Friday, 27th April 2018

Recent News

1 year ago

ಎಟಿಎಂ ಹಲ್ಲೆಕೋರ ಬೆಂಗ್ಳೂರಿಗೆ: ಫೆ.28ರಿಂದ 15ದಿನ ವಿಚಾರಣೆ

ಬೆಂಗಳೂರು: ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರೋಪಿ ಮಧುಕರ್ ರೆಡ್ಡಿಯನ್ನು ಶೀಘ್ರವೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಫೆಬ್ರವರಿ 28ರಿಂದ 15 ದಿನಗಳ ಕಾಲ ಆರೋಪಿ ಮಧುಕರ್ ರೆಡ್ಡಿ ವಿಚಾರಣೆಗಾಗಿ ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಲು ಮದನಪಲ್ಲಿ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಎಟಿಎಂ ಹಲ್ಲೆಕೋರನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಇದೀಗ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಫೆಬ್ರವರಿ 4 ರಂದು ಮದನಪಲ್ಲಿಯಲ್ಲಿ […]

1 year ago

ಪುತ್ರನಿಗಾಗಿ ಶಿಕಾರಿಪುರ ಕ್ಷೇತ್ರ ತ್ಯಾಗಕ್ಕೆ ರೆಡಿಯಾದ ಬಿಎಸ್‍ವೈ!

-ಮಾಜಿ ಸಚಿವ ಕುಮಾರ್ ಬಂಗಾರಪ್ಪಗೆ ಬಿಜೆಪಿಯಿಂದ ಎಂಪಿ ಟಿಕೆಟ್..? ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ ತಮ್ಮ ಸ್ವಕ್ಷೇತ್ರವಾದ ಶಿಕಾರಿಪುರವನ್ನು ಮಗ ಬಿ.ವೈ. ರಾಘವೇಂದ್ರ ಅವರಿಗೆ ಬಿಟ್ಟು ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಬಿಎಸ್‍ವೈ ತಾವು ಮುಂದಿನ ಚುನಾವಣೆಗಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಅಥವಾ ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದತ್ತ...

ರಾಜಾರೋಷವಾಗಿ ಓಡಾಡುತ್ತಿರುವ ವ್ಯಕ್ತಿ ಬೆಂಗಳೂರು ಪೊಲೀಸರಿಗೆ ನಾಪತ್ತೆಯಾಗಿರುವ ಆರೋಪಿ!

1 year ago

ಬೆಂಗಳೂರು: ಆರಂಭದಲ್ಲಿ ದೂರು ಸ್ವೀಕರಿಸಲು ಹಿಂದೇಟು. ಬಳಿಕ ಸಾಕಷ್ಟು ಹೋರಾಟ ಬಳಿಕ ದೂರು ದಾಖಲು. ವ್ಯಕ್ತಿ ರಾಜರೋಷವಾಗಿ ಓಡಾಡುತ್ತಿದ್ದರೂ ಅಂತಿಮವಾಗಿ ಚಾರ್ಜ್ ಶೀಟ್ ಸಲ್ಲಿಕೆಯ ವೇಳೆ ಆರೋಪಿ ನಾಪತ್ತೆ ಎಂದು ಉಲ್ಲೇಖ. ಇದು ಬೆಂಗಳೂರು ಜನತೆ ರಕ್ಷಣೆ ನೀಡುತ್ತಿರುವ ಪೊಲೀಸರ ಕಾರ್ಯವೈಖರಿ....

ವೀಡಿಯೋ: ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕೆಎಸ್‍ಆರ್‍ಟಿಸಿ ಬಸ್- ಮಹಿಳೆ ಸಜೀವ ದಹನ!

1 year ago

ಬೆಂಗಳೂರು: ಚಲಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡು ನಡುರಾತ್ರಿ ಧಗಧಗಿಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ಬಳಿ ನಡೆದಿದೆ. ಬಸ್ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಈ ದುರಂತದಲ್ಲಿ 58 ವರ್ಷದ ಭಾಗ್ಯಮ್ಮ ಎಂಬ ಮಹಿಳೆ ಸಜೀವ ದಹನವಾಗಿದ್ದಾರೆ. ಅವಘಡದಲ್ಲಿ...

ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ- ಎಟಿಎಂ ಹಂತಕ ಬಿಚ್ಚಿಟ್ಟ ಭಯಾನಕ ಸತ್ಯ

1 year ago

ಬೆಂಗಳೂರು: ಬೆಂಗಳೂರಿನ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ನಲ್ಲಿ ಹಣಕ್ಕಾಗಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಆರೋಪಿ ಮಧುಕರ್ ಪೊಲೀಸ್ ವಶದಲ್ಲಿದ್ದು, ಇದೀಗ ಭಯಾನಕ ಮಾಹಿತಿಯೊಂದನ್ನ ಹೊರಹಾಕಿದ್ದಾನೆ. `ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಅಂತಾ...

ಬೆಂಗ್ಳೂರು ವಿವಿ ಕುಲಪತಿ ಹುದ್ದೆಗೆ ಭಾರೀ ಡಿಮ್ಯಾಂಡ್- 150 ಆಕಾಂಕ್ಷಿಗಳಿಂದ ಅರ್ಜಿ

1 year ago

-ಶ್ರೀನಿವಾಸ್ ರಾವ್ ದಳವೆ ಬೆಂಗಳೂರು: ವಿಶ್ವ ವಿದ್ಯಾಲಯದ ಕುಲಪತಿ ಪೋಸ್ಟ್ ಗೆ ಭಾರೀ ಡಿಮ್ಯಾಂಡ್ ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿಸಿ ಪೋಸ್ಟ್ ಗೆ ಯಾವ ಸಿಎಂ ಪೋಸ್ಟ್ ಗಿಂತಲೂ ಕಡಿಮೆ ಇಲ್ಲ ಅನ್ನುವಷ್ಟು ಮಟ್ಟಿಗೆ ಡಿಮ್ಯಾಂಡ್. ಕುಲಪತಿಯಾಗಿದ್ದ ಪ್ರೊ.ತಿಮ್ಮೇಗೌಡರ ಅವಧಿ ಫೆಬ್ರವರಿ...

ಬೇಸಿಗೆಯಲ್ಲಿ ಕರೆಂಟ್ ಶಾಕ್: ವಿದ್ಯುತ್ ಕಂಪೆನಿಗಳ ಪ್ರಸ್ತಾವನೆಯಲ್ಲಿ ಇಷ್ಟು ರೇಟ್ ಹೆಚ್ಚು ಮಾಡಬೇಕಂತೆ!

1 year ago

ಬೆಂಗಳೂರು: ಬೇಸಿಗೆಯಲ್ಲಿ ವಿದ್ಯುತ್ ದರ ಏರಿಸಲು ಸರ್ಕಾರ ಮುಂದಾಗಿದೆ. ಅದರಲ್ಲೂ ಇಂಧನ ಸಚಿವ ಡಿಕೆ ಶಿವಕುಮಾರ್ ಅವರೇ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ. 5 ವಿದ್ಯುತ್ ಸರಬರಾಜು ಕಂಪೆನಿಗಳಿಂದ ಪ್ರಸ್ತಾವನೆ ಬಂದಿದ್ದು, ಪ್ರತಿ ಯೂನಿಟ್‍ಗೆ 1 ರೂಪಾಯಿ 48...

ಬೆಂಗಳೂರಿನಲ್ಲಿ 3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

1 year ago

ಬೆಂಗಳೂರು: ಮೂರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿ ನರ್ಸರಿ ಶಾಲೆಯ ಸಿಬ್ಬಂದಿ  ಒಬ್ಬನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಅಲಿಯಾಸ್ ಮಂಜ ಬಂಧಿತ ಆರೋಪಿ. ಪ್ರಾಂಶುಪಾಲೆ ನಿರ್ಲಕ್ಷ್ಯ ವಿರುದ್ಧ ಪೋಷಕರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈಗ ಶಾಲೆಯ...