Saturday, 24th February 2018

Recent News

12 months ago

ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರ ಬಂಧನ

ಬೀದರ್: ಬಸ್‍ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ಕು ಮಹಿಳೆಯರನ್ನು ಬೀದರ್ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ. ಕಮಲಾಬಾಯಿ (33), ಅಂಬಾಬಾಯಿ (35), ರಮಾಬಾಯಿ (36) ಹಾಗೂ ರೇಖಾಬಾಯಿ (31) ಬಂಧಿತ ಮಹಿಳೆಯರು. ಈ ನಾಲ್ವರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನಿಂದ ಮಹಾರಾಷ್ಟ್ರ ರಾಜ್ಯದ ಲಾಥೂರ್ ನಗರಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ 22 ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರು ಬಸ್‍ನಲ್ಲಿ ಗಾಂಜಾ ಸಾಗಿಸುವ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಅವರ ನೇತೃತ್ವದಲ್ಲಿ ದಾಳಿ […]

12 months ago

ಬೀದರ್: ಸರ್ಕಾರಿ ಶಾಲೆಯಲ್ಲಿ ಶೌಚಾಲಯವಿಲ್ದೆ ಸಂಕಟ ಪಡ್ತಿದ್ದಾರೆ ವಿದ್ಯಾರ್ಥಿನಿಯರು

ಬೀದರ್: ಪ್ರತಿ ಮನೆಯಲ್ಲೂ ಶೌಚಾಲಯಗಳಿರಬೇಕು ಎನ್ನುವ ಈ ಕಾಲದಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಶೌಚಾಲಯವಿಲ್ಲದೆ ವಿದ್ಯಾರ್ಥಿನಿಯರು ಬಯಲಿನಲ್ಲಿ ಶೌಚ ಮಾಡಬೇಕಾದ ದುರಾದೃಷ್ಟ ಎದುರಾಗಿದೆ. 190 ವಿದ್ಯಾರ್ಥಿಗಳಿರುವ ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 80%ರಷ್ಟು ವಿದ್ಯಾರ್ಥಿನಿಯರಿದ್ದು, ಪ್ರತಿದಿನ ಬಹಿರ್ದೆಸೆಗೆ ಹೋಗಲು ನರಕಯಾತನೆ ಪಡುತ್ತಿದ್ದಾರೆ. ಶೌಚ ಮಾಡಲು ಶಾಲೆಯಲ್ಲಿ ಶೌಚಾಲಯವಿಲ್ಲದೆ ಬಯಲಿಗೆ ಹೋಗಬೇಕಾಗಿದ್ದರಿಂದ...

ಹಳೇ ವೈಷ್ಯಮ್ಯಕ್ಕೆ ಸಹೋದರರನ್ನು ಬರ್ಬರವಾಗಿ ಕೊಲೆಗೈದ ದುಷ್ಕರ್ಮಿಗಳು

1 year ago

ಬೀದರ್: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಾಲ್ವರು ದುಷ್ಕರ್ಮಿಗಳು ಇಬ್ಬರು ಸಹೋದರರನ್ನು ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಲಚ್ಚರ್ ಕಾಲೋನಿಯಲ್ಲಿ ನಡೆದಿದೆ. 32 ವರ್ಷದ ಇಬ್ರಾಹಿಮ್ ಮತ್ತು 26 ವರ್ಷದ ಹುಸೇನ್ ಕೊಲೆಯಾದ ದುರ್ದೈವಿ ಸಹೋದರರು. 43 ವರ್ಷದ ಅಲಾಶ್,...