Monday, 18th June 2018

Recent News

2 weeks ago

4ರ ಬಾಲಕಿಯನ್ನ ರೇಪ್ ಮಾಡಿ, ಕೊಂದು ಡ್ರಮ್ ನಲ್ಲಿ ತುಂಬಿಸಿದ!

ಚಂಡೀಗಢ: ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಅಮಾನವೀಯ ಘಟನೆಯೊಂದು ಹರಿಯಾಣ ರಾಜ್ಯದ ಫರಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ರಾಜಧಾನಿ ನವದೆಹಲಿಯಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಫರಿದಾಬಾದ್ ಪಾಲ್ವಾಲ್ನ ಅಸೋತಿ ಗ್ರಾಮದಲ್ಲಿ ಘಟನೆ ಈ ನಡೆದಿದೆ. ಆರೋಪಿ 24 ವರ್ಷದ ಬಾಲು ಅಲಿಯಾಸ್ ವೀರೇಂದ್ರ ಕಳೆದ ಒಂಬತ್ತು ವರ್ಷಗಳಿಂದ ಬಾಲಕಿಯ ತಂದೆಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಗುರುವಾರ ಮಧ್ಯಾಹ್ನ ವೀರೇಂದ್ರ ಅಂಗಡಿಯಲ್ಲಿ ಕುಳಿತಿದ್ದ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿ ಕೊಲೆ ಮಾಡಿದ್ದಾನೆ. ಬಾಲಕಿಯನ್ನು ಕೊಂದು […]

2 weeks ago

ಕಾಲು ಜಾರಿ ಕೆರೆಗೆ ಬಿದ್ದು ಬಾಲಕ ಸಾವು

ಹಾವೇರಿ: ಕಾಲು ಜಾರಿ ಕೆರೆಗೆ ಬಿದ್ದು ಆರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ನಡೆದಿದೆ. ಚಂದ್ರು ಪಡೆಪ್ಪನವರ (6) ಮೃತ ಬಾಲಕ. ತಾಯಿ ಜೊತೆಗೆ ಬಾಲಕ ಚಂದ್ರು ಜಮೀನಿಗೆ ಹೋಗಿದ್ದನು. ತಾಯಿ ಕೆಲಸ ಮಾಡುತ್ತಿದ್ದ ವೇಳೆ ಚಂದ್ರು ಕೆರೆ ಕಡೆಗೆ ಹೋದಾಗ ಆಟವಾಡುತ್ತ ಕಾಲು ಜಾರಿ ಕೆರೆಗೆ...

ಗ್ರಾಮದೇವತೆ ಹಬ್ಬ ಮುಗಿಸಿ ವಾಪಸ್ಸಾಗುವಾಗ ಅಪಘಾತ- ಬೈಕ್ ಸವಾರರಿಬ್ಬರ ದುರ್ಮರಣ

2 weeks ago

ಮೈಸೂರು: ಬೈಕ್ ಮತ್ತು ಗೂಡ್ಸ್ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್‍ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಈ ಘಟನೆ ಶನಿವಾರ ಸಂಜೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ನಾಗನಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿಗಳನ್ನು ಮಹದೇವ್...

ಐಪಿಎಲ್ ಬೆಟ್ಟಿಂಗ್ ಮಾಡಿದ್ದೇನೆ: ತಪ್ಪೊಪ್ಪಿಕೊಂಡ ಅರ್ಬಾಜ್ ಖಾನ್

2 weeks ago

ಮುಂಬೈ: ಬಾಲಿವುಡ್ ನಟ ಅರ್ಬಾಜ್ ಖಾನ್ ಐಪಿಎಲ್ ಪಂದ್ಯದ ಬೆಟ್ಟಿಂಗ್ ನಲ್ಲಿ ಪಾಲ್ಗೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತನಿಖೆ ನಡೆಸುತ್ತಿರುವ ಥಾಣೆ ಪೊಲೀಸರು ಬೆಟ್ಟಿಂಗ್ ನ ಕಿಂಗ್ ಪಿನ್ ಜಲಾನ್ ನ ವಿಚಾರಣೆ ವೇಳೆ ಅರ್ಬಾಜ್ ಖಾನ್ ಹೆಸರು ಕೇಳಿಬಂದಿತ್ತು. ನಿನ್ನೆಯಷ್ಟೆ...

