Thursday, 22nd February 2018

Recent News

7 days ago

ನೀರಿಗಾಗಿ ಕಾಡುಪ್ರಾಣಿಗಳ ನಡುವೆ ಫೈಟ್ – ಹುಲಿಯನ್ನು ಅಟ್ಟಾಡಿಸಿ ಓಡಿಸಿತು ಆನೆ: ವಿಡಿಯೋ

ಚಾಮರಾಜನಗರ: ಬರಗಾಲ ಸಮೀಪಿಸುತ್ತಿದ್ದ ಹಾಗೆ ನಾಡಿನಲ್ಲಿ ಜನರ ನಡುವೆ ಮಾತ್ರವಲ್ಲದೇ ಕಾಡಿನಲ್ಲಿ ನೀರಿಗಾಗಿ ಪ್ರಾಣಿಗಳ ಮಧ್ಯ ಸಂಘರ್ಷ ಏರ್ಪಟ್ಟಿದೆ. ತನ್ನ ಅಳಿವಿಗೆ ಮನುಷ್ಯ ಮೃಗದಂತೆ ವರ್ತನೆ ಮಾಡುತ್ತಾನೆ, ಅದೇ ರೀತಿ ಸಾಧು ಪ್ರಾಣಿಯಂತಿರುವ ಕೆಲ ಪ್ರಾಣಿಗಳು ತಮ್ಮ ಉಳಿವಿಗಾಗಿ ಕ್ರೂರ ಮೃಗಗಳೊಂದಿಗೆ ಹೋರಾಟ ನಡೆಸುತ್ತವೆ. ಇದಕ್ಕೊಂದು ತಾಜ ಉದಾಹರಣೆ ಎಂಬಂತೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನೀರಿಗಾಗಿ ಹುಲಿಯನ್ನು ಆನೆಯೊಂದು ಅಟ್ಟಾಡಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಬಂಡಿಪುರ ಅರಣ್ಯದ ಬತ್ತಿ ಹೋಗುತ್ತಿರುವ ಕೆರೆಯೊಂದರಲ್ಲಿ […]

1 week ago

ಅಗಲಿದ ಮಡದಿಗಾಗಿ ದೇವಸ್ಥಾನ ಕಟ್ಟಿ, ಪ್ರತಿಮೆ ಮಾಡಿ ಪ್ರತಿನಿತ್ಯ ಆರಾಧಿಸ್ತಾರೆ ಚಾಮರಾಜನಗರದ ರಾಜು!

ಚಾಮರಾಜನಗರ: ಈಗಿನ ಕಾಲದಲ್ಲಿ ಪತ್ನಿ ಜೀವಂತವಾಗಿ ಇರುವ ಸಂದರ್ಭದಲ್ಲೇ ಆಕೆಗೆ ವಿಚ್ಛೇದನ ನೀಡಿ ಬೇರೊಬ್ಬಳ ಜೊತೆ ಜೀವನ ನಡೆಸುತ್ತಿರುವ ಪತಿಯರನ್ನು ಕಾಣಬಹುದು. ಆದ್ರೆ ಇಲ್ಲೊಬ್ಬರು ತನ್ನ ಪತ್ನಿ ಸಾವನ್ನಪ್ಪಿದ ನಂತರ ಸಮಾಧಿ ಬಳಿ ದೇವಸ್ಥಾನ ಕಟ್ಟಿಸಿ, ತನ್ನಾಕೆಯ ಪ್ರತಿಮೆಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಯಳಂದೂರು ತಾಲೂಕಿನ ಕೃಷ್ಣಪುರದ ನಿವಾಸಿ ರಾಜು ಹಾಗೂ ರಾಜಮ್ಮ ಪರಸ್ಪರ...

ಮದುವೆ ಮನೆಯಲ್ಲಿ ಭಾರತದ ಬಾವುಟ ಹಿಡಿದು ವಧು- ವರನ ಸಂಭ್ರಮ

3 weeks ago

ಚಾಮರಾಜನಗರ: ಭಾರತ ಕಿರಿಯರ ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಮದುವೆ ಮಂಟಪದಲ್ಲಿ ವಧು- ವರರು ವಿಭಿನ್ನವಾಗಿ ಸಂಭ್ರಮಿಸಿದ್ದಾರೆ. ಶನಿವಾರ ನಡೆದ ಕಿರಿಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದ ಹಿನ್ನೆಲೆಯಲ್ಲಿ ದೇಶದ್ಯಾಂತ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಆದರೆ ಚಾಮರಾಜನಗರದ ಭ್ರಮರಾಂಭ...

