Tuesday, 19th June 2018

Recent News

18 hours ago

ಮೊಬೈಲ್ ಪ್ರಿಯರೇ ಗಮನಿಸಿ- ಇಂದು ಕ್ಸಿಯೋಮಿ ವೈ2 2ನೇ ಫ್ಲಾಶ್ ಸೇಲ್!

ಬೆಂಗಳೂರು: ಕಡಿಮೆ ಬೆಲೆ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಹಿಂದಿಕ್ಕಿರುವ ಕ್ಸಿಯೋಮಿ ಕಂಪೆನಿಯ ವೈ2 ಫ್ಲಾಶ್ ಸೇಲ್ ಇಂದು ನಡೆಯಲಿದೆ. ಜೂನ್ 7 ರಂದು ಬಿಡುಗಡೆಗೊಂಡು ತನ್ನ ಮೊದಲ ಫ್ಲಾಶ್ ಸೇಲ್ ನಲ್ಲೇ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಇಂದು ಪುನಃ 12 ಗಂಟೆಗೆ ಫೋನಿನ ಎರಡನೇ ಫ್ಲಾಶ್ ಸೇಲ್ ಅನ್ನು ಎಂಐ ತಾಣ ಮತ್ತು ಅಮೇಜಾನ್ ಶಾಪಿಂಗ್ ತಾಣದಲ್ಲಿ ನಡೆಸಲಾಗುತ್ತಿದೆ. ರೆಡ್‍ಮೀ ವೈ2 ಫೋನ್ ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 16ಎಂಪಿ […]

19 hours ago

ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು ಇದೀಗ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತನ್ನ ಬಳಿ ಬರಬೇಡಿ ಅಂತ ವಾಪಸ್ ಕಳುಹಿಸಿದ ಪ್ರಸಂಗವೊಂದು ನಡೆದಿದೆ. ಪ್ಲೀಸ್ ನನ್ನ ಹತ್ರ ಬರಬೇಡಿ, ನಾನು ಫೈಲ್ ನೋಡಲ್ಲ. ನೀವು ಅವರ ಹತ್ರನೇ ಹೋಗಿ ಪ್ಲೀಸ್, ಅವರಿಗೆ ಹೇಳಿ. ಹೀಗೆ ಐಎಎಸ್ ಅಧಿಕಾರಿಗಳಿಗೆ ಪ್ಲೀಸ್ ಎಂದು ಹೇಳಿ...

ಶಾಸಕರ ಭವನದಲ್ಲಿ ಶಿಸ್ತು ಕಾಪಾಡಲು ಸ್ಪೀಕರ್ ಖಡಕ್ ವಾರ್ನಿಂಗ್ – ಹೊಸ ನಿಯಾಮಾವಳಿ ಜಾರಿ

1 day ago

ಬೆಂಗಳೂರು: ಶಾಸಕರ ಖಾಸಗಿತನ ಹಾಗೂ ಶಾಸಕರ ಭವನದ ದುರ್ಬಳಕೆ ತಡೆಯಲು ಸ್ಪೀಕರ್ ರಮೇಶ್ ಕುಮಾರ್ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, ಶಾಸಕರ ಭವನದ ಭೇಟಿಯ ಸಮಯವನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ...

ಹೊಸ ಬಜೆಟ್ ಮಂಡನೆಗೆ ರಾಹುಲ್ ವಿರೋಧವಿಲ್ಲ: ಎಚ್‍ಡಿಕೆ

1 day ago

ನವದೆಹಲಿ: ಹೊಸ ಸರ್ಕಾರ ಬಂದಾಗ ಹೊಸ ಬಜೆಟ್ ಮಂಡಿಸುವುದು ವಾಡಿಕೆ. ಹೊಸ ಬಜೆಟ್ ಮಂಡನೆ ಮಾಡಲು ಎಐಸಿಸಿ ರಾಹುಲ್ ಗಾಂಧಿ ಅವರ ವಿರೋಧ ಇಲ್ಲ ಎಂದು ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಸುದ್ದಿಗೋಷ್ಠಿ ನಡೆಸಿ...

ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿ ಭೇಟಿ – ಸಾಲಮನ್ನಾ, ಕಾವೇರಿ ಪ್ರಾಧಿಕಾರ ರಚನೆ ಬಗ್ಗೆ ಚರ್ಚೆ

1 day ago

ನವದೆಹಲಿ: ಬ್ಯಾಂಕ್ ಪರಿಸ್ಥಿತಿ ಉತ್ತಮ ಪಡಿಸಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂ. ಹಣವನ್ನು ಬಾಂಡ್ ಮೂಲಕ ಪಡೆಯುವ ನಿರ್ಧಾರ ಮಾಡಿದೆ. ಈ ಹಣದಲ್ಲಿ ರೈತರ ಸಾಲಮನ್ನಾ ಮಾಡಲು ನೆರವು ನೀಡಲು ಕೇಂದ್ರಕ್ಕೆ ಮನವಿ ಮಾಡಿದ್ದಾಗಿ ಸಿಎಂ ಎಚ್‍ಡಿ ಕುಮಾರಸ್ವಾಮಿ...

ಅಪ್ಪನಿಗಾಗಿ ಕಾದು ಕಾದು ಕೊನೆಗೆ ಪ್ರಮಾಣ ವಚನ ಸ್ವೀಕರಿಸಿದ ಸೌಮ್ಯಾ ರೆಡ್ಡಿ!

1 day ago

ಬೆಂಗಳೂರು: ಜಯನಗರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಶಾಸಕಿ ಸೌಮ್ಯಾರೆಡ್ಡಿಯವರು ತಂದೆಯ ಆಗಮನಕ್ಕಾಗಿ 40 ನಿಮಿಷ ಕಾದು ಕಾದು ಕೊನೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರ ಸಂಜೆ 4 ಗಂಟೆಯ ವೇಳೆಗೆ ಸ್ಪೀಕರ್ ಕಚೇರಿಯಲ್ಲಿ ನೂತನ ಶಾಸಕಿ ಸೌಮ್ಯಾರೆಡ್ಡಿಯವರ ಪ್ರಮಾಣ ವಚನ ಕಾರ್ಯಕ್ರಮವನ್ನು...

ಕಾಂಗ್ರೆಸ್‍ನಲ್ಲಿ ಮುಂದುವರಿದ `ಸೇವೆ’ ಸಮರ!

1 day ago

ಬೆಂಗಳೂರು: ಮಂತ್ರಿ ಸ್ಥಾನ ಹಂಚಿಕೆಯಾದ ದಿನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾರ ನಡುವಿನ `ಸೇವೆ’ ಸಮರ ದಿನೇ ದಿನೇ ಹೆಚ್ಚುತ್ತಿದ್ದು ಇಂದು ಮಂದುವರಿದಿದೆ. ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎನ್ನುವುದು ಜಗತ್ತಿಗೆ ಗೊತ್ತಿರುವ ವಿಚಾರ. ನಾನು...

ನಾನು ಯಾರ ಫೋನ್ ರಿಸೀವ್ ಮಾಡಲ್ಲ, ನನಗೆ ರೆಸ್ಟ್ ಮುಖ್ಯ: ಮಾಜಿ ಸಿಎಂ ಸಿದ್ದರಾಮಯ್ಯ ನೋ ರಿಯಾಕ್ಷನ್

2 days ago

ಬೆಂಗಳೂರು: ಆರೋಗ್ಯ ಚೇತರಿಕೆ ದೃಷ್ಟಿಯಿಂದ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷದ ಸಮನ್ವಯ ಸಮಿತಿಯ ಅಧ್ಯಕ್ಷರು ಆಗಿರುವ ಸಿದ್ದರಾಮಯ್ಯ ಅವರು ಸದ್ಯ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ...