Monday, 20th November 2017

Recent News

20 hours ago

ಬೀದರ್ ನಲ್ಲಿ ವಾಹನ ಸವಾರನ ಮೇಲೆ ಮನಬಂದಂತೆ ಥಳಿಸಿದ ಪೊಲೀಸರು

ಬೀದರ್: ಸಿಲಿಕಾನ್ ಸಿಟಿಯಲ್ಲಿ ಎಸಿಪಿಯೊಬ್ಬರು ಹೋಟೆಲ್ ಮಾಲೀಕರಿಗೆ ಮನಬಂದಂತೆ ಥಳಿಸಿದ್ದ ಪ್ರಕರಣ ಮಾಸುವ ಮುನ್ನವೇ ವಾಹನ ಸವಾರರೊಬ್ಬರ ಮೇಲೆ ಬೀದರ್ ಪೊಲೀಸರು ಮನಬಂದಂತೆ ಥಳಿಸಿದ್ದಾರೆ. ಈ ಘಟನೆ ಬೀದರ್ ನಗರದ ಮೈಲೂರು ಕ್ರಾಸ್ ಬಳಿ ನಡೆದಿದೆ. ವಾಹನ ಸವಾರನ ಮೇಲೆ ಹಲ್ಲೆ ಮಾಡಿದ್ದಕ್ಕೆ ನೂರಾರು ಸಾರ್ವಜನಿಕರು ಸೇರಿ ಪೊಲೀಸರಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಒಂದು ಕಡೆ ವಾಹನ ಸವಾರರ ಮೇಲೆ ದರ್ಪ ತೋರಿದ್ದು ಒಂದು ಕಡೆಯಾದರೆ ಟ್ರಾಫಿಕ್ ರೂಲ್ಸ್ ಅನುಷ್ಠಾನ ಮಾಡುವಲ್ಲಿ ಪೊಲೀಸರು ವಿನಾಕಾರಣ ದರ್ಪ ತೋರುತ್ತಿದ್ದಾರೆ […]

1 day ago

ಈಜಲು ಹೋದ ಮೊರಾರ್ಜಿ ಕಾಲೇಜು ವಿದ್ಯಾರ್ಥಿ ನೀರು ಪಾಲು

ಬೀದರ್: ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಕಮಠಾಣದಲ್ಲಿರುವ ಮೊರಾರ್ಜಿ ಕಾಲೇಜಿನ ಸಮೀಪದಲ್ಲಿ ನಡೆದಿದೆ. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಶಿವಕುಮಾರ ಶ್ರೀಮಂತ (17) ಮೃತಪಟ್ಟಿರುವ ವಿದ್ಯಾರ್ಥಿ. ಶನಿವಾರ ಮಧ್ಯಾಹ್ನದ ಊಟ ಮಾಡಿ ಕಾಲೇಜಿನ ಹಿಂಬದಿಯಿರುವ ನೀರಿನ ಹೊಂಡದಲ್ಲಿ ಈಜಲು ಹೋಗಿದ್ದಾನೆ. ಆದರೆ ಈಜಲು ಬಾರದೇ ಹೊಂಡದಲ್ಲಿಯೇ ಮುಳುಗಿ ಸಾವನ್ನಪ್ಪಿದ್ದಾನೆ. ಶಿವಕುಮಾರ್ ಮಧ್ಯಾಹ್ನ...

ಬೀದರ್ ನಲ್ಲಿ ಲಘು ಭೂ ಕಂಪನ- ಚಳಿಯನ್ನು ಲೆಕ್ಕಿಸದೆ ರಾತ್ರಿ ಇಡೀ ಜಾಗರಣೆ

1 week ago

ಬೀದರ್: 3ನೇ ಬಾರಿ ಲಘು ಭೂಕಂಪ ಉಂಟಾಗಿದ್ದು, ಚಳಿಯನ್ನು ಲೆಕ್ಕಿಸದೆ ಗ್ರಾಮಸ್ಥರು ರಾತ್ರಿ ಇಡೀ ಜಾಗರಣೆ ಮಾಡಿರುವ ಘಟನೆ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಶಮ್ತಾಬಾದ್‍ನಲ್ಲಿ ನಡೆದಿದೆ. ರಾತ್ತಿ ಸುಮಾರು 2 ಗಂಟೆಯಿಂದ 9 ಬಾರಿ ಭೂ ಕಂಪಿಸಿದ ಅನುಭವ ಜನರಲ್ಲಿ ಉಂಟಾಗಿದೆ....

ಸ್ವಿಫ್ಟ್ ಕಾರ್ ಪಲ್ಟಿ- ಹಸೆಮಣೆ ಏರಬೇಕಿದ್ದ ನವಜೋಡಿ ಸೇರಿ ನಾಲ್ವರ ದುರ್ಮರಣ

2 weeks ago

ಬೀದರ್: ಹಸೆಮಣೆ ಏರಬೇಕಿದ್ದ ನವ ಜೋಡಿ ಸೇರಿ ನಾಲ್ವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಮನಾಬಾದ ತಾಲೂಕಿನ ಬಸವಂತಪುರ ಬಳಿ ನಡೆದಿದೆ. ಅಪಘಾತದಲ್ಲಿ ಮೃತ ಪಟ್ಟವರನ್ನು ಸಾವಿತ್ರಿ (45), ಅನುಸುಯಾ (50), ಪ್ರಿಯಾ (22) ಮತ್ತು ಹಣಮಂತ (23)...

