Tuesday, 27th June 2017

Recent News

18 hours ago

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ: ಬೈಕ್ ಸವಾರನ ದುರ್ಮರಣ

ಚಿಕ್ಕಬಳ್ಳಾಪುರ: ಕುಡಿದು ವಾಹನ ಚಲಾಯಿಸಬೇಡಿ ಅಂತ ಪೊಲೀಸರು ಎಷ್ಟೇ ಮನವಿ ಮಾಡಿಕೊಂಡ್ರು ಪ್ರಯೋಜನವಾಗುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಕಾರು ಚಾಲಕನೋರ್ವ ಕಂಠಪೂರ್ತಿ ಕುಡಿದು, ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಬೈಕ್ ಸವಾರನನ್ನು ಬಲಿತೆಗೆದುಕೊಂಡ ಘಟನೆ ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಬೈಪಾಸ್ ನಲ್ಲಿ ನಡೆದಿದೆ. ಬೆಂಗಳೂರಿನ ಬಿಡದಿ ನಿವಾಸಿ ಸ್ವರೂಪ್ (36) ಮೃತ ಬೈಕ್ ಸವಾರ. ಸ್ವರೂಪ್ ಹಾಗೂ ಲಾವಣ್ಯ ದಂಪತಿ ಆಂಧ್ರದ ಲೇಪಾಕ್ಷಿಗೆ ತೆರಳಿ, ಬೈಕ್‍ನಲ್ಲಿ ಬೆಂಗಳೂರಿಗೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ನಿವಾಸಿ […]

21 hours ago

ಹೆತ್ತವರ ಬುದ್ಧಿವಾದದಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಹೆತ್ತವರು ಚೆನ್ನಾಗಿ ಓದುವಂತೆ ಬುದ್ಧಿವಾದ ಹೇಳಿದಕ್ಕೆ ಮನನೊಂದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಫುರದ ಪ್ರಶಾಂತ ನಗರದಲ್ಲಿ ನಡೆದಿದೆ. 17 ವರ್ಷದ ಹರ್ಷಿತಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ್ದ ಈಕೆ ಪಿಯುಸಿ ಫೇಲ್ ಆಗಿದ್ದಳು.ಹೀಗಾಗಿ ಪೋಷಕರು ಪಿಯುಸಿ ಪೂರಕ ಪರೀಕ್ಷೆಗಾದರೂ ಚೆನ್ನಾಗಿ ಓದಿ ಪಾಸಾಗುವಂತೆ ಬುದ್ಧಿವಾದ ಹೇಳಿದ್ದರು. ಇದೇ...

ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು 8ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ

3 days ago

ಚಿಕ್ಕಬಳ್ಳಾಪುರ: ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಡಣದ ಕೊತ್ತಕೋಟೆ ರಸ್ತೆಯಲ್ಲಿ ನಡೆದಿದೆ. ಪುಷ್ಪಾ-ನಾಗರಾಜ್ ದಂಪತಿಯ ಪುತ್ರಿಯಾದ 14 ವರ್ಷದ ಮಧುರಿಮಾ ಆತ್ಮಹತ್ಯೆಗೆ ಶರಣಾದ ವಿಧ್ಯಾರ್ಥಿನಿ. ತಾಯಿ ಪುಷ್ಪಾ ಶಿಕ್ಷಕಿಯಾಗಿ...

ಇಡೀ ಕುಟುಂಬದ ಆತ್ಮಹತ್ಯೆಗೆ ಕಾರಣವಾಯ್ತು ಮಗನಿಗೆ ಬೈದ ಆ ಒಂದು ಬೈಗುಳ!

4 days ago

ಚಿಕ್ಕಬಳ್ಳಾಪುರ: ರೈಲಿಗೆ ಸಿಲುಕಿ ಹೆಂಡತಿ ಮತ್ತು ಮಗ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮನನೊಂದಿದ್ದ ಗಂಡನು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಸುಬ್ರಮಣಿ(45) ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದ ಮನೆಯಲ್ಲಿ ಶುಕ್ರವಾರ...

