Wednesday, 20th June 2018

Recent News

1 year ago

2 ವರ್ಷಗಳ ಕಾಲ ಬಿಳಿರಂಗನ ಬೆಟ್ಟದ ರಂಗನಾಥ ಸ್ವಾಮಿ ದೇವಾಸ್ಥಾನ ಬಂದ್

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ್ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ಈ ತಿಂಗಳ 15 ರಿಂದ ಮುಂದಿನ ಎರಡು ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲಾಗುತ್ತಿದೆ. ಸುಮಾರು 500 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ದೇವಾಲಯ ಶಿಥಿಲಗೊಂಡಿರುವುದರಿಂದ ದೇವಾಲಯವನ್ನು ಸದ್ಯ 2.90 ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ಥಿ ಮಾಡಲಾಗುತ್ತಿದೆ. ರಾಜ್ಯ ಪುರಾತತ್ವ ಇಲಾಖೆಯಿಂದ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಮುಂದಿನ ವಾರದಿಂದ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಾರಂಭವಾಗಲಿದೆ. ದೇವಸ್ಥಾನದ ಕಾಮಗಾರಿ ಹಿನ್ನೆಲೆಯಲ್ಲಿ ಭಕ್ತಾದಿಗಳು ಮಾರ್ಚ್ […]

1 year ago

ತಾಯಿಯನ್ನು ಕಳೆದುಕೊಂಡ ಮರಿಕೋತಿ ರೋದನೆ! ಮನ ಕಲಕುವ ವೀಡಿಯೋ ನೋಡಿ

ಚಾಮರಾಜನಗರ: ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ಕೋತಿ ಮರಿಯೊಂದು ರೋಧಿಸುತ್ತಿರುವ ಮನ ಕಲಕುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ನಡೆದಿದೆ. ಇಂದು ಬೆಳಗ್ಗೆ ರಸ್ತೆ ಬದಿಯಲ್ಲಿ ಕೋತಿ, ತನ್ನ ಮರಿಗಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ತಾಯಿ ಕೋತಿ ಸಾವನ್ನಪ್ಪಿದೆ. ಈ ವೇಳೆ ಜೊತೆಯಿದ್ದ ಕೋತಿ ಮರಿ ತನ್ನ ತಾಯಿಯನ್ನು ಕಳೆದುಕೊಂಡ ದುಃಖದಿಂದ...

Exclusive: ಮಹಿಳಾ ಅಧಿಕಾರಿಗೆ ಚಾಮರಾಜನಗರ ಕಾಂಗ್ರೆಸ್ ಶಾಸಕನಿಂದ ಮಾನಸಿಕ ಕಿರುಕುಳ!

1 year ago

ಚಾಮರಾಜನಗರ: ಸಿಎಂ ಸಂಸದೀಯ ಕಾರ್ಯದರ್ಶಿ ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಮಹಿಳಾ ಅಧಿಕಾರಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಶಾಸಕರು ಸಣ್ಣ ಸಣ್ಣ ವಿಚಾರಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿಯಾಗಿರುವ ಸರಸ್ವತಿ ಆರೋಪಿಸಿದ್ದಾರೆ....

ಬಿಳಿಗಿರಿ ರಂಗನ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಬೆಂಕಿ

1 year ago

ಚಾಮರಾಜನಗರ: ಕಳೆದ ಎಂಟು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮೂರು ದಿನಗಳಿಂದ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಣಾ ಪ್ರದೇಶ ಅಕ್ಷರಶಃ ಬೆಂಕಿಯಿಂದ ಹೊತ್ತಿ ಉರಿದಿತ್ತು. ಇದೀಗ ಬೆಂಕಿಯನ್ನು ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಬೆಂಕಿ ಜ್ವಾಲೆಯ ನಡುವೆ ಅರಣ್ಯ ಇಲಾಖೆ...

