Saturday, 19th August 2017

Recent News

2 days ago

ಪೊಲೀಸ್‍ ನನ್ನೇ ಇರಿದು ಹಣ ದೋಚಿದ ಕಳ್ಳ

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಮುಖ್ಯಪೇದೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಣ, ಒಡವೆ ಹಾಗೂ ಮೊಬೈಲ್ ದೋಚಿಕೊಂಡು ಪರಾರಿಯಾಗಿರೋ ಘಟನೆ ನಡೆದಿದೆ. ಹಿರಿಯೂರು ತಾಲೂಕಿನ ಐಮಂಗಳ ಪೊಲೀಸ್ ಠಾಣೆಯ ಪ್ರಕಾಶ್ ಹಲ್ಲೆಗೊಳಗಾದ ಮುಖ್ಯ ಪೇದೆ. ಬುಧವಾರ ರಾತ್ರಿ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ತಮ್ಮ ದ್ವಿಚಕ್ರ ವಾಹನ ತರಲು ಹೋದಾಗ ಅಪರಿಚಿತನೊಬ್ಬ ಏಕಾಏಕಿ ದಾಳಿ ನಡೆಸಿದ್ದಾನೆ. ತನ್ನ ಬಳಿಯಿದ್ದ ಹುಕ್‍ನಿಂದ ಕಿವಿ, ಎದೆ ಭಾಗಕ್ಕೆ ಇರಿದಿದ್ದಾನೆ. ಪೊಲೀಸ್ ಪ್ರಕಾಶ್ ಬಳಿ ಇದ್ದ ಹನ್ನೊಂದು ಸಾವಿರ […]

2 days ago

ಆಟೋ-ಲಾರಿ ನಡುವೆ ಡಿಕ್ಕಿ- ನಾಲ್ವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಆಟೋ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಟ್ಟಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಬಳಿ ನಡೆದಿದೆ. ಹಿರಿಯೂರು ಪಟ್ಟಣದ ಸಮೀಪವಿರುವ ನಂಜಯ್ಯನ ಕೊಟ್ಟಿಗೆ ನಿವಾಸಿಗಳಾದ ಮನೋಹರ್, ಶರಣ್, ಮುತ್ತು ಹಾಗು ಮದಕರಿಪುರ ಗ್ರಾಮದ ನಿವಾಸಿ ಚಿದಾನಂದ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರ ಹೆಸರು ತಿಳಿದುಬಂದಿಲ್ಲ....

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕೊನೆಗೂ ತಾಯಿಯ ಮಡಿಲು ಸೇರಿದ ಮಗು

6 days ago

ಚಿತ್ರದುರ್ಗ: 10 ದಿನಗಳಿಂದ ಮಗುವನ್ನು ಕಳೆದುಕೊಂಡು ಹುಡುಕಾಡ್ತಿದ್ದ ಚಿತ್ರದುರ್ಗದ ದಂಪತಿಗೆ ಪಬ್ಲಿಕ್ ಟಿವಿ ವರದಿಯ ಫಲವಾಗಿ ಕೊನೆಗೂ ಮಗು ಸಿಕ್ಕಿದೆ. ಚಿತ್ರದುರ್ಗದ ಹಿರಿಯೂರಿನ ರವಿ ಹಾಗೂ ಸುಧಾ ದಂಪತಿಯ ನಾಲ್ಕು ವರ್ಷದ ನೇತ್ರಾ ದಿಢೀರ್ ಕಾಣೆಯಾಗಿದ್ಲು. 10 ದಿನಗಳ ಕಾಲ ಹುಡುಕಿ...

ಮನೆಬಾಗಿಲು ತಟ್ಟಿದ್ರೂ ತಲೆಕೆಡಿಸಿಕೊಳ್ಳದ ವೈದ್ಯೆ- ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 9ರ ಬಾಲಕಿ ದುರ್ಮರಣ!

1 week ago

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ರು. ಇದೀಗ ಮತ್ತೆ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ತೀವ್ರ ಉಸಿರಾಟದ ತೊಂದ್ರೆಯಿಂದ ತಡರಾತ್ರಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಐಶ್ವರ್ಯಳನ್ನ ಕರೆದುಕೊಂಡು ಬರಲಾಗಿತ್ತು. ತುರ್ತು ಚಿಕಿತ್ಸಾ...

