Sunday, 17th December 2017

Recent News

7 months ago

ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್- ಸವಾರನಿಗೆ ಗಂಭೀರ ಗಾಯ

ಬೆಂಗಳೂರು: ಚಲಿಸುತ್ತಿದ್ದ ಬೈಕ್ ಮೇಲೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ನಡೆದಿದೆ.   36 ವರ್ಷದ ಉಮೇಶ್ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳಪೆ ಕಾಮಗಾರಿಯಿಂದ ನಿರ್ಮಾಣ ಮಾಡಿರುವ ಕಾರಣ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಘಟನೆ ಹಿನ್ನೆಲೆಯಲ್ಲಿ ಬೆಸ್ಕಾಂ ಸಿಬ್ಬಂದಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗೆ ನೆಲಮಂಗಲ ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿಲ್ಲ. […]

7 months ago

ಬರಡು ಭೂಮಿಯಲ್ಲಿ ಬಂಗಾರದಂಥ ಬೆಳೆ-ಕೃಷಿಯಲ್ಲಿ ಬದುಕಿನ ಖುಷಿ ಕಂಡುಕೊಂಡ ನಟ

ಬೆಂಗಳೂರು: ಈಗಿನ ಪರಿಸ್ಥಿತಿಯಲ್ಲಿ ಕೃಷಿ ಅಂದ್ರೆ ಕಷ್ಟ ಕಣ್ರಿ ಅನ್ನೋವ್ರೇ ಜಾಸ್ತಿ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸಿನಿಮಾ ನಟರಾದ್ರೂ ಕೃಷಿಯಲ್ಲಿ ಖುಷಿಯ ಬದುಕು ಕಂಡುಕೊಂಡಿದ್ದಾರೆ. ನಟ ವಿನೋದ್ ರಾಜ್ ತಾಯಿ ಲೀಲಾವತಿಯವರ ಮಾರ್ಗದರ್ಶನದಂತೆ ಬಿರು ಬೇಸಿಗೆಯಲ್ಲೂ ಉತ್ತಮ ಇಳುವರಿಯ ಬೆಳೆ ತೆಗೆದಿದ್ದಾರೆ. ದಶಕದ ಹಿಂದೆ ವಿವಿಧ ಪಾತ್ರಗಳೊಂದಿಗೆ ರಾಜ್ಯದ ಜನತೆಯ ಮೆಚ್ಚುಗೆ ಪಡೆದವರು...

ವಿಡಿಯೋ: ಬಂಡೆಯೊಂದರ ಹಳ್ಳದಲ್ಲಿ ಬಿದ್ದ ಆನೆಮರಿಯ ರಕ್ಷಣೆ

8 months ago

ಬೆಂಗಳೂರು: ರಾತ್ರಿ ಕಾಡಿನಿಂದ ಬಂದ ಆನೆಗಳ ಗುಂಪಿನಿಂದ ಬೇರ್ಪಟ್ಟು ಬಂಡೆಯ ಕಂದಕದಲ್ಲಿ ಬಿದ್ದಿದ್ದ ಮೂರು ವರ್ಷದ ಆನೆಮರಿಯನ್ನು ರಕ್ಷಿಸಲಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶದ ತಳಿ ಗ್ರಾಮದ ಹುಲಿಬಂಡೆ ಎಂಬ ಅರಣ್ಯದಲ್ಲಿ ಆನೆಮರಿ ಕಂದಕಕ್ಕೆ ಬಿದ್ದಿತ್ತು. ತಳಿ ಗ್ರಾಮದ ಸುತ್ತಮುತ್ತ...