ಅರಣ್ಯಕ್ಕೆ ಬಿದ್ದ ಬೆಂಕಿ ಆರಿಸುತ್ತಿರುವವರಿಗೆ ಬೇಕಿದೆ ಆಹಾರ, ಕುಡಿಯುವ ನೀರು

1 year ago

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟದ ಅರಣ್ಯಕ್ಕೆ ಬಿದ್ದ ಬೆಂಕಿ ಆರಿಸುತ್ತಿರುವ ಅಗ್ನಿ ಶಾಮಕ ಮತ್ತು ಅರಣ್ಯ ಸಿಬ್ಬಂದಿಗೆ ಆಹಾರ ಮತ್ತು ಕುಡಿಯುವ ನೀರು ಸಿಗದೇ ಪರದಾಡುತ್ತಿದ್ದಾರೆ.     ಗುರುವಾರ ಸಂಜೆ ಬಿಳಿಗಿರಿ ರಂಗನಬೆಟ್ಟದ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಿಯಂತ್ರಣಕ್ಕೆ...

ಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿಯಿಟ್ಟ ವ್ಯಕ್ತಿಯ ಬಂಧನ

1 year ago

ಚಾಮರಾಜನಗರ: ಜಿಲ್ಲೆಯ ಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಚಾಮರಾಜನಗರ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಮೋಹನ್ ಕುಮಾರ್ ರಥಕ್ಕೆ ಬೆಂಕಿ ಹಚ್ಚಿದವನು. ಮೋಹನ್ ಕುಮಾರ್ ನಗರ ಸಭೆ ಮಾಜಿ ಅಧ್ಯಕ್ಷೆಯೊಬ್ಬರ ಸಂಬಂಧಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ ಕಳೆದ...

ನಾಗರಹೊಳೆ ಅರಣ್ಯದಲ್ಲಿ ಕರಡಿಗೆ ಹೆದರಿ ಓಟ ಕಿತ್ತ ಹುಲಿರಾಯ- ವೀಡಿಯೋ ನೋಡಿ

1 year ago

ಚಾಮರಾಜನಗರ: ಹುಲಿಯಂತಹ ಬಲಿಷ್ಠ ಪ್ರಾಣಿಯನ್ನೇ ಕರಡಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ನಾಗರಹೊಳೆ ಅರಣ್ಯದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರೊಬ್ಬರಿಗೆ ಸೆರೆಸಿಕ್ಕಿದೆ. ಬೆಂಗಳೂರಿನ ಅಭಿಷೇಕ್ ಎಂಬುವವರು ನಾಗರಹೊಳೆಯಲ್ಲಿ ಸಫಾರಿಗೆ ಹೋಗಿದ್ದ ಸಂದರ್ಭದಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ. ವನ್ಯಜೀವಿ ತಜ್ಞರು ಹೇಳುವ ಪ್ರಕಾರ ನೀರಿಗಾಗಿ ಇಂತಹ...

ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಮಗು ಸಜೀವ ದಹನ

1 year ago

ಚಾಮರಾಜನಗರ: ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಮಗು ಸಜೀವ ದಹನವಾಗಿರುವ ದಾರುಣ ಘಟನೆ ಚಾಮರಾಜನಗರದ ಮಹದೇಶ್ವರ ಬೆಟ್ಟದ ಆಳಂಬಾಡಿ ಗ್ರಾಮದಲ್ಲಿ ನಡೆದಿದೆ. ಆಳಂಬಾಡಿ ಗ್ರಾಮದ ಸುರೇಶ್ ಹಾಗೂ ಮುತ್ತುಲಕ್ಷ್ಮೀ ದಂಪತಿಯ ಮಗುವೇ ಬೆಂಕಿಗಾಹುತಿಯಾಗಿರುವ ಮೃತ ದುರ್ದೈವಿ. ದಂಪತಿಗೆ ಅರಣ್ಯ ಇಲಾಖೆಯು...