Sunday, 20th August 2017

Recent News

5 days ago

ವಿಡಿಯೋ: ಶ್ರೀಲಂಕಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಟೀಂ ಇಂಡಿಯಾ

ಕೊಲಂಬೋ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂದು ಭಾರತ ಕ್ರಿಕೆಟ್ ತಂಡ ಶ್ರೀಲಂಕಾದ ಕ್ಯಾಂಡಿಯಲ್ಲಿ ತ್ರಿವರ್ಣ ದ್ವಜವನ್ನು ಹಾರಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧ್ವಜವನ್ನ ಹಾರಿಸುತ್ತಿದ್ದಂತೆ ರಾಷ್ಟ್ರಗೀತೆಯ ವಾದ್ಯ ಮೊಳಗಿತು. ಇದರ ವಿಡಿಯೋವನ್ನ ಬಿಸಿಸಿಐ ಟ್ವಿಟ್ಟರ್ ಕಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಟೀಂ ಇಂಡಿಯಾ ಆಟಗಾರರು ಶ್ರೀಲಂಕಾ ಪ್ರವಾಸದಲ್ಲಿದ್ದು ಈಗಾಗಲೇ 3-0 ಅಂತರದಿಂದ ಟೆಸ್ಟ್ ಸರಣಿ ಗೆದ್ದಿದ್ದಾರೆ. ಸೋಮವಾರದಂದು ಭಾರತ ತಂಡ ಸರಣಿ ಗೆದ್ದಿದ್ದು, ವಿದೇಶಿ ನೆಲದಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿ ಸರಣಿ ಗೆದ್ದಿರುವುದು ಇದೇ ಮೊದಲು. […]

6 days ago

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ

ಬೆಂಗಳೂರು: ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂದು(ಆಗಸ್ಟ್, 14) ಅಪರೂಪದಲ್ಲಿ ಅಪರೂಪವೆನಿಸುವ ಘಟನೆಗೆ ಸಾಕ್ಷಿಯಾದ ದಿನ. ಈ ದಿನ ಕೇವಲ 4 ರನ್ ಗಳಿಸಿದ್ದರೆ ಡಾನ್ ಬ್ರಾಡ್ಮನ್ ವಿಶಿಷ್ಟವಾದ ದಾಖಲೆ ಬರೆಯುತ್ತಿದ್ದರು. 69 ವರ್ಷದ ಹಿಂದೆ ಈ ದಿನ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ 4 ರನ್ ಗಳಿಸಿದ್ದರೆ ಕ್ರಿಕೆಟ್ ಇತಿಹಾಸದಲ್ಲಿ ನೂರಕ್ಕೆ ನೂರಷ್ಟು ಸರಾಸರಿ ಹೊಂದಿದ್ದ ಏಕೈಕ...

ವಿಜಯಪುರಕ್ಕೆ ಆಗಮಿಸಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ ವಾಡ್

7 days ago

ವಿಜಯಪುರ: ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಇಂದು ಜಿಲ್ಲೆಗೆ ಆಗಮಿಸಿದ್ದಾರೆ. ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರು ರಾಜೇಶ್ವರಿಗೆ ಸನ್ಮಾನ ಮಾಡಿ ಆಶೀರ್ವಾದ ನೀಡಿದರು. ಬಾಲ್ಯದಿಂದಲೂ ಆಶ್ರಮದ ಭಕ್ತರಾಗಿರುವ ಗಾಯಕವಾಡ್ ಪೋಷಕರು...

ಶ್ರೀಲಂಕಾ ವಿರುದ್ಧ ಶಿಖರ್ ಧವನ್ ಶತಕ

1 week ago

ಕ್ಯಾಂಡಿ: ಶ್ರೀಲಂಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಭರ್ಜರಿ ಶತಕ ದಾಖಲಿಸಿದ್ದಾರೆ. 107 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ ಶಿಖರ್ ಧವನ್ ಶತಕ ಬಾರಿಸಿದರು. ಈ ಮೂಲಕ ಟೆಸ್ಟ್ ಜೀವನದ 6ನೇ ಶತಕವನ್ನು ಧವನ್ ದಾಖಲಿಸಿದರು....

ಮತ್ತೊಮ್ಮೆ ಈ ಫೋಟೋದಿಂದಾಗಿ ವಿವಾದಕ್ಕೀಡಾದ ಕ್ರಿಕೆಟಿಗ ಇರ್ಫಾನ್ ಪಠಾಣ್

1 week ago

ನವದೆಹಲಿ: ರಕ್ಷಾಬಂಧನದ ಪ್ರಯುಕ್ತ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್ ರಾಖಿ ಕಟ್ಟಿಸಿಕೊಂಡಿರುವ ಚಿತ್ರವನ್ನು ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಆ ಫೋಟೋಗೆ ಸಂಬಂಧಪಟ್ಟಂತೆ ಪರ ಮತ್ತು ವಿರೋಧದ ಕಮೆಂಟ್‍ಗಳು ಹರಿದು ಬರುವ ಮೂಲಕ ಇರ್ಫಾನ್ ಸುದ್ದಿಯಲ್ಲಿದ್ದಾರೆ. ರಕ್ಷಾ ಬಂಧನ ದಿನದಂದು...

ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ

3 weeks ago

ಬೆಂಗಳೂರು: ನಟ ಮತ್ತು ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ ಖ್ಯಾತ ಆಟಗಾರ ವಿಕಲಚೇತನ ಪ್ರತಿಭೆ ಧ್ರುವ ಶರ್ಮಾ ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಧ್ರುವ ಶರ್ಮಾ ಬೆಂಗಳೂರಿನ ಯಶವಂತಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 35 ವರ್ಷ ವಯಸ್ಸಾಗಿತ್ತು. ಇವರು ಸಿಸಿಎಲ್‍ನಲ್ಲಿ ಕರ್ನಾಟಕ...

ಮೊದಲ ಟೆಸ್ಟ್ ಪಂದ್ಯ ಗೆದ್ದು ಟೀಂ ಇಂಡಿಯಾ ದಾಖಲೆ!

3 weeks ago

ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 304 ರನ್ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದೆ. ಈ ಮೂಲಕ 3 ಟೆಸ್ಟ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ. 304 ರನ್ ಗಳ ಗೆಲುವು ವಿದೇಶದಲ್ಲಿ ಭಾರೀ ಅಂತರದ...

ಟೀಂ ಇಂಡಿಯಾಗೆ 498 ರನ್ ಭರ್ಜರಿ ಮುನ್ನಡೆ: ಶತಕದತ್ತ ಕೊಹ್ಲಿ!

3 weeks ago

ಗಾಲೆ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 3ನೇ ದಿನದಂತ್ಯಕ್ಕೆ 498 ರನ್ ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ದಿನದಾಟ ಮುಗಿದಾಗ ಭಾರತ 3 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ. ಶ್ರೀಲಂಕಾ ತಂಡ 291 ರನ್...