Thursday, 14th December 2017

Recent News

14 hours ago

ದಾವಣಗೆರೆಯಲ್ಲಿ ಹಸು ಮೇಲೆ ಆನೆ ದಾಳಿ – ಆನೇಕಲ್ ಗಡಿಯಲ್ಲಿ ಬೀಡುಬಿಟ್ಟ 30ಕ್ಕೂ ಹೆಚ್ಚು ಆನೆಗಳು

ದಾವಣಗೆರೆ/ಬೆಂಗಳೂರು: ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಬೆಳಗಿನ ಜಾವದಿಂದ ಕಾಡಾನೆಗಳು ದಾಂಧಲೆ ನಡೆಸಿದ್ದು, ಹೊನ್ನಾಳಿ ಸಮೀಪ ಹಸುಗಳನ್ನ ತಿವಿದು ಗಾಯಗೊಳಿಸಿವೆ. ದೇವರಹೊನ್ನಾಳಿಯಲ್ಲಿ ಗ್ರಾಮದಲ್ಲಿ ಕಾಡಾನೆಗಳು ಎರಡು ಹಸುಗಳಿಗೆ ತೀವ್ರವಾಗಿ ಇರಿದಿವೆ. ಇದರಿಂದ ಹಸುವಿನ ಕರುಳು ಹೊರಬಂದಿದ್ದು, ಒದ್ದಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಾಡಾನೆ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವರಹೊನ್ನಾಳಿ ಗ್ರಾಮದ ಭರಮಪ್ಪ, ಬೆನಕನಹಳ್ಳಿ ಗ್ರಾಮದ ಮಳಲಿ ರಾಜಪ್ಪ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಹೊನ್ನಾಳಿ ತಾಲೂಕು ಆಸ್ಪತ್ರೆಗೆ […]

19 hours ago

ಅಪ್ಪ-ಮಗನಿಗಾಗಿ ವರುಣಾ, ಚಾಮುಂಡೇಶ್ವರಿ ಮೀಸಲು-ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್, ಬಿಜೆಪಿ ಒಂದಾಗುತ್ತಾ ?

ಬೆಂಗಳೂರು: ಪುತ್ರ ಯತೀಂದ್ರರ ರಾಜಕೀಯ ಭವಿಷ್ಯಕ್ಕಾಗಿ ಸಿಎಂ ಸಿದ್ದರಾಮಯ್ಯ ಸರ್ಕಸ್ ಆರಂಭಿಸಿದ್ದಾರೆ. ವರುಣಾ ಕ್ಷೇತ್ರದಲ್ಲೇ ಪುತ್ರನನ್ನು ಕಣಕ್ಕಿಳಿಸಲು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದು, ವರುಣಾ ಕ್ಷೇತ್ರದ ಮುಖಂಡರೊಂದಿಗೆ ವಾರದ ಹಿಂದೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ನನ್ನ ಮಗನ ಸ್ಪರ್ಧೆಗೆ 2018ರ ವಿಧಾನಸಭೆ ಚುನಾವಣೆ ಸರಿಯಾದ ಸಮಯ. ನಾನು ಸಿಎಂ ಆಗಿರೋದ್ರಿಂದ ಪಕ್ಷದಲ್ಲಿ ಎಲ್ಲವೂ...

ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ

1 day ago

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆ 2018ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಮಾರ್ಚ್ 01 ರಿಂದ 17 ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳು ನಡೆಯುವ ದಿನಾಂಕ ಮತ್ತು ವಿಷಯ: ಮಾರ್ಚ್ 1 – ಅರ್ಥಶಾಸ್ತ್ರ, ಭೌತಶಾಸ್ತ್ರ...

ಬೆಳಗೆರೆಗೆ ಜಾಮೀನು ಮಂಜೂರು: ಕೋರ್ಟ್ ಕಲಾಪದಲ್ಲಿ ಇಂದು ಏನಾಯ್ತು?

1 day ago

ಬೆಂಗಳೂರು: ಸಹೋದ್ಯೊಗಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣವನ್ನು ಎದುರಿಸುತ್ತಿರುವ ಹಾಯ್ ಬೆಂಗಳೂರು ಪತ್ರಿಕೆಯೆ ಸಂಪಾದಕ ರವಿ ಬೆಳಗೆರೆಗೆ ಕೋರ್ಟ್ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 65ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಬುಧವಾರ ಮಧ್ಯಾಹ್ನ ವಕೀಲ ದಿವಾಕರ್, ಬೆಳಗೆರೆ ಅವರು ತೀವ್ರ...

ಯಶೋಮತಿಯಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ- ಸುನಿಲ್ ಹೆಗ್ಗರವಳ್ಳಿ

1 day ago

ಬೆಂಗಳೂರು: ಮಾಧ್ಯಮದ ಮೂಲಕ ಪತ್ರಕರ್ತ ರವಿ ಬೆಳಗೆಯವರ ಪತ್ನಿ ಯಶೋಮತಿ ಅವರ ಫೇಸ್‍ಬುಕ್ ಸ್ಟೇಟಸ್ ನ್ನು ಗಮನಿಸಿದ್ದೇನೆ. ಸುನಿಲ್ ವಿರುದ್ಧದ ಹೇಳಿಕೆ ಅಂತ ನನಗನ್ನಿಸಿಲ್ಲ. ಆದ್ರೆ ಯಶೋಮತಿಯವರಿಂದ ಸಲಹೆ ಪಡೆಯುವಷ್ಟು ದಡ್ಡ ನಾನಲ್ಲ ಅಂತ ಸುನಿಲ್ ಹೆಗ್ಗರವಳ್ಳಿ ಪ್ರತಿಕ್ರಿಯಿಸಿದ್ದಾರೆ. ಕೊಲೆ ಸುಪಾರಿ...

ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ರೇಡ್

2 days ago

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ, ತುಮಕೂರು, ಮಂಗಳೂರು, ನೆಲಮಂಗಲ, ಬೆಳಗಾವಿ, ಧಾರವಾಡ ಹಾಗೂ ಬಳ್ಳಾರಿ ಮುಂತಾದ ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಅಕ್ರಮ ಆಸ್ತಿ...

ನವರಸನಾಯಕನಿಗೆ ‘ಥ್ಯಾಂಕ್ ಯು ಜಗ್ಗಣ್ಣ’ ಅಂದ್ರು ಗೋಲ್ಡನ್ ಸ್ಟಾರ್ ಗಣಿ

2 days ago

ಬೆಂಗಳೂರು: ಇಂದು ಬೆಳಗ್ಗೆ ನವರಸನಾಯಕ ಜಗ್ಗೇಶ್, ಗೋಲ್ಡನ್ ಸ್ಟಾರ್ ಅಭಿನಯದ ‘ಚಮಕ್’ ಸಿನಿಮಾಗೆ ಶುಭಕೋರಿ ಟ್ವೀಟ್ ಮಾಡಿದ್ದರು. ಟ್ವೀಟ್ ಗೆ ಪ್ರತಿಕ್ರಿಯಿಸಿದ ಗಣೇಶ್ `ಥ್ಯಾಂಕ್ ಯು ಜಗ್ಗಣ್ಣ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜಗ್ಗೇಶ್ ಟ್ವೀಟ್ ಬರೆದಿದ್ದು ಹೀಗೆ: ಗಣೇಶನ #ಚಮಕ್ ಚಿತ್ರ...

ರವಿ ಬೆಳಗೆರೆ ಆರೋಗ್ಯದಲ್ಲಿ ಏರುಪೇರು- ಜಯದೇವ ಹೃದ್ರೋಗ ಆಸ್ಪತ್ರೆಗೆ ಶಿಫ್ಟ್ ಮಾಡೋ ಸಾಧ್ಯತೆ

2 days ago

ಬೆಂಗಳೂರು: ರವಿ ಬೆಳಗೆರೆ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಉಸಿರಾಟದ ತೊಂದರೆ ಮತ್ತು ತೀವ್ರ ಬೆನ್ನು ನೋವು ಹಿನ್ನೆಲೆಯಲ್ಲಿ ಅವರನ್ನ ಆಸ್ಪತ್ರೆಗೆ ಶಿಫ್ಟ್ ಮಾಡೋ ಸಾಧ್ಯತೆಯಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಮಂಗಳವಾರ ಜೈಲಾಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವೈದ್ಯರು ರವಿ ಬೆಳಗೆರೆಯವರನ್ನು...