Thursday, 20th July 2017

Recent News

8 hours ago

ನೆಲಮಂಗಲದಲ್ಲಿ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್

ನೆಲಮಂಗಲ: ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಲಾಯಿತು. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಣ್ಣ ನೇತೃತ್ವದಲ್ಲಿ ರೌಡಿಗಳ ಪೆರೇಡ್ ನಡೆಸಲಾಯಿತು. ಇನ್ನೂ ಈ ಒಂದು ಪೆರೇಡ್ ನಲ್ಲಿ ಬಂಡೆ ಮಂಜ, ಬಂಡೆ ಮಂಜನ ಸಹೋದರ ಉಮೇಶ್, ಗಣೇಶನ ಗುಡಿ ರಂಗ, ಜಯನಗರದ ಕಾಸೀಮ್, […]

2 days ago

ಹಿರಿಯ ನಟಿ ಲೀಲಾವತಿ ಆಸ್ಪತ್ರೆ ಧ್ವಂಸ ಪ್ರಕರಣ- ಆರೋಗ್ಯ ಇಲಾಖೆಯಿಂದ ಆಸ್ಪತ್ರೆ ಭದ್ರತೆಗೆ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ

ಬೆಂಗಳೂರು: ಹಿರಿಯ ನಟಿ ಡಾ. ಲೀಲಾವತಿ ಅವರು ಬಡವರಿಗಾಗಿ ನಿರ್ಮಿಸಿದ್ದ ಆಸ್ಪತ್ರೆಯಲ್ಲಿ ಕಿಡಿಗೇಡಿಗಳ ದಾಂಧಲೆ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಡಿ.ಎಚ್.ಓ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗ್ರಾಮಾಂತರ ಪ್ರದೇಶದ ಬಡವರ ಅನುಕೂಲಕ್ಕಾಗಿ ಹಿರಿಯ ನಟಿ ಡಾ.ಲೀಲಾವತಿ ಸ್ವಂತ ಖರ್ಚಿನಲ್ಲಿ ಪ್ರಾಥಮಿಕ ಆಸ್ಪತ್ರೆಯನ್ನ ನಿರ್ಮಿಸಿದ್ದರು. ಆದರೆ ಕೆಲ ಕಿಡಿಗೇಡಿಗಳು ಆಸ್ಪತ್ರೆಯ ಮೇಲ್ಛಾವಣಿ ಒಡೆದು ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಔಷಧಿಗಳನ್ನ ಹೊರಗಡೆ...

ಗ್ಯಾಸ್ ಕಟರ್‍ನಿಂದ ಬ್ಯಾಂಕ್ ಕಿಟಕಿ ಸರಳುಗಳನ್ನ ಕಟ್ ಮಾಡಿ ದರೋಡೆಗೆ ಯತ್ನ

1 week ago

ಬೆಂಗಳೂರು: ಬ್ಯಾಂಕ್ ಕಿಟಕಿಯ ಸರಳುಗಳನ್ನ ಗ್ಯಾಸ್ ಕಟರ್ ಮೂಲಕ ಕಟ್ ಮಾಡಿ ಕಳ್ಳರು ದರೋಡೆಗೆ ಯತ್ನಿಸಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ನಡೆದಿದೆ. ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನಲ್ಲಿ ತಡರಾತ್ರಿ ಈ ಕೃತ್ಯ ನಡೆದಿದೆ. ಟಿ.ಬೇಗೂರು ಪೊಲೀಸ್...

ಬಾಸುಂಡೆ ಬರುವಂತೆ 6ನೇ ತರಗತಿ ವಿದ್ಯಾರ್ಥಿಗೆ ಹೊಡೆದ ಶಿಕ್ಷಕ

2 weeks ago

ನೆಲಮಂಗಲ: ಹುಷಾರಿಲ್ಲದ್ದಕ್ಕೆ ಶಾಲೆಯ ಕೊಠಡಿಯಲ್ಲಿ ಮಲಗಿದ್ದ ಕಾರಣಕ್ಕೆ ಸಿಟ್ಟಿಗೆದ್ದ ಶಿಕ್ಷಕ ವಿದ್ಯಾರ್ಥಿಯ ಮೈಯಲ್ಲಿ ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಮಾದರಿ ಸಕಾ9ರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನರಸಾಪುರ ಗ್ರಾಮದ ಜಗದೀಶ್ ಹಾಗೂ...

ಕ್ಯಾಂಟರ್-ಕಾರ್ ಮುಖಾಮುಖಿ ಡಿಕ್ಕಿ: ಓರ್ವ ಸಾವು

3 weeks ago

ಬೆಂಗಳೂರು: ಕ್ಯಾಂಟರ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಒರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ನೆಲಮಂಗಲ ತಾಲೂಕಿನ ಹೊಸನಿಜಗಲ್ ಬಳಿ ನಡೆದಿದೆ. 20 ವರ್ಷದ ಸಾಧಿಕ್ ಮಹಮದ್ ಮೃತ ದುರ್ದೈವಿ. ಕಾರಿನ ಟಯರ್ ಬ್ಲಾಸ್ಟ್...

ಕುಡಿದ ಮತ್ತಿನಲ್ಲಿ ಬಸ್ ಚಾಲನೆ: ಆಟೋಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿಯಾಗಿ ಓರ್ವ ಮಹಿಳೆ ಸಾವು

3 weeks ago

ಬೆಂಗಳೂರು: ಕುಡಿದ ಮತ್ತಿನಲ್ಲಿ ಬಸ್ ಚಾಲನೆ ಮಾಡಿದ ಪರಿಣಾಮ ಕೆಎಸ್‍ಆರ್‍ಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಮಹಿಳೆ ಸಾವನ್ನಪ್ಪಿರೋ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿ ನಡೆದಿದೆ. ಬಿಲ್ಲಿನಕೋಟೆ ಮೂಲದ 29 ವರ್ಷದ ದೇವಿಕಾ ಮೃತ ಮಹಿಳೆ. ನೆಲಮಂಗಲ ತಾಲೂಕಿನ...

ಪ್ರಿಯಕರ ಫೋನ್ ಕಾಲ್ ರಿಸೀವ್ ಮಾಡದ್ದಕ್ಕೆ ಮನನೊಂದು ನೇಣಿಗೆ ಶರಣು

4 weeks ago

ನೆಲಮಂಗಲ: ಪ್ರಿಯಕರ ಫೋನ್ ಕರೆ ಸ್ವೀಕರಿಸದ್ದಕ್ಕೆ ಮನನೊಂದ  ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿ ಬಳಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಮೂಲದ ರಿಜೀಯಾ ಕಾಟೂನ್ (19)ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ತಾಲೂಕಿನ ಟಿ.ಬೇಗೂರು ಬಳಿಯ ಅಂಬಿಕಾ...

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು- ನಾಲ್ವರು ಪ್ರಯಾಣಿಕರು ಪಾರು

4 weeks ago

ಬೆಂಗಳೂರು: ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿ ನಡೆದಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ಬಳಿ ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರಿಗೆ ಸಣ್ಣ...