Tuesday, 23rd January 2018

Recent News

2 weeks ago

ಅಕ್ರಮ ತಿಳಿದು ಕಾರ್ಯಕ್ರಮದ ವೇದಿಕೆಯಿಂದಲೇ ಸ್ವಾಮೀಜಿಯನ್ನು ಹೊರಹಾಕಿದ ಜನ!

ಬಾಗಲಕೋಟೆ: ಸ್ವಾಮೀಜಿಯೊಬ್ಬನ ಅಕ್ರಮ ಚಟುವಟಿಕೆಯ ವಿಚಾರ ತಿಳಿದು ಆತನನ್ನು ಗ್ರಾಮಸ್ಥರೇ ವೇದಿಕೆಯಿಂದ ಹೊರಹಾಕಿದ ಘಟನೆ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದಲ್ಲಿ ನಡೆದಿದೆ. ಸೂಳಿಭಾವಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಸಲಾಗಿತ್ತು. ಶಾಲಾ ಸಿಬ್ಬಂದಿ ಘನಮಠೇಶ್ವರ ಸ್ವಾಮೀಜಿಯ ಹಿಂದಿನ ಅಕ್ರಮ ವಿಚಾರ ತಿಳಿಯದೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸುವಂತೆ ಕೇಳಿಕೊಂಡು ಆಹ್ವಾನ ನೀಡಿದ್ದರು. ಆಹ್ವಾನ ನೀಡಿದ ಬಳಿಕ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಮೀಣ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು ಸಮಿತಿ ಅಧ್ಯಕ್ಷರಾಗಿರುವ […]

2 weeks ago

ಲೋಕ ಕಲ್ಯಾಣಕ್ಕಾಗಿ ಅನ್ನ ಆಹಾರ ಬಿಟ್ಟು 24 ದಿನಗಳ ಕಾಲ ಜಪಕ್ಕೆ ಕುಳಿತ ಖಾವಿಧಾರಿ ಮಾತೆ!

ಬಾಗಲಕೋಟೆ: ಲೋಕ ಕಲ್ಯಾಣಾರ್ಥವಾಗಿ ಖಾವಿಧಾರಿ ಮಾತೆಯೊಬ್ಬರು ಇಲಕಲ್ ಪಟ್ಟಣದ ಹೊರವಲಯದಲ್ಲಿ ನಿರಂತರ 24 ದಿನಗಳ ಕಾಲ ಅನ್ನ ಆಹಾರ ಬಿಟ್ಟು ನಿರ್ಜನ ಪ್ರದೇಶದಲ್ಲಿ ಜಪಕ್ಕೆ ಕುಳಿತಿದ್ದಾರೆ. ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗುಗಳ್ ಗ್ರಾಮದ ಮಹಾದೇವಮ್ಮ ಇಲಕಲ್ ಪಟ್ಟಣಕ್ಕೆ ಬಂದ ವೇಳೆ ತಮ್ಮ ಇಚ್ಚಾನುಸಾರ ಭಕ್ತರನ್ನ ಸೇರಿಸಿ 24 ದಿನಗಳ ಕಾಲ ಉಪವಾಸ ವ್ರತವನ್ನು...

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ 16ರ ಮುಸ್ಲಿಂ ಬಾಲಕಿ

3 weeks ago

ಬಾಗಲಕೋಟೆ: ದೈಹಿಕ ಸಮಸ್ಯೆ ನೀಗಿಸಿಕೊಳ್ಳಲು ಆರಂಭಿಸಿದ ಯೋಗವೇ ಈಗ ಹದಿನಾರರ ಹರೆಯದ ಮುಸ್ಲಿಂ ಬಾಲಕಿಯನ್ನು ಇಡೀ ಊರೇ ಪ್ರಶಂಸಿಸುವಂತೆ ಮಾಡಿದೆ. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದ ಚಿನ್ನದ ಪದಕ ಪಡೆದು ಕೊಂಡಿದ್ದಾಳೆ. ಜಿಲ್ಲೆಯ...

ಬಾದಾಮಿ ಜಾತ್ರೆಗೆ ಪಾದಯಾತ್ರೆ ತೆರಳುತ್ತಿದ್ದಾಗ ಬೈಕ್ ಡಿಕ್ಕಿ: ಭಕ್ತ ಸಾವು

3 weeks ago

ಬಾಗಲಕೋಟೆ: ಬಾದಾಮಿ ಜಾತ್ರೆಗೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಭಕ್ತರೊಬ್ಬರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಹಲಕುರ್ಕಿ ಗ್ರಾಮದ ಬಳಿ ನಡೆದಿದೆ. ಕೆರೂರ ಪಟ್ಟಣದ ನಿವಾಸಿ ರಾಜು ಡೊಳ್ಳಿ(38) ಮೃತ ವ್ಯಕ್ತಿ. ರಾಜು ಸ್ನೇಹಿತರೊಂದಿಗೆ ಇಂದು ನಡೆಯಲಿರೋ ಬಾದಾಮಿಯ ಬನಶಂಕರಿ...