ಅನಾಥನಾದ್ರೂ ಇವರು ನೂರಾರು ಹೆಣ್ಣುಮಕ್ಕಳಿಗೆ ಅಣ್ಣ

2 weeks ago

ಚಿತ್ರದುರ್ಗ: ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಠಿಯಿಂದ ನೋಡೋ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಇವರು ಮಾದರಿ. ಹುಟ್ಟುತ್ತಾ ಅನಾಥನಾದರೂ ನೂರಾರು ಹೆಣ್ಣು ಮಕ್ಕಳಿಗೆ ಅಣ್ಣ. ಇಂತಹ ಅಪರೂಪದ ಅಣ್ಣ ಜಿಲ್ಲೆಯಲ್ಲಿದ್ದಾರೆ. ಪ್ರತಿ ವರ್ಷ ರಕ್ಷಾ ಬಂಧನ ಸಮಯದಲ್ಲಿ ನೂರಾರು ಹೆಂಗಳೆಯರು ರಾಖಿ ಕಟ್ಟಿ...

ಚಿಕ್ಕಪ್ಪನಿಂದಲೇ ಮನೆಗೆ ಪೆಟ್ರೋಲ್ ಬಾಂಬ್ ಎಸೆತ- ದ್ವಿಚಕ್ರವಾಹನ ಭಸ್ಮ

2 weeks ago

ಚಿತ್ರದುರ್ಗ: ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ಎಸೆದ ಪರಿಣಾಮ ಮನೆಯ ಕಾಂಪೌಂಡಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರವಾಹನ ಭಸ್ಮವಾಗಿರೋ ಘಟನೆ ಚಿತ್ರದುರ್ಗ ನಗರದ ವಿಪಿ ಬಡಾವಣೆಯಲ್ಲಿ ನಡೆದಿದೆ. ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿರುವ ರವಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಒಂದು ಲಕ್ಷ ರೂಪಾಯಿ...

ಹನಿ ಮಳೆ ನೀರೂ ವೇಸ್ಟ್ ಮಾಡಲ್ಲ- ಜೀವಜಲದ ಮಹತ್ವದ ಬಗ್ಗೆ ಜಾಗೃತಿ ಮೂಡಿಸ್ತಿರೋ ಚಿತ್ರದುರ್ಗದ ನಾಗರಾಜ್

3 weeks ago

ಚಿತ್ರದುರ್ಗ: ಮಳೆಕೊಯ್ಲಿನ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಅದನ್ನ ಅಳವಡಿಕೆ ಮಾಡಿಕೊಂಡಿರೋದು ಬೆರಳೆಣಿಕೆಯಷ್ಟು ಮಂದಿ. ಹೀಗೆ, ನೀರಿನ ಮಹತ್ವ ತಿಳಿದು ಮಳೆಕೊಯ್ಲು ಪದ್ಧತಿ ಜೊತೆಗೆ ಮನೆಯಲ್ಲಿ ಬಳಸಿದ ನೀರನ್ನೂ ಸದ್ಬಳಕೆ ಮಾಡಿಕೊಳ್ತಿದ್ದಾರೆ ಚಿತ್ರದುರ್ಗದ ಪಬ್ಲಿಕ್ ಹೀರೋ ನಾಗರಾಜ್....

ಮಲ್ಲೇಶ್ವರಂ ಗೋಡೆಗಳ ಮೇಲೆ ದೃಶ್ಯಕಾವ್ಯ ಅರಳಿಸಿದ್ದ ಅದ್ಭುತ ಕಲಾವಿದ ಈಗ ಹಾಸಿಗೆ ಹಿಡಿದು ಕೇಳ್ತಿದ್ದಾರೆ ಸಹಾಯ

3 weeks ago

ಚಿತ್ರದುರ್ಗ: ಈ ವ್ಯಕ್ತಿ ಕೇವಲ ಚಿತ್ರಕಲಾವಿದರಲ್ಲ, ಬಹುಮುಖ ಪ್ರತಿಭೆ. ಯಾವುದೇ ಶಾಲಾ- ಕಾಲೇಜಿಗೆ ಹೋಗಿ ಕಲಿತವರಲ್ಲ. ಪ್ರವೃತ್ತಿಯಲ್ಲಿ ವನ್ಯಜೀವಿ ಛಾಯಾಗ್ರಾಹಕರು. ಸಾಹಸಿಗ, ಚಾರಣಿಗ, ಪರಿಸರ ಪ್ರೇಮಿ ಕೂಡ. ಇಂತಹ ಬಹುಮುಖ ಪ್ರತಿಭೆ ಈಗ ಹಾಸಿಗೆ ಹಿಡಿದಿದ್ದಾರೆ. ಜೀವನ ಬಂಡಿ ಸಾಗಿಸಲು ಆಗದೆ...