ವೀಡಿಯೋ: ಧಗಧಗನೆ ಹೊತ್ತಿ ಉರಿದ ಚಲಿಸುತ್ತಿದ್ದ ಕಾರು

8 months ago

ಬೆಂಗಳೂರು: ಚಲಿಸುತ್ತಿದ್ದ ಕಾರೊಂದು ಹೊತ್ತಿ ಉರಿದಿದ್ದು ಚಾಲಕ ಸೇರಿದಂತೆ ಮೂವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ನೆಲಮಂಗಲ ಸಮೀಪದ ಅಡಕಿಮಾರನಹಳ್ಳಿ ಬಳಿ ಶನಿವಾರ ರಾತ್ರಿ ನಡೆದಿದೆ. ತುಮಕೂರು ಜಿಲ್ಲೆ ತುರುವೇಕೆರೆಯಿಂದ ಬೆಂಗಳೂರಿಗೆ ಸ್ಕಾರ್ಪಿಯೋ ಕಾರು ಬರುತ್ತಿತ್ತು. ಬೆಂಗಳೂರಿನ ರಾಮಕೃಷ್ಣ ಎಂಬವರಿಗೆ ಸೇರಿದ ಕಾರು...

ಲಾರಿ-ಬೈಕ್ ನಡುವೆ ಡಿಕ್ಕಿ: ಅಪ್ಪಚ್ಚಿಯಾಯ್ತು ಬೈಕ್ ಹಿಂಬದಿ ಸವಾರನ ಅರ್ಧ ದೇಹ

8 months ago

ಬೆಂಗಳೂರು: ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಬಳಿಯ ಸೊಂಡೆಕೊಪ್ಪ ರಸ್ತೆಯ ಸರ್ಕಲ್ ಬಳಿ ನಡೆದಿದೆ. 35 ವರ್ಷದ ರಮೇಶ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ರಮೇಶ್ ಅವರ...

ಆನೇಕಲ್ ಪ್ರೇಮಿಗಳ ವೈರಲ್ ವಿಡಿಯೋ: ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದ ಆರೋಪಿ ಅರೆಸ್ಟ್

8 months ago

ಬೆಂಗಳೂರು: ಅಪ್ರಾಪ್ತೆಯನ್ನು ಕಿಪಡ್ ಮಾಡಿ, ತಮ್ಮ ಪ್ರೇಮಕ್ಕೆ ಪೊಲೀಸರು ಅಡ್ಡಿಪಡಿಸಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ವಿಡಿಯೋ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಸಕೋಟೆ ಪೊಲೀಸರು ಯಶ್ವಸಿಯಾಗಿದ್ದಾರೆ. ವೇಣು ಬಂಧಿತ ಆರೋಪಿ. ಮೂರು ದಿನಗಳ ಹಿಂದೆ ಅಪ್ರಾಪ್ತ ಯುವತಿಯನ್ನು ವೇಣು ಎಂಬಾತ ಅಪಹರಣ...

ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ- ಪ್ರಯಾಣಿಕರು ಸೇಫ್

8 months ago

ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನೆಲಮಂಗಲ ಪಟ್ಟಣದ ಸೊಂಡೇಕುಪ್ಪ ಬೈಪಾಸ್ ಬಳಿ ನಡೆದಿದೆ. ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಬಸ್‍ನಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ...

ಅಪ್ಪ-ಅಮ್ಮ ಹೊಡೀತಿದ್ದಾರೆ, ಬೇಗ ಬಾ ಎಂದ್ಲು ಯುವತಿ- ಮನೆಗೆ ಹೋದ ಪ್ರಿಯಕರ ಹೆಣವಾದ!

8 months ago

ಬೆಂಗಳೂರು: ಐದು ವರ್ಷ ಪ್ರೀತಿ ಮಾಡಿದ ಗೆಳತಿ ದಿಢೀರನೇ ಮೆಸಜ್ ಮಾಡಿ ಅಪ್ಪ ಅಮ್ಮ ಹೊಡೀತ್ತಿದ್ದಾರೆ. ಮನೆಗೆ ಬೇಗ ಬಾ ಎಂದು ಹೇಳಿದ್ದಳು. ಮೆಸೇಜ್ ನೋಡಿ ಗೆಳತಿಯ ಮನೆಗೆ ಹೋದ ಯುವಕ ಸಾವನ್ನಪ್ಪಿದ್ದಾರೆ. ನಗರದ ಹೊರವಲಯದ ಅವಲಹಳ್ಳಿ ನಿವಾಸಿ ಮೋಹನ್ ರಾಜ್...