Tuesday, 22nd May 2018

Recent News

13 mins ago

2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನ ಸೋಲಿಸಲು ‘ತ್ರಿಶೂಲ ವ್ಯೂಹ’ ರಚನೆ

ಬೆಂಗಳೂರು: ದೊಡ್ಡ ಮಟ್ಟದ ರಾಜಕೀಯ ಮನ್ವಂತರಕ್ಕೆ ಕರ್ನಾಟಕ ಭೂಮಿಕೆಯಾಗಲಿದೆ ಅಂತ ಕಳೆದ ವಾರದವರೆಗೂ ಯಾರೊಬ್ಬರೂ ಊಹಿಸಿರಲಿಲ್ಲ. ಹೌದು, ರಾಷ್ಟ್ರ ರಾಜಕಾರಣದ ಸಂಭಾವ್ಯ ಬದಲಾವಣೆಗೆ ಮುನ್ನುಡಿ ಬರೆಯಲು ಕರ್ನಾಟಕ ಹೊರಟಿದೆ. ಕರ್ನಾಟಕದ ವರ್ತಮಾನದ ರಾಜಕೀಯ ವಿದ್ಯಮಾನವನ್ನೇ ಆಧಾರವಾಗಿಟ್ಟುಕೊಂಡು, ಮೋದಿ ವಿರುದ್ಧ ಮುನ್ನುಗ್ಗಲೇಬೇಕು ಎಂಬ ಛಲದಿಂದ ದೇಶದ ಬಿಜೆಪಿಯೇತರ ಮುಂಚೂಣಿ ನಾಯಕರೆಲ್ಲಾ ದೋಸ್ತಿ ಮಂತ್ರ ಜಪಿಸುತ್ತಾ ಬಿಗ್ ದಂಗಲ್ ಅಖಾಡಕ್ಕಿಳಿದಿದ್ದಾರೆ ಅಂತಾ ಹೇಳಲಾಗ್ತಿದೆ. ಕರ್ನಾಟಕವೂ ಸೇರಿದಂತೆ ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಹಾಘಟ ಬಂಧನ ಏರ್ಪಡುವ ಸಾಧ್ಯತೆ ನಿಚ್ಛಳವಾದಂತಿದೆ. ಬುಧವಾರ […]

1 hour ago

ಬಿಜೆಪಿಯ ಆಸೆಗೆ, ಜೆಡಿಎಸ್ ಗೇಟ್ ಹಾಕಿದೆ: ಶರವಣ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನ ಗೆದ್ದು ಹೆಬ್ಬಾಗಿಲು ಮಾಡಿಕೊಳ್ಳುವ ಬಿಜೆಪಿಯವರ ಆಸೆ ಈಡೇರಿಲ್ಲ. ಬಿಜೆಪಿಯವರ ಹೆಬ್ಬಾಗಿಲ ಆಸೆಗೆ ಜೆಡಿಎಸ್ ಗೇಟ್ ಹಾಕಿದೆ. 2018 ರಲ್ಲಿ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು 3 ತಿಂಗಳ ಹಿಂದೆಯೇ ನುಡಿದ ಭವಿಷ್ಯ ನಿಜವಾಗುತ್ತಿದೆ, ಹೀಗಾಗಿ ಈ ಬಾರಿ ಕಪ್ ನಮ್ದೇ ಎಂದು ಮುಂಚಿತವಾಗಿ ಸಿಹಿ ಹಂಚಿಕೆ ಮಾಡಿದ್ದೇವೆ ಎಂದು ಜೆಡಿಎಸ್...

ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬುಗೆ ಜಯನಗರ ಟಿಕೆಟ್

4 hours ago

ಬೆಂಗಳೂರು: ಕುತೂಹಲಕ್ಕೆ ಕಾರಣವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದಕ್ಕೆ ತೆರೆಬಿದ್ದಿದೆ. ಆದರೆ, ನಮಗೆ ಟೀಕೆಟ್ ನೀಡಬೇಕು ಎಂದು ಹಾಲಿ ಹಾಗೂ ಮಾಜಿ ಪಾಲಿಕೆ ಸದಸ್ಯರು ಪಟ್ಟು ಹಿಡಿದಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ವಿಜಯ್ ಕುಮಾರ್ ಅವರ ಸಹೋದರ...