ತುಂಬಿ ಹರಿವ ಹಳ್ಳದಲ್ಲೇ ಶವ ಹೊತ್ತೊಯ್ದು ಮಾಡ್ಬೇಕು ಅಂತ್ಯಕ್ರಿಯೆ- ಇದು ಬೀದರ್‍ನ ಧನ್ನೂರಿನ ದುಸ್ಥಿತಿ

2 weeks ago

ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಜನ ಪರದಾಡ್ತಿದ್ದಾರೆ. ಈ ಗ್ರಾಮದಲ್ಲಿ ಯಾರಾದ್ರೂ ಮೃತಪಟ್ಟರೆ ಅಂತ್ಯಕ್ರಿಯೆ ಮಾಡುವುದೇ ದೊಡ್ಡ ಸವಾಲಾಗಿದೆ. ಗುರುವಾರದಂದು ಗ್ರಾಮದ 56 ವರ್ಷದ ಖಾದರ್‍ಸಾಬ್ ಎಂಬ ವ್ಯಕ್ತಿ ಮೃತಪಟ್ಟಿದ್ರು. ಆದ್ರೆ ಅವರ ಅಂತ್ಯಕ್ರಿಯೆಗೆ ಚುಳಕಾನಾಲಾ ಜಲಾಶಯದಿಂದ...

ಡಿಪೋದಲ್ಲಿನ ವಸ್ತುಗಳಿಂದ ಗುಂಬಜ್ ನಿರ್ಮಿಸಿ ಕನ್ನಡಾಭಿಮಾನ ಮೆರೆದ KSRTC ಸಿಬ್ಬಂದಿ

3 weeks ago

ಬೀದರ್: ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳು ಗುಂಬಜ್ ನಿರ್ಮಿಸಿ ಕನ್ನಡಾಭಿಮಾನ ಮೆರೆದಿದ್ದಾರೆ. ಗಡಿ ಜಿಲ್ಲೆಯ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಅಷ್ಟೂರು ಗುಂಬಜ್ ನಿರ್ಮಾಣ ಮಾಡಿ ಕನ್ನಡದ ಹಬ್ಬಕ್ಕೆ ಸಮರ್ಪಣೆ ಮಾಡಿದ್ದಾರೆ. ಡಿಪೋದಲ್ಲಿನ ವಸ್ತುಗಳಿಂದ 20ಕ್ಕೂ ಹೆಚ್ಚು ಸಿಬ್ಬಂದಿಗಳು ಕಲಾವಿದರಾಗಿ ನಿರ್ಮಾಣ ಮಾಡಿದ ಅಪರೂಪದ...

ಮಗಳ ಆಪರೇಷನ್‍ಗೆಂದು ಆಸ್ಪತ್ರೆಗೆ ಬಂದಿದ್ದ ತಂದೆಗೆ ಸೆಕ್ಯೂರಿಟಿ ಗಾರ್ಡ್ ನಿಂದ ಹಲ್ಲೆ

3 weeks ago

ಬೀದರ್: ಮಗಳನ್ನು ಕರೆದುಕೊಂಡು ಚಿಕಿತ್ಸೆಗೆ ಬಂದಿದ್ದ ತಂದೆಯ ಮೇಲೆ ಸೆಕ್ಯೂರಿಟಿ ಗಾರ್ಡ್ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅವಮಾನವಿಯ ಘಟನೆ ನಡೆದಿದೆ. ಬಸವರಾಜ್ ಬಿರಾದರ್ ಹಲ್ಲೆಗೊಳ್ಳಗಾದ ವ್ಯಕ್ತಿ. ಬೀದರ್ ಜಿಲ್ಲಾ ಆಸ್ಪತ್ರೆಗೆ ತಮ್ಮ ಮಗಳ ಕಾಲು ಆಪರೇಷನ್‍ಗೆಂದು ಕರೆದುಕೊಂಡು ಹೋಗಿದ್ದರು. ಅಲ್ಲಿ ಬಸವರಾಜ್...

ಬೀದರ್‍ನಲ್ಲಿ ಛತ್ರಪತಿ ಶಿವಾಜಿಯ ಪುತ್ಥಳಿ ಧ್ವಂಸ- ಮರಾಠ ಸಮುದಾಯದಿಂದ ಪ್ರತಿಭಟನೆ

3 weeks ago

ಬೀದರ್: ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಔರಾದ ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ನಡೆದಿದೆ. ಬಾದಲಗಾಂವ ಗ್ರಾಮದ ಸರ್ಕಲ್‍ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಇತ್ತು. ಆದರೆ ತಡರಾತ್ರಿ ಸುಮಾರು 1.30 ಕ್ಕೆ ಕೀಡಿಗೇಡಿಗಳು ಶಿವಾಜಿ...