Saturday, 18th November 2017

Recent News

3 weeks ago

ಲಾರಿ, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ- ಬೈಕ್ ಸವಾರ ಸಜೀವ ದಹನ

ಹುಬ್ಬಳ್ಳಿ: ಲಾರಿ ಮತ್ತು ಬೈಕ್ ನಡುವೆ ಅಪಘಾತವಾಗಿ, ಅಪಘಾತದ ರಭಸಕ್ಕೆ ಬೆಂಕಿಹೊತ್ತಿಕೊಂಡು ಬೈಕ್ ಸವಾರ ಸಜೀವದಹನಗೊಂಡ ಘಟನೆ ಹುಬ್ಬಳ್ಳಿ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶದ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಿಂದ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ ಬೈಕ್ ನಲ್ಲಿದ್ದ ಮುಂಬದಿ ಸವಾರ ಸುಟ್ಟು ಕರಕಲಾದ್ರೆ, ಹಿಂಬದಿ ಸವಾರನಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಮೃತ ಬೈಕ್ ಸವಾರನ ಗುರುತು […]

3 weeks ago

ದಕ್ಷ, ಪ್ರಾಮಾಣಿಕ ಸರ್ಕಾರ ನೀಡುತ್ತೆನೆಂದು ರಕ್ತದಲ್ಲಿ ಬರೆದುಕೊಡ್ತೇನೆ: ಬಿಎಸ್‍ವೈ

ಧಾರವಾಡ: ಮುಂದಿನ ಚುನಾವಣೆಯಲ್ಲಿ ನಮ್ಮನ್ನ ಗೆಲ್ಲಿಸಿ ಆಡಳಿತಕ್ಕೆ ತಂದರೆ. ದಕ್ಷ ಹಾಗೂ ಪ್ರಾಮಾಣಿಕ ಸರ್ಕಾರ ನೀಡುತ್ತೇನೆ. ಇದನ್ನ ರಕ್ತದಲ್ಲಿ ಬರೆದುಕೊಡ್ತೆನೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು. ಧಾರವಾಡ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಣ್ಣಿದ್ದರೂ ಕುರುಡರಂತೆ ಮಾಡುತ್ತಿದೆ. ಮಹದಾಯಿ ನದಿ ಜೋಡಣೆಗಾಗಿ 15 ದಿನಗಳಲ್ಲಿ ಗೋವಾ ಹಾಗೂ ಪ್ರಧಾನಿ ಮೋದಿಗೆ...

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಸಾರ್ವಜನಿಕರಿಂದಲೇ ಧರ್ಮದೇಟು

4 weeks ago

ಧಾರವಾಡ: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರೇ ಧರ್ಮದೇಟು ನೀಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಗಣಿತ ಶಿಕ್ಷಕ ಗಂಡು ಮಕ್ಕಳನ್ನು ತರಗತಿಯಿಂದ ಹೊರಗೆ ಕಳುಹಿಸಿ, ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅಲ್ಲದೇ ತನ್ನ ಕೃತ್ಯವನ್ನು ಪೋಷಕರಿಗೆ...

ನಾವು ಮಾಡಿರೋ ಅಭಿವೃದ್ಧಿ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ: ಶೆಟ್ಟರ್‍ಗೆ ಸಿಎಂ ಸವಾಲ್

4 weeks ago

ಧಾರವಾಡ: ಕಾಂಗ್ರೆಸ್, ಬಿಜೆಪಿ ಸರ್ಕಾರದ ಅಭಿವೃದ್ಧಿ ಬಗ್ಗೆ ಒಂದೇ ವೇದಿಕೆ ಮೇಲೆ ಚರ್ಚೆ ಮಾಡಲು ಬರುತ್ತಿರಾ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಸಾಧನಾ ಸಮಾವೇಶದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ನಾನು...

ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ದೇವರು ಹೇಳಿಲ್ಲ: ಸಿಎಂ

4 weeks ago

ಧಾರವಾಡ: ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಭೇಟಿಗೆ ಮುನ್ನ ಮಾಂಸಾಹಾರ ಸೇವನೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಧಾರವಾಡದಲ್ಲಿ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇವರು ಮಾಂಸ ಆಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಿಲ್ಲ ಎಂದರು....

ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ ಸಿಬಿಐಗೆ ಒಪ್ಪಿಸಲಿ: ಪ್ರಹ್ಲಾದ ಜೋಶಿ

4 weeks ago

ಧಾರವಾಡ: ಸರ್ಕಾರ ತಪ್ಪು ಮಾಡಿಲ್ಲದೇ ಇದ್ದರೆ ತಕ್ಷಣವೇ ಕಲ್ಲಿದ್ದಲು ಹಗರಣವನ್ನು ಸಿಬಿಐಗೆ ಒಪ್ಪಿಸಲಿ ಎಂದು ಸಂಸದ ಪ್ರಹ್ಲಾದ ಜೋಶಿ ಸವಾಲು ಹಾಕಿದ್ದಾರೆ. ಯಡಿಯೂರಪ್ಪ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ ದಾಖಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ...

ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿ ಇಡೀ ಮನೆಯೇ ಹೊತ್ತಿ ಉರಿಯಿತು

4 weeks ago

ಧಾರವಾಡ: ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ನಗರದ ಉಣಕಲ್ ಕ್ರಾಸ್‍ನಲ್ಲಿ ನಡೆದಿದೆ. ಪ್ರವೀಣ್ ನವಲಗುಂದ ಎಂಬವರ ಮನೆಯಲ್ಲಿದ್ದ ಪಟಾಕಿ ಬಾಕ್ಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಪಟಾಕಿ ಸಿಡಿದ್ದಿದ್ದರಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಹೊತ್ತಿ...

ಸಿಎಂಗೆ ಇದು ಕೊನೆ ದೀಪಾವಳಿ ಎಂದು ಭವಿಷ್ಯ ನುಡಿದ ಸಂಸದ ಪ್ರಹ್ಲಾದ್ ಜೋಶಿ

4 weeks ago

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ಕೊನೆಯ ದೀಪಾವಳಿಯಾಗಲಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಭವಿಷ್ಯ ನುಡಿದಿದ್ದಾರೆ. ಮುಂದಿನ ಬಾರಿಯು ನಾನೇ ಸಿಎಂ ಎಂದು ಸಿಎಂ ಹೇಳಿಕೊಂಡು ತಿರುಗುತ್ತಿದ್ದಾರೆ. ಆದ್ರೆ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದು ಕಾಂಗ್ರೆಸ್ ಸರ್ಕಾರದ ಕೊನೆಯ ಆಡಳಿತಾವಧಿಯಾಗಲಿದೆ...