ಮಹಿಳಾ ಟೆಕ್ಕಿಯನ್ನು ಅಡ್ಡಗಟ್ಟಿ ಕ್ರೌರ್ಯ ಮೆರೆದ ಕಾಮುಕರು

8 hours ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ಕಾಮಣ್ಣರ ಅಟ್ಟಹಾಸ ಮುಂದುವರೆದಿದೆ. ಸ್ನೇಹಿತನೊಂದಿಗೆ ಹೋಗುವಾಗ ಮಹಿಳಾ ಟೆಕ್ಕಿಯನ್ನು ಅಡ್ಡಗಟ್ಟಿ ಕಾಮುಕರು ಕ್ರೌರ್ಯ ಮೆರೆದ ಘಟನೆ ಇಂದಿರಾನಗರದ 100 ಫೀಟ್ ರಸ್ತೆಯಲ್ಲಿ ಮೇ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳಾ ಟೆಕ್ಕಿಯೊಬ್ಬರು ತನ್ನ ಸ್ನೇಹಿತನೊಂದಿಗೆ...

ಇಬ್ಬರು ಕೈ ಶಾಸಕರಿಗೆ `ಪವರ್’ ಫುಲ್ ಭದ್ರತೆ!

10 hours ago

ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಇನ್ನೂ ಕಾಡುತ್ತಿದೆಯಾ ಆಪರೇಷನ್ ಕಮಲ ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿಬರುತ್ತಿದೆ. ಯಾಕಂದ್ರೆ ಇಬ್ಬರು ಕೈ ಶಾಸಕರಿಗೆ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಭದ್ರತೆ ಒದಗಿಸುತ್ತಿದ್ದಾರೆ ಎಂಬ ವಿಚಾರವೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಮಸ್ಕಿ ಶಾಸಕ ಪ್ರತಾಪ್...

ಖಾಸಗಿ ವಿಡಿಯೋ ಅಪ್ಲೋಡ್ ಮಾಡ್ತೀನಿ: ದಂಪತಿಗೆ ಬೆದರಿಸಿದ ನಿರ್ದೇಶಕ ಅರೆಸ್ಟ್

11 hours ago

ಬೆಂಗಳೂರು: ದಂಪತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ನೀಡಿದ ನಿರ್ದೇಶಕ ಸೇರಿ ನಾಲ್ಕು ಮಂದಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ನಿರ್ದೇಶಕ ಸಂತೋಷ್, ಪ್ರಶಾಂತ್, ಸುರೇಶ್ ಹಾಗೂ ಪ್ರದೀಪ್ ಬಂಧಿತ ಆರೋಪಿಗಳು. ದಂಪತಿಯ ಖಾಸಗಿ ಕ್ಷಣಗಳ...

ಕಾಂಗ್ರೆಸ್-ಜೆಡಿಎಸ್ ಸಂಪುಟ ರಚನೆ ಕಸರತ್ತು- ಸಚಿವ ಸ್ಥಾನಕ್ಕೆ ಮುಂದುವರಿದ ಲಾಬಿ

13 hours ago

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಚನೆ ಸರ್ಕಸ್ ಮುಂದುವರಿದಿದೆ. ಸೋಮವಾರ ದೆಹಲಿಗೆ ತೆರಳಿದ್ದ ಎಚ್‍ಡಿ ಕುಮಾರಸ್ವಾಮಿ ರಾತ್ರಿ 11.30ಕ್ಕೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು. ಅಲ್ಲಿಂದ ನೇರವಾಗಿ ತಮ್ಮ ಪಕ್ಷದ ಶಾಸಕರು ತಂಗಿದ್ದ ನಂದಿಬೆಟ್ಟದ ರೆಸಾರ್ಟ್‍ಗೆ ತೆರಳಿ ದೆಹಲಿಯಲ್ಲಿ ನಡೆದ...

ಎಚ್‍ಡಿಕೆ ಪ್ರಮಾಣವಚನದ ಟೈಮ್ ಮತ್ತೆ ಬದಲು- ಸಮಾರಂಭಕ್ಕೆ ಮಳೆ ಅಡ್ಡಿ ಸಾಧ್ಯತೆ

14 hours ago

ಬೆಂಗಳೂರು: ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಗದ್ದುಗೆ ಏರಲು ಹೊರಟ ಎಚ್.ಡಿ ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಒಂದಲ್ಲಾ ಒಂದು ವಿಘ್ನ ಎದುರಾಗ್ತಾನೇ ಇದೆ. ಈಗಾಗಲೇ ಎರಡ್ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸುವ ಸ್ಥಳ ಬದಲಿಸಿದ ನಂತರ ಇದೀಗ ಸಮಯವನ್ನೂ ಬದಲಿಸಲಾಗಿದೆ. ಬುಧವಾರ...