‘ನಮ್ಮ ಕಾಂಗ್ರೆಸ್’ ಪಕ್ಷದ ಉದ್ಘಾಟನಾ ಸಮಾರಂಭಕ್ಕೆ ಜನರನ್ನು ಸೆಳೆಯಲು ಯುವತಿಯರ ಆಂಧ್ರ ಸ್ಟೈಲ್ ಡಾನ್ಸ್

3 weeks ago

ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಇಂದು `ನಮ್ಮ ಕಾಂಗ್ರೆಸ್ ಪಕ್ಷ’ ಉದಯವಾಯಿತು. ಮಾಜಿ ಸಚಿವ ವರ್ತೂರು ಪ್ರಕಾಶ್ ಇಂದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಚಾಲನೆ ನೀಡಿದರು. ಆದರೆ ಜಿಲ್ಲೆಯ ಕೂಡಲಸಂಗಮದಲ್ಲಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭಕ್ಕೆ...

ಮೂತ್ರ ವಿಸರ್ಜನೆ ಜಾಗದಲ್ಲಿ ಹಿಂದೂ ದೇವರ ಪೋಸ್ಟರ್- ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟಕರಿಂದ ದಾಂಧಲೆ

3 weeks ago

ಬಾಗಲಕೋಟೆ: ಮೂತ್ರ ವಿಸರ್ಜನೆ ಜಾಗದಲ್ಲಿ ಹಿಂದೂ ದೇವರ ಪೋಸ್ಟರ್ ಗಳನ್ನು ಹಚ್ಚಿದ್ದ ಸಂಬಂಧ ನಡೆದ ಗಲಾಟೆಯ ಹಿನ್ನೆಲೆಯಲ್ಲಿ ಅಂಗಡಿಯೊಂದರ ಸಾಮಾನುಗಳನ್ನ ಧ್ವಂಸಗೊಳಿಸಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದಲ್ಲಿ ನಡೆದಿದೆ. ಪಟ್ಟಣದ ಹಳೇ ಮಾರ್ಕೆಟ್ ಬಳಿ ಇದ್ದ ರೋಷನ್ ಹೋಟೆಲ್‍ನಲ್ಲಿ...

ಕಿಕ್ ಬಾಕ್ಸರ್ ಆಗ್ಬೇಕೆಂಬ ಆಸೆ ಹೊತ್ತ ತಂಗಿಯರ ಶಿಕ್ಷಣಕ್ಕಾಗಿ ಸಹಾಯ ಹಸ್ತ ಚಾಚಿದ ಅಣ್ಣ

3 weeks ago

ಬಾಗಲಕೋಟೆ: ಅವರಿಬ್ಬರೂ ಪ್ರತಿಭಾವಂತ ಯುವತಿಯರು, ಅವರಿಗೆ ಇರಲಿಕ್ಕೆ ಒಂದು ಸ್ವಂತ ಮನೆಯೂ ಇಲ್ಲ. ಸದ್ಯ ಅಜ್ಜಿಯ ಮನೆಯಲ್ಲೇ ವಾಸಿಸ್ತಿರೋ ಆ ಯುವತಿಯರು, ಫೇಮಸ್ ಕಿಕ್ ಬಾಕ್ಸರ್ ಆಗಬೇಕು, ನಂತ್ರ ಒಳ್ಳೆಯ ಕೆಲಸ ಹಿಡಿದು ತಮ್ಮ ಬದುಕಿಗಾಗಿ ಜೀವನ ಸವೆಸುತ್ತಿರೋ ಅಣ್ಣ, ಅಜ್ಜಿಯನ್ನ...

ನಿಂತಿದ್ದ ಲಾರಿಗೆ ಕಾರು ಡಿಕ್ಕಿ- ನಿಶ್ಚಿತಾರ್ಥ ಮುಗಿಸಿ ಬರ್ತಿದ್ದ ಒಂದೇ ಕುಟುಂಬದ ನಾಲ್ವರು ದುರ್ಮರಣ

4 weeks ago

ಬಾಗಲಕೋಟೆ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಕಾರು ಚಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದಿದೆ. ಸೋಲಾಪುರ್- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಹುನಗುಂದ ಪಟ್ಟಣದ ಸಾಯಿ...