

ಮೊಗ್ಗಿನ ಜಡೆ ವಿಚಾರಕ್ಕೆ ಮುರಿದು ಬಿತ್ತು ಮದುವೆ!

4 weeks ago

ಚಿಕ್ಕಬಳ್ಳಾಪುರ: ಮದುವೆಯಲ್ಲಿ ಊಟ ಕಡಿಮೆ ಆಯ್ತು ಎಂದು ಮದುವೆ ಮುರಿದು ಬಿದ್ದ ಘಟನೆ ಈ ಹಿಂದೆ ನಡೆದಿತ್ತು. ಆದರೆ ವಧುವಿನ ಮೊಗ್ಗಿನ ಜಡೆ ಸರಿಯಾಗಿಲ್ಲ ಎಂಬ ಕ್ಷುಲಕ ಕಾರಣಕ್ಕೆ ವಿವಾಹವೇ ಮುರಿದು ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ...

ಶಾಸಕ ನೀಡಿದ ಬಾಡೂಟ ಸವಿದ ನಂತ್ರ ಕೆರೆಯಲ್ಲಿ ಮುಳುಗಿ ಯುವಕ ಸಾವು

1 month ago

ಚಿಕ್ಕಬಳ್ಳಾಪುರ: ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜೆಕೆ ಕೃಷ್ಣಾರೆಡ್ಡಿ ಅವರು ವಿತರಿಸಿದ ಬಾಡೂಟ ಸೇವಿಸಿದ ನಂತರ ಕನ್ನಂಪಲ್ಲಿ ಕೆರೆಯಲ್ಲಿ ಈಜಲು ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಚಿಂತಾಮಣಿ ನಗರದ ಸುನೀಲ್(25) ಮೃತ ಯುವಕ. ಬಾಡೂಟ ಸವಿದ ನಂತರ ಸ್ನೇಹಿತ ಜಯಸಿಂಹ ಜೊತೆ...

ಎಲೆಕ್ಷನ್ ಹತ್ತಿರದಲ್ಲಿ ಬಾಡೂಟದ ಪಾಲಿಟಿಕ್ಸ್: ಕೆರೆ ತುಂಬಿದ ನೆಪದಲ್ಲಿ ಶಾಸಕ ಜೆಕೆ ಕೃಷ್ಣಾರೆಡ್ಡಿಯಿಂದ ಭರ್ಜರಿ ಊಟ

1 month ago

ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದಂತೆ ಚಿತಾಮಣಿ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ಜೆಕೆ ಕೃಷ್ಣಾರೆಡ್ಡಿ ಮತದಾರರನ್ನು ಸೆಳೆಯಲು ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಈ ಬಾರಿ ಉತ್ತಮ ಮಳೆಯಾದ ಹಿನ್ನಲೆ ನಗರದ ಕುಡಿಯುವ ನೀರಿನ ಮೂಲ ಕನ್ನಂಪಲ್ಲಿ ಕೆರೆ ಕೋಡಿ ಹರಿದ ಕಾರಣಕ್ಕೆ...

ಹಬ್ಬ, ಮಗನ ಹುಟ್ಟುಹಬ್ಬ ಮುಗಿಸಿ ಬೆಂಗ್ಳೂರಿಗೆ ಮರಳುತ್ತಿದ್ದಾಗ ಬೈಕ್ ಡಿಕ್ಕಿಯಾಗಿ ತಂದೆ ಸಾವು!

1 month ago

ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ನಗರ ಹೊರವಲಯದ ಶೀತಲೀಕರಣ ಕೇಂದ್ರದ ಬಳಿ ನಡೆದಿದೆ. ಅಪಘಾತದಲ್ಲಿ ಆಂಧ್ರದ ಪರಿಗಿ ಮೂಲದ ಬೈಕ್ ಸವಾರ ಕಾರ್ತಿಕ್ ಎಂಬವರು...