ಮಲೆ ಮಹದೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ- ಭಕ್ತರಿಂದ ಹರಿದುಬಂದ ಕಾಣಿಕೆ ಇಷ್ಟು

3 weeks ago

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 1 ಕೋಟಿ 11 ಲಕ್ಷದ 25 ಸಾವಿರದ 636 ರುಪಾಯಿ ನಗದು ಕಾಣಿಕೆಯಾಗಿ ದೊರತಿದೆ. ಇದರ ಜೊತೆಗೆ 25 ಗ್ರಾಂ ಚಿನ್ನ ಮತ್ತು 1...

2 ರಿಂದ 3 ನಿಮಿಷದ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನಿಟ್ಟಿದ್ದ ಹಾವು!

3 weeks ago

ಚಾಮರಾಜನಗರ: ಚಕ್ಕರ್ ಕಿಲ್ ಬ್ಯಾಕ್ ಜಾತಿಗೆ ಸೇರಿದ ಹಾವೊಂದು ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ 2 ರಿಂದ ಮೂರು ನಿಮಿಷದ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟು ಅಚ್ಚರಿ ಮೂಡಿಸಿದೆ. ಗ್ರಾಮದ ಮಹದೇವಪ್ಪ ಎಂಬುವವರ ಮನೆಯಲ್ಲಿ ಹಾವೊಂದು ಬಂದಿರುವ ಮಾಹಿತಿ ತಿಳಿದು...

ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದ 30 ಮಂದಿ ಪ್ರಯಾಣಿಕರಿದ್ದ ಬಸ್ – ಕಂಡಕ್ಟರ್ ಸಾವು, ಹಲವರು ಗಂಭೀರ

3 weeks ago

ಚಾಮರಾಜನಗರ: ಚಾಲಕನ ನಿದ್ದೆ ಮಂಪರಿನಿಂದ ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಡಕ್ಟರ್ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಬಳಿ ನಡೆದಿದೆ. ಇಂದು ಮುಂಜಾನೆ ಕೇರಳ ಸಾರಿಗೆ ಬಸ್ ಮೈಸೂರಿನಿಂದ ಕ್ಯಾಲಿಕೇಟಗೆ ಹೋಗುತ್ತಿತ್ತು. ಈ ಬಸ್ಸಿನಲ್ಲಿ ಸುಮಾರು...

ಲಾರಿ ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಓರ್ವ ಸಾವು, ಮೂವರಿಗೆ ಗಂಭೀರ ಗಾಯ

4 weeks ago

ಚಾಮರಾಜನಗರ: ಲಾರಿ ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದ ಬಳಿ ನಡೆದಿದೆ. ಮೈಸೂರು ಜಿಲ್ಲೆಯ ಬನ್ನೂರು ಗ್ರಾಮದ ನಂಜುಂಡಿ ಮೃತ ದುರ್ದೈವಿ. ಇಂದು ಬೆಳಿಗ್ಗೆ...

ಬಿಎಸ್‍ವೈ ಕಣ್ಣು ತೆರೆಸಿದ 9 ವರ್ಷದ ಬಾಲಕಿ

1 month ago

ಚಾಮರಾಜನಗರ: ಜಿಲ್ಲೆಯಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮದ ವೇಳೆ ಬಾಲಕಿಯೊಬ್ಬಳು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಿಗೆ ಪತ್ರ ನೀಡುವ ಮೂಲಕ ಕಣ್ಣು ತೆರೆಸಿದ್ದಾಳೆ. ಕಾರ್ಯಕ್ರಮ ನಡೆಯುವ ವೇಳೆ ಚಾಮರಾಜನಗರ ತಾಲೂಕಿನ ಬಂದಿಗೌಡನಹಳ್ಳಿ ಗ್ರಾಮದ ಕುಮಾರ್ ಎಂಬವರ 9 ವರ್ಷದ ಪುತ್ರಿ...