Thursday, 21st June 2018

3 weeks ago

ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ : ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ

ಬಳ್ಳಾರಿ: 2 ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಕೊಟ್ಟೂರು ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಸಾಸಲವಾಡದ ಶಶಿಧರ್(30) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಇನ್ನೂ ಕೊಟ್ಟೂರು ತಾಲೂಕಿನ ಲೊಟ್ಟನಕೆರೆ ನಿವಾಸಿಗಳಾದ ನಾಗರಾಜ್ (22) ಎಂಬವರ ಕಾಲು ಮುರಿದಿದ್ದು, ಹಿಂಬದಿ ಸವಾರ ಮೂಗಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆ ಮಧ್ಯದಲ್ಲಿಯೇ ಬಿದ್ದಿದ್ದ ಅವರನ್ನು ಸ್ಥಳೀಯ ನಿವಾಸಿಗಳು 108 ಅಂಬುಲೆನ್ಸ್ ಗೆ ಕರೆ ಮಾಡಿ ದಾವಣಗೆರೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಪಟ್ಟಣದ […]

3 weeks ago

ರಾತ್ರಿಯಿಡೀ ಬಾಣಂತಿಯರು, ಪೋಷಕರು ಆಸ್ಪತ್ರೆಯ ಆವರಣದಲ್ಲೇ ಕಾಲ ಕಳೆದ್ರು!

ಬಳ್ಳಾರಿ: ಸರ್ಕಾರಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ರಾತ್ರಿಯಿಡೀ ಬಾಣಂತಿಯರು ಹಾಗೂ ಪೋಷಕರು ಆಸ್ಪತ್ರೆಯ ಆವರಣದಲ್ಲೆ ಕಾಲ ಕಳೆದ ಘಟನೆಯೊಂದು ಬಳ್ಲಾರಿಯಲ್ಲಿ ನಡೆದಿದೆ. ಜಿಲ್ಲೆಯ ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ರಾತ್ರಿ ಹೆರಿಗೆ ಹಾಗೂ ಮಕ್ಕಳ ಕೋಣೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಫ್ಯಾನ್ ನಲ್ಲಿ ವಿದ್ಯುತ್ ಕಿಡಿಗಳು ಹೊತ್ತುತ್ತಿದ್ದಂತೆಯೇ ಗಾಬರಿಗೊಂಡು...

`ಕೈ’ ಪಾಳಯದಲ್ಲಿ ಮುಂದುವರಿದ ಲಾಬಿ- ಬಳ್ಳಾರಿಯ ಶಾಸಕರಿಂದ ಮಂತ್ರಿಗಿರಿಗೆ ಒತ್ತಡ

4 weeks ago

ಬಳ್ಳಾರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡರೂ  ಬಳ್ಳಾರಿಯಲ್ಲಿ ಮಾತ್ರ 6 ಮಂದಿ ಶಾಸಕರು ಗೆದ್ದಿದ್ದಾರೆ. ಬಳ್ಳಾರಿ ಗ್ರಾಮಾಂತರದಿಂದ ನಾಗೇಂದ್ರ, ವಿಜಯನಗರದಿಂದ ಆನಂದಸಿಂಗ್, ಸಂಡೂರಿನ ಗೆದ್ದಿರುವ ತುಕಾರಾಂ ಸತತ 3 ಬಾರಿ ಗೆದ್ದು ಹ್ರಾಟ್ರಿಕ್ ಸಾಧನೆ ಮಾಡಿದ್ದು, ಸಚಿವ...

ಮಳೆಯಿಂದಾಗಿ ನೆಲ ಕಚ್ಚಿದ ಮಾವು, ಟೊಮೆಟೋ, ಬಾಳೆ- ಸುಮಾರು 3.82 ಕೋಟಿ ಬೆಳೆ ನಷ್ಟ

4 weeks ago

ಬಳ್ಳಾರಿ/ಕೋಲಾರ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿತ್ತು. ಪರಿಣಾಮ ಸಾಕಷ್ಟು ಅನಾಹುತ ಸೃಷ್ಠಿಯಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ನೂರಾರು ಟನ್ ಮಾವು ಹಾಗೂ ಟೊಮೆಟೋ ಬೆಳೆ ನೆಲ ಕಚ್ಚಿದೆ. ಸುಮಾರು 440...