ನಿಂತಿದ್ದ ಟಿಪ್ಪರ್ ಗೆ ಟೆಂಪೋ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು, ನಾಲ್ವರ ಸ್ಥಿತಿ ಗಂಭೀರ

4 days ago

ಚಿಕ್ಕಬಳ್ಳಾಪುರ: ರಸ್ತೆ ಬದಿ ನಿಂತಿದ್ದ ಟಿಪ್ಪರ್ ಗೆ ಹಿಂದಿನಿಂದ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟು, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 7ರ ಚಿಕ್ಕಬಳ್ಳಾಪುರ ತಾಲೂಕು ಅರೂರು ಗೇಟ್ ಬಳಿ ನಡೆದಿದೆ. ಬಾಗೇಪಲ್ಲಿಯಿಂದ...

ಗುಂಡಿನ ದಾಳಿಯಲ್ಲಿ ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧ ವೀರಮರಣ

5 days ago

ಚಿಕ್ಕಬಳ್ಳಾಪುರ: ಕರ್ನಾಟಕ ಮೂಲದ ಬಿಎಸ್‍ಎಫ್ ಯೋಧರೊಬ್ಬರು ಗುಂಡಿನ ದಾಳಿಯಲ್ಲಿ ವೀರಮರಣವನ್ನಪ್ಪಿದ್ದಾರೆ. ಯಣ್ಣಂಗೂರು ಗ್ರಾಮದ ಗಂಗಾಧರ್ ಹುತಾತ್ಮರಾದ ಯೋಧ. ಇವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗ್ರಾಮದವರಾಗಿದ್ದು, ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಗಡಿಭಾಗದಲ್ಲಿ ವೀರಮರಣ ಹೊಂದಿದ್ದಾರೆ. ಮುನಿಯಪ್ಪ ಲಕ್ಷಮ್ಮ ದಂಪತಿಯ ಹಿರಿಯ...

ತನ್ನನ್ನು ರಕ್ಷಿಸಿದ ಉರಗ ತಜ್ಞನನ್ನೇ ಕಚ್ಚಿದ ನಾಗರಹಾವು- ವಿಡಿಯೋ ನೋಡಿ

1 week ago

ಚಿಕ್ಕಬಳ್ಳಾಪುರ: ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಿದ ಉರಗ ತಜ್ಞನನ್ನು ಅದೇ ಹಾವು ಕಚ್ಚಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹಾರೋಬಂಡೆ ಗ್ರಾಮದ ಬಳಿ ನಡೆದಿದೆ. ಪೃಥ್ವಿರಾಜ್ ಹಾವಿನಿಂದ ಕಚ್ಚಿಸಿಕೊಂಡ ಉರಗತಜ್ಞ. ಹಾರೋಬಂಡೆ ಗ್ರಾಮದ ರೈತ ನರೇಂದ್ರಬಾಬು ಎಂಬವರ ದ್ರಾಕ್ಷಿ ತೋಟದಲ್ಲಿನ ಬಲೆಗೆ...

ಚಿಕ್ಕಬಳ್ಳಾಪುರದಲ್ಲಿ ರೆಡಿಯಾಗಿದೆ ಗೋಲ್ಡ್ ಬ್ಲೌಸ್! ಬೆಲೆ ಎಷ್ಟು ಗೊತ್ತಾ?

1 week ago

ಚಿಕ್ಕಬಳ್ಳಾಪುರ: ಚಿನ್ನ ಅಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ.. ಅದರಲ್ಲೂ ಹುಡುಗಿಯರು ಚಿನ್ನ ಅಂದ್ರೆ ಪ್ರಾಣನೇ ಬಿಡ್ತಾರೆ. ಇಷ್ಟು ದಿನ ಬರೀ ಚಿನ್ನದ ಒಡವೆಗಳಿಗಷ್ಟೇ ಆಸೆ ಪಡ್ತಿದ್ದ ಹೆಣ್ಮಕ್ಕಳು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿನ್ನದ ಬ್ಲೌಸ್ ಮೇಲೂ...