ಹಾಡಹಗಲೇ ಬಸ್ ನಿಲ್ದಾಣದಲ್ಲಿ ಮಾಂಗಲ್ಯ ಸರ ಎಗರಿಸಿದ ಕಳ್ಳ!

2 weeks ago

ಚಿತ್ರದುರ್ಗ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳ ಮಾಂಗಲ್ಯ ಸರವನ್ನು ಅಪಹರಿಸಿರುವ ಘಟನೆ ಚಿತ್ರದುರ್ಗದ ಬಸ್ ನಿಲ್ದಾಣದಲ್ಲಿ ನಡೆದಿದೆ. ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದ ನಿರ್ಮಲಾ ಎಂಬ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ರಾಣೆಬೆನ್ನೂರಿಗೆ ಹೊರಟಿದ್ದರು. ಬಸ್ಸು ಚಿತ್ರದುರ್ಗ...

ಬಿರುಗಾಳಿಯೊಂದಿಗೆ ಭಾರೀ ಮಳೆ- ಮರದ ಕೊಂಬೆ ಬಿದ್ದು ಯುವಕ ಸಾವು

2 weeks ago

ಚಿಕ್ಕಬಳ್ಳಾಪುರ: ಭಾರೀ ಬಿರುಗಾಳಿಗೆ ಬೃಹತ್ ಗಾತ್ರದ ಅರಳಿ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ, ಯುವಕನೊರ್ವ ಮೃತಪಟ್ಟ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ. ಹಿರೇಬಿದನೂರು ನಿವಾಸಿ ಅಂಜುಂ (20) ಮೃತ ಯುವಕ. ಗೌರಿಬಿದನೂರು-ಚಿಕ್ಕಬಳ್ಳಾಪುರ ಮಾರ್ಗದ ಸುಮಂಗಲಿ ಕಲ್ಯಾಣ ಮಂಟಪದ ಸಮೀಪದಲ್ಲಿ ಘಟನೆ ನಡೆದಿದೆ....

ನಿಯಂತ್ರಣ ತಪ್ಪಿ ಬೈಕ್ ಸಮೇತ ಬಾವಿಗೆ ಬಿದ್ದು ಸವಾರ ಸಾವು

2 weeks ago

ಚಿಕ್ಕೋಡಿ: ಸವಾರನೋರ್ವ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಮಠ ಗಲ್ಲಿಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ತಾತ್ಯಾಸಾಬ (58) ಪಾಟೀಲ ಬಾವಿಗೆ ಬಿದ್ದು ಸಾವನ್ನಪ್ಪಿರುವ ಮೃತ ದುರ್ದೈವಿ. ಟಿವಿಎಸ್ ಎಕ್ಸ್...

ಕೊಲೆ ಮಾಡಿ, ಶವವನ್ನು ಗೋಣಿ ಚೀಲಕ್ಕೆ ತುಂಬಿ ಕಾಲುವೆಗೆ ಹಾಕಿದ್ರು!

2 weeks ago

ಮಂಗಳೂರು: ಸುರತ್ಕಲ್‍ದ ಚೊಕ್ಕಬೆಟ್ಟು ಸೇತುವೆ ಕೆಳಗೆ ಗೋಣಿ ಚೀಲದಲ್ಲಿ ಶವವೊಂದು ಪತ್ತೆಯಾಗಿದ್ದು, ಕಾಲುವೆ ಮೂಲಕ ಶವ ಹರಿದು ಬಂದಿದೆ ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯ ಕಬ್ಬರಗಿ ನಿವಾಸಿ ಮರಿಯಪ್ಪ (50) ಶವವಾಗಿ ಪತ್ತೆಯಾಗಿದ್ದಾರೆ. ಮರಿಯಪ್ಪನನ್ನು ಬರ್ಬರವಾಗಿ ಹಲ್ಲೆ ಮಾಡಿ, ಕೊಂದು ಗೋಣಿಚೀಲದಲ್ಲಿ ಹಾಕಿ...