Saturday, 24th February 2018

Recent News

9 months ago

ಲಾರಿ ಪಲ್ಟಿ: ರಾತ್ರಿ ಬೆಳಗಾಗೋದ್ರೊಳಗೆ ಅಕ್ಕಿ ಚೀಲ ಹೊತ್ತೊಯ್ದ ಗ್ರಾಮಸ್ಥರು!

ಬೆಳಗಾವಿ: ಅಕ್ಕಿ ಚೀಲ ಹೊತ್ತೊಯ್ಯುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುಂಡೊಳ್ಳಿ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ. ಸುಮಾರು 695 ಅಕ್ಕಿ ಚೀಲಗಳನ್ನು ತುಂಬಿದ್ದ ಲಾರಿ ಸೇತುವೆ ಬಳಿಯಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿ ಪಲ್ಟಿಯಾಗಿದೆ. ಘಟನೆಯ ನಂತರ ಲಾರಿ ಚಾಲಕ ಪಾರಾಗಿದ್ದಾನೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸುತ್ತಮುತ್ತಲನ ಗ್ರಾಮಸ್ಥರು ರಾತ್ರಿ ಬೆಳಗಾಗುವಷ್ಟರಲ್ಲಿ ಒಂದು ಅಕ್ಕಿ ಚೀಲವನ್ನೂ ಬಿಡದೆ ಹೊತ್ತೊಯ್ದಿದ್ದಾರೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

9 months ago

ವಿಶೇಷಚೇತನ ಮಕ್ಕಳಿಗೆ ಅನ್ನಭಾಗ್ಯದ ಜೊತೆ ಉಚಿತ ಅಕ್ಷರ ದಾಸೋಹ ನೀಡ್ತಿರೋ ಬೆಳಗಾವಿಯ ಶಾಂತಾ ಶಿಂಧೆ

ಬೆಳಗಾವಿ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ರೆ ತಿರಸ್ಕಾರ ಮಾಡೋ ಜನ ಇನ್ನೂ ನಮ್ಮ ನಡುವೆ ಇದ್ದಾರೆ. ಅವರನ್ನ ಆಶ್ರಮಕ್ಕೋ ಅಥವಾ ವಿಶೇಷ ಶಾಲೆಗೆ ಸೇರಿಸೋ ಜನರಿದ್ದಾರೆ. ಆದರೆ ನಮ್ಮ ಹೀರೋ ಇಂತ ಬುದ್ಧಿಮಾಂದ್ಯ ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ. ಹೆತ್ತ ತಾಯಿಯಂತೆ ಸಾಕಿ ಸಲಹುತ್ತಿದ್ದಾರೆ. ಹೌದು. ಬುದ್ಧಿಮಾಂದ್ಯ ಮಕ್ಕಳನ್ನು ಹೆತ್ತ ತಾಯಿಯಂತೆ ಪೋಷಣೆ ಮಾಡುತ್ತಿರುವ ಮಹಿಳೆಯ ಹೆಸರು ಶಾಂತಾ...

ಕರ್ನಾಟಕ ಸರ್ಕಾರವನ್ನು ತಲೆ ಕೆಳಗೆ ಕಾಲು ಮೇಲೆ ಮಾಡ್ತೀವಿ: ಕೊಲ್ಲಾಪುರದಲ್ಲಿ ಶಿವಸೇನೆಯಿಂದ ಧಮ್ಕಿ

9 months ago

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ಕರ್ನಾಟಕ ಸಾರಿಗೆ ಬಸ್‍ಗಳನ್ನ ತಡೆದು ಮಹಾರಾಷ್ಟ್ರ ಎಂದು ನಾಮಫಲಕ ಹಾಕಿ ಚಾಲಕರಿಗೆ ಧಮ್ಕಿ ಹಾಕಿದ್ದಾರೆ. ಈ ಘಟನೆಯಿಂದ ಬೆಳಗಾವಿ ಮಹಾರಾಷ್ಟ್ರ ಸಂಚಾರ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಹಾರಾಷ್ಟ್ರ ಪೊಲೀಸರ ಎದುರೇ ಶಿವಸೇನಾ ಕಾರ್ಯಕರ್ತರು ಪ್ರತಿಭಟನೆ...

ಬಾರ್‍ಗೆ ನುಗ್ಗಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಕುಡಚಿ ಪಿಎಸ್‍ಐಗೆ ಕ್ಲೀನ್ ಚೀಟ್

9 months ago

ಬೆಳಗಾವಿ: ಬಾರ್‍ಗೆ ನುಗ್ಗಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಜಿಲ್ಲೆಯ ಕುಡಚಿ ಠಾಣೆಯ ಪಿಎಸ್‍ಐ ಶಿವಶಂಕರ ಮುಕ್ರಿ ಅವರಿಗೆ ಇಲಾಖೆಯ ವಿಚಾರಣೆಯಲ್ಲಿ ಕ್ಲೀನ್ ಚೀಟ್ ನೀಡಲಾಗಿದೆ. ಕುಡಚಿ ಪೊಲೀಸ್ ಠಾಣೆ ಪಿಎಸ್‍ಐ ಶಿವಶಂಕರ ಮುಕರಿ ಮಾರ್ಚ್ 13 ರಂದು ಕುಡಚಿ ಪಟ್ಟಣದ ಶಿವಶಕ್ತಿ...

