Tuesday, 26th September 2017

3 months ago

ಸೀಮೆ ಎಣ್ಣೆ ಸುರಿದುಕೊಂಡು ಮಹಿಳೆ ಆತ್ಮಹತ್ಯೆ- ಬಣವೆ ಮೇಲೆ ಬಿದ್ದು ಸುಟ್ಟು ಕರಕಲಾದ ದೇಹ

ಬಾಗಲಕೋಟೆ: ಮಹಿಳೆಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ವಿದ್ಯಾಗಿರಿಯಲ್ಲಿ ನಡೆದಿದೆ. ವೀರಾಪೂರ ಮೂಲದ 41 ವರ್ಷದ ದಾಕ್ಷಾಯಣಿ ಪಾಟೀಲ ಆತ್ಮಹತ್ಯೆಗೆ ಶರಣಾದ ಮಹಿಳೆ. ಎಲ್ಲರೂ ಮಲಗಿದ್ದ ವೇಳೆ ದಾಕ್ಷಾಯಣಿ ಅವರು ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬಣವೆ ಮೇಲೆ ಬಿದ್ದ ಪರಿಣಾಮ ದೇಹ ಸುಟ್ಟು ಕರಕಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

3 months ago

ನಿಂತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ- ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು

ಬಾಗಲಕೋಟೆ: ನಿಂತ ಲಾರಿಗೆ ಹಿಂಬದಿಯಿಂದ ಮತ್ತೊಂದು ತರಕಾರಿ ಸಾಗಾಟ ಮಾಡುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಲಾರಿಯ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮೃತರನ್ನು ಆಂಧ್ರ ಮೂಲದವರಾದ ಕೆ ನರೇಶ್ (25) ಹಾಗೂ ರೆಡ್ಡಿ (22) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಬಾಗಲಕೋಟೆ ತಾಲೂಕಿನ...

ಬಾಗಲಕೋಟೆ: ಅಕ್ರಮ ಕಸಾಯಿಖಾನೆ ತೆರೆದು ಗೋವುಗಳ ಮಾರಣಹೋಮ

4 months ago

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಪಟ್ಟಣದ ಕಟಾಪೆ ಪ್ಲಾಟ್‍ನಲ್ಲಿ ಗೋಹತ್ಯೆ ನಡೆದಿರೋದು ಬೆಳಕಿಗೆ ನಡೆದಿದೆ. ಬೇಪಾರಿ ಜನಾಂಗದವರು ಅಕ್ರಮ ಕಸಾಯಿಖಾನೆ ತೆರೆದು ಗೋಹತ್ಯೆ ಮಾಡಿದ್ದಾರೆಂದು ಆರೋಪಗಳು ಕೇಳಿಬಂದಿವೆ. ಕಸಾಯಿಖಾನೆಯಲ್ಲಿ ಈಗಾಗಲೇ ಐದು ಗೋವು ಹಾಗು ಒಂದು ಎಮ್ಮೆ ಕೊಲ್ಲಲ್ಪಟ್ಟಿವೆ. ಕಸಾಯಿಖಾನೆಯಲ್ಲಿದ್ದ 19 ಆಕಳುಗಳನ್ನು...

ರೈತರ ಖಾತೆಗೆ 1 ರೂ. ಬೆಳೆ ಪರಿಹಾರ ಜಮೆ- 1 ಚಾಕ್ಲೆಟ್ ಕೂಡ ಬರಲ್ಲ ಎಂದು ಅನ್ನದಾತರ ಆಕ್ರೋಶ

4 months ago

ಧಾರವಾಡ/ಬಾಗಲಕೋಟೆ/ಮಂಡ್ಯ: ರೈತರಿಗೆ ಬೆಳೆ ಪರಿಹಾರವಾಗಿ ಸರ್ಕಾರ ಕೊಟ್ಟ ಹಣ ಎಷ್ಟು ಎಂದು ಕೇಳಿದ್ರೆ ನೀವು ನಗ್ತಿರ. ಹೌದು. ಧಾರವಾಡದ ಹಾರೋ ಬೆಳವಡಿ ಗ್ರಾಮದ ಮೂರು ರೈತರಿಗೆ ಸರ್ಕಾರ ಬರಗಾಲದಿಂದ ಹಾನಿಯಾದ ಬೆಳೆಗೆ ಪರಿಹಾರ ಕೊಟ್ಟಿದ್ದು ಕೇವಲ 1 ರೂ. ಗ್ರಾಮದ ಸಂಗನಗೌಡ,...

ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿಹೋದ ಕಾರು – ನಾಲ್ವರ ಸಾವು

4 months ago

– ಇಂದು ರಾಜ್ಯಕ್ಕೆ ಎಂಟ್ರಿ ಕೊಡಲಿದೆ ಮುಂಗಾರು ಬಾಗಲಕೋಟೆ: ಮುಂಗಾರು ಮಳೆ ಆರ್ಭಟ ಶುರುವಾಗುವ ಮೊದಲೇ ಮಳೆಗೆ ನಾಲ್ವರು ಸಾವನ್ನಪ್ಪಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅನವಾಲ್ ಗ್ರಾಮದ ಕೊಳ್ಳದಲ್ಲಿ ನಡೆದಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಕಾರು ಚಲಾಯಿಸಿದಾಗ ಕಾರು...

ಕಾರ್ ಪಲ್ಟಿ: ಮುಧೋಳ ಗವಿಮಠದ ಜಗದ್ಗುರು ಮೃತ್ಯುಂಜಯ ಸ್ವಾಮೀಜಿ ಲಿಂಗೈಕ್ಯ

4 months ago

ಬಾಗಲಕೋಟೆ: ಕಾರ್ ಪಲ್ಟಿಯಾಗಿ ಮುಧೋಳ ಗವಿಮಠದ ಜಗದ್ಗುರು ಮೃತ್ಯುಂಜಯ ಸ್ವಾಮೀಜಿ(65) ಲಿಂಗೈಕ್ಯರಾದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಸ್ವಾಮಿಜಿ ಹುಬ್ಬಳ್ಳಿಯಿಂದ ಗವಿಮಠಕ್ಕೆ ತೆರಳುವಾಗ ಮುಧೋಳ ಹಾಗೂ ಲೋಕಾಪುರ ಮಧ್ಯೆ ಚಾಲಕ ಅನ್ವೇಶ್ ನಿದ್ದೆಗೆ ಜಾರಿದ್ದ ಕಾರಣ ಕಾರು...

ವಿಡಿಯೋ: ಅಮ್ಮನನ್ನು ನೆನೆದು ಗಳಗಳನೆ ಅತ್ತ ಸಚಿವೆ ಉಮಾಶ್ರೀ

4 months ago

ಬಾಗಲಕೋಟೆ: ನಟಿ ಹಾಗು ಸಚಿವೆಯಾಗಿರುವ ಶ್ರೀಮತಿ ಉಮಾಶ್ರೀ ಅವರು ಪಾರ್ವತಮ್ಮ ರಾಜಕುಮಾರ್ ಅವರನ್ನು ನೆನೆದು ದುಃಖ ತಡೆಯಲಾರದೇ ಗಳಗಳನೇ ಕಣ್ಣೀರು ಹಾಕಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಉಮಾಶ್ರೀ ಅವರು, ಪಾರ್ವತಮ್ಮ ಅವರು ನನಗೆ ತಾಯಿಯಾಗಿ, ಅಕ್ಕಳಾಗಿ ಇದ್ದರು. ನಾನು ಶಾಸಕಿ,...

ಹೆಚ್‍ಡಿಕೆ ಬರೋವರೆಗೆ ಮದ್ವೆಯಾಗಲ್ಲವೆಂದು 2 ವರ್ಷದಿಂದ ಪಟ್ಟು- ಕೊನೆಗೂ ಆಸೆ ಈಡೇರಿಸಿಕೊಂಡ ವಿಕಲಚೇತನ ಅಭಿಮಾನಿ

4 months ago

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸುವವರೆಗೂ ಮದುವೆ ಆಗುವುದಿಲ್ಲ ಎಂದು ಪಟ್ಟು ಹಿಡಿದಿದ್ದ ವಿಕಲಚೇತನ ಅಭಿಮಾನಿಯೊಬ್ಬರು ಕೊನೆಗೂ ಹೆಚ್‍ಡಿಕೆ ಎದುರಲ್ಲಿ ಮದುವೆಯಾಗಿ ತನ್ನ ಆಸೆ ಈಡೇರಿಸಿಕೊಂಡ ವಿಶಿಷ್ಟ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಶ್ರೀಶೈಲ್ ಲಮಾಣಿ...