ತೃತೀಯ ರಂಗದ ಒಗ್ಗಟ್ಟು ಮಳೆಗಾಲದ ಅಣಬೆಗಳು ಇದ್ದಂತೆ: ಶ್ರೀರಾಮುಲು

4 weeks ago

ಬಳ್ಳಾರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೋದಿಯವರನ್ನು ಸೋಲಿಸಲು ತೃತೀಯ ರಂಗ ಒಂದಾಗಿದೆ ಎಂದು ಬಳ್ಳಾರಿ ಶಾಸಕ ಬಿ. ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭದಲ್ಲಿ ಬಹಳಷ್ಟು ಮಾಜಿ ಮುಖ್ಯಮಂತ್ರಿಗಳು,...

ಕಾಂಗ್ರೆಸ್‍ನವರನ್ನು ನಾವು ನಿದ್ದೆ ಮಾಡೋಕೆ ಬಿಡಲ್ಲ: ಶ್ರೀರಾಮಲು

1 month ago

ಬಳ್ಳಾರಿ: ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್ ಜೆಡಿಎಸ್ ಅಂದುಕೊಂಡಿರಬಹುದು. ಆದರೆ ಕಾಂಗ್ರೆಸ್‍ನವರನ್ನು ನಾವೂ ನಿದ್ದೆ ಮಾಡೋಕೆ ಬಿಡೋದಿಲ್ಲ, ಕಾಂಗ್ರೆಸ್ ಅಕ್ರಮ ಅವ್ಯವಹಾರಗಳನ್ನು ಜನರ ಮುಂದಿಡುತ್ತೇವೆ. ಕಾಂಗ್ರೆಸ್ ನವರನ್ನು ದಿನದ 24 ಗಂಟೆ ಕಾಲ ಕಾಯುತ್ತೇವೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿಯಲ್ಲಿಂದು...

ವೀರಶೈವ ಸಮಾಜದ ವ್ಯಕ್ತಿ ಸಿಎಂ ಆಗುವುದನ್ನು ತಪ್ಪಿಸಿದ್ದಕ್ಕೆ ರಂಭಾಪುರಿ ಶ್ರೀ ಆಕ್ರೋಶ

1 month ago

ಬಳ್ಳಾರಿ: ಒಬ್ಬ ವೀರಶೈವದ ವ್ಯಕ್ತಿ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿರುವುದನ್ನು ರಾಜ್ಯದ ಜನ ಖಂಡಿಸುತ್ತಾರೆ. ಕಾಂಗ್ರೆಸ್ – ಜೆಡಿಎಸ್ ಪಕ್ಷಗಳದ್ದು ಅಪವಿತ್ರ ಮೈತ್ರಿಯಾಗಿದೆ ಎಂದು ರಂಭಾಪುರಿ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ನಗರದಲ್ಲಿ ನಡೆದ ಪಂಡಿತ ಪುಟ್ಟರಾಜ ಗವಾಯಿಗಳ ಪ್ರಶಸ್ತಿ ಪ್ರಧಾನ ಸಮಾರಂಭದ...

ನನ್ನ ಬೆಂಬಲ ಕಾಂಗ್ರೆಸ್ಸಿಗೇ ಹೊರತು ಬಿಜೆಪಿಗಲ್ಲ- ಆನಂದ್ ಸಿಂಗ್ ಬೆಂಬಲಿಗರಿಂದ ಫೇಸ್ ಬುಕ್ ಪೋಸ್ಟ್

1 month ago

ಬಳ್ಳಾರಿ: ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಳ್ಳದೇ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಹೊಸಪೇಟೆ ಶಾಸಕ ಆನಂದ್ ಸಿಂಗ್ ಮತ್ತು ರಾಜ್ಯಪಾಲರಿಗೆ ಸಲ್ಲಿಸಲಾದ ಪತ್ರಕ್ಕೆ ಸಹಿ ಹಾಕಿದ ಬಳಿಕ ನಾಪತ್ತೆಯಾದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಇಂದು ಸದನಕ್ಕೆ ಆಗಮಿಸುತ್ತಾರಾ? ಆಗಮಿಸಿದರೆ ಯಾರ...