ಅಕ್ರಮವಾಗಿ ವಲಸೆ ಬಂದ ಬಾಂಗ್ಲಾ ಪ್ರಜೆಗಳಿಗೂ ಸಿಗುತ್ತೆ ಆಧಾರ್ ಕಾರ್ಡ್, 2200 ರೂ. ಕೊಟ್ರೆ ಪಾಸ್‍ಪೋರ್ಟ್

10 months ago

ಬೆಳಗಾವಿ: ಆಧಾರ್ ಕಾರ್ಡ್, ಪಾಸ್‍ಪೋರ್ಟ್, ವೋಟರ್ ಐಡಿ ಇವೆಲ್ಲ ನಮ್ಮ ಅಧಿಕೃತ ಗುರುತಿನ ದಾಖಲೆಗಳು. ನಾವು ಭಾರತೀಯರು ಅನ್ನೋದನ್ನು ಖಾತ್ರಿಪಡಿಸುವುದಕ್ಕೆ ಇರೋ ದಾಖಲೆಗಳು. ಆದ್ರೆ ಗಡಿ ನಾಡು ಬೆಳಗಾವಿಯಲ್ಲಿ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದಿರುವ ಮಂದಿಗೆಲ್ಲಾ ಆಧಾರ್ ಕಾರ್ಡ್, ಪಾಸ್‍ಪೋರ್ಟ್, ವೋಟರ್...

ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ಒಂದು ವಿಷದ ಇಂಜೆಕ್ಷನ್ ಕೊಡಿಸಿ: ಬೆಳಗಾವಿಯ ಹಿರಿಯಜ್ಜಿಯ ಮೊರೆ

10 months ago

ಬೆಳಗಾವಿ: ನನಗೆ ಯಾರೂ ಇಲ್ಲ, ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ನಿಮ್ಮ ಕಾಲಿಗೆ ಬೀಳ್ತಿನಿ, ಒಂದು ವಿಷದ ಇಂಜೆಕ್ಷನ್ ಕೊಡಿಸಿ. ಹೀಗೆ ಕಣ್ಣೀರಿಡುತ್ತಾ ವಿನಂತಿ ಮಾಡ್ತಿರೋ ಈ ಹಿರಿಯಜ್ಜಿಯ ಹೆಸ್ರು ಚನ್ನವ್ವ. ಬೆಳಗಾವಿಯ ವಕ್ಕುಂದ ಗ್ರಾಮದಾಕೆ. ಎಲ್ಲವೂ ಸರಿಯಾಗಿದ್ದರೆ ಚನ್ನವ್ವ,...

ಮೀಡಿಯಾ ಗ್ರೂಪ್‍ನಲ್ಲಿ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟ ಬಿಜೆಪಿ ಎಂಎಲ್‍ಸಿ ಮಹಾಂತೇಶ ಕವಟಗಿಮಠ

10 months ago

ಬೆಳಗಾವಿ: ಬಿಜೆಪಿ ಎಂಎಲ್‍ಸಿ ಮಹಾಂತೇಶ ಕವಟಗಿಮಠ ಮಾಧ್ಯಮಗಳಿರುವ ವಾಟ್ಸಪ್ ಗ್ರೂಪಿಗೆ ಅಶ್ಲೀಲ ಫೋಟೋಗಳನ್ನು ಹಾಕಿದ್ದಾರೆ. ಇಂದು ಸಂಜೆ ಮಹಾಂತೇಶ ಕವಟಗಿಮಠ ಬೆಳಗಾವಿ ಮೀಡಿಯಾ ಫೋರ್ಸ್ ಗ್ರೂಪ್‍ನಲ್ಲಿ ಫೋಟೋ ಹಾಕಿ ಗ್ರೂಪಿನಲ್ಲಿರುವ ಸದಸ್ಯರಿಗೆ ಮುಜುಗರವನ್ನು ಉಂಟು ಮಾಡಿದ್ದಾರೆ. ಈ ಗ್ರೂಪಿನಲ್ಲಿ ರಾಜಕಾರಣಿಗಳು, ಮಾಧ್ಯಮದ ವ್ಯಕ್ತಿಗಳು,...

ಕುಡಿದ ಮತ್ತಿನಲ್ಲಿ ಸಿಬ್ಬಂದಿಯೊಂದಿಗೆ ಜಗಳ- ಕಲ್ಲುತೂರಾಟಕ್ಕೆ ಬಾರ್ ಪುಡಿ-ಪುಡಿ

10 months ago

ಬೆಳಗಾವಿ: ಕುಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಾರ್ ಮಾಲೀಕ ಹಾಗೂ ಗ್ರಾಮಸ್ಥರ ನಡುವಿನ ಜಗಳ ತಾರಕಕ್ಕೇರಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದಿದೆ. ನಡೆದಿದ್ದೇನು?: ಐಎಸ್ ಇರಕಾರ ಮಾಲೀಕತ್ವದ ಬಾರ್ ಗೆ ಭಾನುವಾರ ರಾತ್ರಿ ತಲ್ಲೂರು ಗ್ರಾಮದ ನಾಲ್ವರು ಬಂದಿದ್ದು,...